ಕ್ರೀಡೆ

ಕಿರಿಯರ ತಂಡಕ್ಕೆ ಗ್ರೆಗ್ ಸಾರಥ್ಯ

Published On :

ನವದೆಹಲಿ: ದಕ್ಷಿಣ ಆಫ್ರಿಕಾದ ಮಾಜಿ ಒಲಿಂಪಿಯನ್ ಗ್ರೆಗ್ ಕ್ಲಾರ್ಕ್ ಭಾರತ ಜೂನಿಯರ್ ಹಾಕಿ ತಂಡದ ಮುಖ್ಯ ತರಬೇತುದಾರರಾಗಿ ಭಾನುವಾರ ನೇಮಕಗೊಂಡಿದ್ದಾರೆ. ಈ ವರ್ಷಾಂತ್ಯದಲ್ಲಿ ಜೂನಿಯರ್ ವಿಶ್ವಕಪ್ ನಡೆಯಲಿರುವ ಹಿನ್ನೆಲೆಯಲ್ಲಿ ಗ್ರೆಗ್ ಅವರನ್ನು ಆಯ್ಕೆ ಮಾಡಲಾಗಿದೆ.
ಹಾಕಿ ಇಂಡಿಯಾ ಲೀಗ್‌ನ ಉದ್ಘಾಟನಾ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆದ್ದುಕೊಂಡ ರಾಂಚಿ ರೋಹಿನಾಸ್ ತಂಡಕ್ಕೂ ಕ್ಲಾರ್ಕ್ ಮುಖ್ಯ ಕೋಚ್ ಆಗಿದ್ದಾರೆ. 42 ವರ್ಷದ ಗ್ರೆಗ್, ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡ ಸೇರಿದಂತೆ ಒಟ್ಟು 7 ವರ್ಷಗಳ ಕಾಲ ತರಬೇತಿ ನೀಡಿದ ಅನುಭವ ಹೊಂದಿದ್ದಾರೆ.
ಏಫ್ರಿಲ್ 13ರಿಂದ ಕ್ಲಾರ್ಕ್ ಭಾರತ ತಂಡದ ತರಬೇತುದಾರರಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. 'ಹಾಕಿ ಇಂಡಿಯಾ ಲೀಗ್‌ನ ಉದ್ಘಾಟನಾ ಪಂದ್ಯಾವಳಿಯಲ್ಲಿ ರಾಂಚಿ ರೋಹಿನಾಸ್ ತಂಡಕ್ಕೆ ತರಬೇತಿ ನೀಡಿದ ನಂತರ, ಭಾರತ ಹಾಕಿಗೆ ಉತ್ತಮ ಭವಿಷ್ಯವಿದೆ ಎಂದು ನನಗೆ ಅನಿಸುತ್ತಿದೆ. ತಂಡದ ಇನ್ನೊಬ್ಬ ತರಬೇತಿದಾರರಾಗಿರುವ ಲಾಲ್ಜೀತ್ ಸೈನಿ ಅವರೊಂದಿಗೆ ಜತೆಯಾಗಿ ಕಾರ್ಯನಿರ್ವಹಿಸಲು ಎದುರು ನೋಡುತ್ತಿದ್ದೇನೆ' ಎಂದಿದ್ದಾರೆ ಕ್ಲಾರ್ಕ್.
ಕ್ಲಾರ್ಕ್ 250 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. 1994ರಲ್ಲಿ ನಡೆದ ಸಿಡ್ನಿ ಮತ್ತು 2004ರಲ್ಲಿ ಕೌಲಾಲಂಪುರದಲ್ಲಿ ನಡೆದ ಎರಡು ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ 1998ರ ಅಟ್ಲಾಂಟಾ ಮತ್ತು 2004ರ ಅಥೇನ್ಸ್ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಕ್ಲಾರ್ಕ್ ಭಾಗವಹಿಸಿದ್ದಾರೆ.
'ಭಾರತ ವಿಶ್ವಕಪ್ ತಂಡದ ಆತಿಥ್ಯ ವಹಿಸಿಕೊಂಡಿರುವ ನಮಗೆ, ಪಂದ್ಯಾವಳಿಯಲ್ಲಿ ಅಗ್ರ ಮೂರು ಸ್ಥಾನಗಳಲ್ಲಿ ಒಂದು ಸ್ಥಾನ ಪಡೆಯಲು ಇದೊಂದು ಶ್ರೇಷ್ಠ ಅವಕಾಶವಾಗಿದೆ' ಎಂದು ಕ್ಲಾರ್ಕ್ ನೇಮಕ ಮಾಡಿದ ನಂತರ ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಬಾತ್ರಾ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.