ಜಿದ್ದಾಜಿದ್ದಿಗೆ ಕೆಕೆಆರ್, ರಾಯಲ್ಸ್ ಸಿದ್ಧ
ಜೈಪುರ: ಐಪಿಎಲ್ನ ಮೊದಲ ಆವೃತ್ತಿಚಾಂಪಿಯನ್ ರಾಜಸ್ಥಾನ್ ರಾಯಲ್ಸ್ ಹಾಗೂ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 6ನೇ ಆವೃತ್ತಿಯಲ್ಲಿ ಉತ್ತಮ ಆರಂಭ ಪಡೆದಿದ್ದಾರೆ. ಸೋಮವಾರ ಈ ಎರಡು ತಂಡಗಳು ಮುಖಾಮುಖಿಯಾಗಲಿದ್ದು, ತಮ್ಮ ಗೆಲುವಿನ ಲಯವನ್ನು ಮುಂದುವರಿಸಲು ಎದುರು ನೋಡುತ್ತಿದ್ದಾರೆ.
ಕೆಕೆಆರ್ ತಂಡ ತಮ್ಮ ಮೊದಲ ಪಂದ್ಯದಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ 6 ವಿಕೆಟ್ಗಳ ಜಯ ಸಾಧಿಸಿದ್ದು, ಇತ್ತ ರಾಜಸ್ಥಾನ್ ರಾಯಲ್ಸ್ ತಂಡ ಸಹ ತಮ್ಮ ಮೊದಲ ಪಂದ್ಯದಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ 5 ರನ್ಗಳ ಜಯ ಸಾಧಿಸಿದೆ.
ಎರಡೂ ತಂಡಗಳು ಜಯದೊಂದಿಗೆ ಪಂದ್ಯಾವಳಿಯನ್ನು ಆರಂಭಿಸಿದ್ದು, ಯಾರು ತಮ್ಮ ಗೆಲುವಿನ ಲಯ ಮುಂದುವರಿಸಲಿದ್ದಾರೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ರಾಯಲ್ಸ್ ತಂಡ ಈ ಪಂದ್ಯವನ್ನು ತವರಿನ ಅಂಗಳದಲ್ಲಿ ಆಡುತ್ತಿರುವುದು ಕೊಂಚ ಹೆಚ್ಚಿನ ಆತ್ಮವಿಶ್ವಾಸ ಹೊಂದಿದೆ. ಹಾಗಾಗಿ ರಾಯಲ್ಸ್ ತಂಡವನ್ನು ತವರಿನಲ್ಲಿ ಮಣಿಸಲು ಕೆಕೆಆರ್ ಯಾವ ರೀತಿ ರಣತಂತ್ರ ರೂಪಿಸಲಿದೆ ಎಂಬುದು ಎಲ್ಲರ ಮುಂದಿರುವ ಪ್ರಶ್ನೆ.
ಕೆಕೆಆರ್ ತಂಡದಲ್ಲಿ ಗಂಭೀರ್, ಮನ್ವಿಂದರ್ ಬಿಸ್ಲಾ, ಮೆಕಲಂ, ಜಾಕ್ ಕಾಲೀಸ್, ಯೂಸುಫ್ ಪಠಾಣ್ರಂತಹ ಬ್ಯಾಟ್ಸ್ಮನ್ಗಳ ಪಡೆ ಹಾಗೂ ಸುನಿಲ್ ನಾರಾಯಣ್, ಲಕ್ಷ್ಮಿಪತಿ ಬಾಲಾಜಿ, ಬ್ರೆಟ್ ಲೀ ಅವರನ್ನೊಳಗೊಂಡ ಬೌಲಿಂಗ್ ಪಡೆಯೂ ಉತ್ತಮವಾಗಿದ್ದು, ಆತ್ಮ ವಿಶ್ವಾಸದಲ್ಲೇ ಕಣಕ್ಕಿಳಿಯುತ್ತಿದೆ.
ಇತ್ತ ರಾಯಲ್ಸ್ ತಂಡದಲ್ಲಿ ನಾಯಕ ದ್ರಾವಿಡ್ ಮೊದಲ ಪಂದ್ಯದಲ್ಲಿ ಉತ್ತಮ ರನ್ಗಳಿಸಿದ್ದು ಫಾರ್ಮ್ನಲ್ಲಿರುವುದು ಸ್ಪಷ್ಟವಾಗಿದೆ. ಅಲ್ಲದೆ ಸ್ಟುವರ್ಟ್ ಬಿನ್ನಿ ಸ್ಪೋಟಕ ಬ್ಯಾಟಿಂಗ್ ರಾಯಲ್ಸ್ಗೆ ವರವಾಗಿ ಪರಿಣಮಿಸಿದೆ. ಇವರಿಬ್ಬರ ಜತಕೆಗೆ ರಹಾನೆ, ಬ್ರಾಡ್ ಹಾಡ್ಜ್, ಅಶೋಕ್ ಮನೇರಿಯಾ ಉತ್ತಮವಾಗಿ ಬ್ಯಾಟ್ ಬೀಸಬಲ್ಲರು.
ವ್ಯಾಟ್ಸನ್ ಆಗಮನ: ಮೊದಲ ಪಂದ್ಯದಲ್ಲಿ ಡೆವಿಲ್ಸ್ ವಿರುದ್ಧ ಆಡದ ಆರಂಭಿಕ ಬ್ಯಾಟ್ಸ್ಮನ್ ಶೇನ್ ವ್ಯಾಟ್ಸನ್ ಕೆಕೆಆರ್ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದ್ದು ರಾಯಲ್ಸ್ಗೆ ಮತ್ತಷ್ಟು ಬಲ ತಂದಿದೆ. ಆದರೆ ಮೊದಲ ಪಂದ್ಯದ ಅಂತಿಮ ಓವರ್ಗಳಲ್ಲಿ ಸತತವಾಗಿ ವಿಕೆಟ್ ಕಳೆದುಕೊಂಡಿದ್ದು, ರಾಯಲ್ಸ್ನ ದುರ್ಬಲತೆಯನ್ನು ತೋರಿದೆ. ಉತ್ತಮ ಆರಂಭ ಪಡೆದರೂ ಅಂತಿಮ ಓವರ್ನಲ್ಲಿ ವಿಕೆಟ್ಗಳನ್ನು ಕೈ ಚೆಲ್ಲಿದ ಕಾರಣ ಬೃಹತ್ ಮೊತ್ತವನ್ನು ಪೇರಿಸುವ ಅವಕಾಶ ಕಳೆದುಕೊಂಡಿತ್ತು. ಹಾಗಾಗಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಈ ತಪ್ಪನ್ನು ತಿದ್ದುಕೊಂಡರೆ ಮಾತ್ರ ರಾಯಲ್ಸ್ಗೆ ಗೆಲ್ಲುವ ಅವಕಾಶ ಸಿಗಲಿದೆ.
ಇತ್ತ ಕೋಲ್ಕತಾ ತಂಡದಲ್ಲಿ ಬ್ರೆಟ್ ಲೀ ಮೊದಲ ಪಂದ್ಯದಲ್ಲಿ 2 ವಿಕೆಟ್ ಪಡೆದರೂ ಹೆಚ್ಚು ರನ್ ನೀಡಿದ್ದಾರೆ ಅಲ್ಲದೇ ಬೌಲಿಂಗ್ ವಿಭಾಗದಲ್ಲಿ ನಾರಾಯಣ್ ಉತ್ತಮ ಪ್ರದರ್ಶನ ನೀಡಿದ್ದು, ಅವರಿಗೆ ಇತರರು ತಕ್ಕ ಸಾಥ್ ನೀಡುವ ಅಗತ್ಯವಿದೆ.
ಒಟ್ಟಿನಲ್ಲಿ ಎರಡೂ ತಂಡಗಳು ಬಲಿಷ್ಠ ತಂಡವಾಗಿದ್ದು ಮೊದಲನೇ ಪಂದ್ಯದಲ್ಲಿ ಗೆದ್ದಿದ್ದರೂ, ಕಳೆದ ಪಂದ್ಯದಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಇದು ಉತ್ತಮ ಅವಕಾಶವಾಗಿದೆ.
ತಂಡಗಳು
ರಾಜಸ್ಥಾನ್: ರಾಹುಲ್ ದ್ರಾವಿಡ್ (ನಾಯಕ), ಅಜಿಂಕ್ಯ ರಹಾನೆ, ಅಜಿತ್ ಚಾಂಡಿಲಾ, ಅಂಕಿತ್ ಚವಾಣ್, ಅಮಿತ್ ಸಿಂಗ್, ಅಶೋಕ್ ಮನೇರಿಯಾ, ಬ್ರಾಡ್ ಹಾಡ್ಜ್, ಬ್ರಾಡ್ ಹಾಗ್, ದಿಶಾಂತ್ ಯಗ್ನಿಕ್, ಫಿಡೆಲ್ ಎಡ್ವರ್ಡ್ಸ್, ಹರ್ಮೀತ್ ಸಿಂಗ್, ಜೇಮ್ಸ್ ಫಾಕ್ನರ್, ಕೆವಿನ್ ಕೂಪರ್, ಕುಶಾಲ್ ಜನಿತ್ ಪೆರೇರಾ, ಒವೈಸ್ ಶಾ, ಪ್ರವೀಣ್ ತಂಬೆ, ರಾಹುಲ್ ಶುಕ್ಲಾ, ಶ್ರೀಶಾಂತ್, ಸಚಿನ್ ಬೇಬಿ, ಸ್ಯಾಮ್ಯುಯೆಲ್ ಬದ್ರೀ, ಸಂಜು ಸ್ಯಾಮ್ಸನ್, ಶೇನ್ ವ್ಯಾಟ್ಸನ್, ಶಾನ್ ಟೈಟ್, ಶ್ರೀವತ್ಸ ಗೋಸ್ವಾಮಿ, ಸಿದ್ಧಾರ್ಥ್ ತ್ರಿವೇದಿ, ಸ್ಟುವರ್ಟ್ ಬಿನ್ನಿ.
ಕೆಕೆಆರ್: ಗೌತಮ್ ಗಂಭೀರ್ (ನಾಯಕ), ಇಯಾನ್ ಮಾರ್ಗನ್, ಮನೋಜ್ ತಿವಾರಿ, ದೇಬಬ್ರತಾ ದಾಸ್, ಬ್ರಾಡ್ ಹ್ಯಾಡಿನ್, ಮನ್ವಿಂದರ್ ಬಿಸ್ಲಾ, ಬ್ರೆಂಡನ್ ಮೆಕಲಂ, ಶಕೀಬ್ ಅಲ್ ಹಸನ್, ರಿಯಾನ್ ಟೆನ್ ಡಸ್ಕೇಟ್, ಜಾಕ್ ಕಾಲಿಸ್, ಯೂಸುಫ್ ಪಠಾಣ್, ಲಕ್ಷ್ಮೀ ರತನ್ ಶುಕ್ಲಾ, ರಜತ್ ಭಾಟಿಯಾ, ರಿಯಾನ್ ಮೆಕ್ಲಾರೆನ್, ಬ್ರೆಟ್ ಲೀ, ಜೇಮ್ಸ್ ಪ್ಯಾಟಿನ್ಸನ್, ಲಕ್ಷ್ಮೀಪತಿ ಬಾಲಾಜಿ, ಇಕ್ಬಾಲ್ ಅಬ್ದುಲ್ಲಾ, ಮಹಮ್ಮದ್ ಶಮಿ, ಪ್ರದೀಪ್ ಸಾಂಗ್ವಾನ್, ಸರಬ್ಜೀತ್ ಲಡ್ಡಾ, ಸುನಿಲ್ ನಾರಾಯಣ್, ಸಚಿತ್ರಾ ಸೇನಾನಾಯಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

