ಕ್ರೀಡೆ

ಪಂಜಾಬ್ ಶುಭಾರಂಭ

Published On :

ಪುಣೆ: ದುರ್ಬಲ ಬ್ಯಾಟಿಂಗ್ ಪ್ರದರ್ಶಿಸಿದ ಪುಣೆ ವಾರಿಯರ್ಸ್ ತಂಡ, ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 8 ವಿಕೆಟ್ ಅಂತರದಿಂದ ಹೀನಾಯವಾಗಿ ಸೋಲನುಭವಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಪುಣೆ ವಾರಿಯರ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 99 ರನ್ ಪೇರಿಸಿತು.
ಆರಂಭಿಕರಾಗಿ ಅಂಗಣಕ್ಕಿಳಿದ ಕರ್ನಾಟದ ರಾಬಿನ್ ಉತ್ತಪ್ಪ ಹಾಗೂ ಮನೀಷ್ ಪಾಂಡೆ ಉತ್ತಮ ಆರಂಭ ಒದಗಿಸಿಕೊಡುವಲ್ಲಿ ವೈಫಲ್ಯ ಕಂಡಿತು.
ಪಂದ್ಯದ ಮೊದಲ ಓವರ್‌ನಲ್ಲೇ ಪಾಂಡೆ, ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಪ್ರವಿಣ್ ಕುಮಾರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಪಾಂಡೆ ಶೂನ್ಯ ಸಂಪಾದನೆಗೆ ತಮ್ಮ ಇನಿಂಗ್ಸ್ ಮುಗಿಸಿದರು.
ನಂತರ ಬಂದ ಟಿ.ಸುಮನ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ, ಕೇವಲ 6 ರನ್‌ಗಳಿಸಿ ಔಟಾದರು. ನಂತರ ಬಂದ ಸ್ಯಾಮ್ಯುಯೆಲ್ಸ್, ಉತ್ತಪ್ಪ ಜತೆಗೂಡಿ ತಂಡಕ್ಕೆ 7 ರನ್‌ಸೇರಿಸಿದರು. ಈ ವೇಳೆ 2 ರನ್ ಗಳಿಸಿದ್ದ ಸ್ಯಾಮ್ಯುಯೆಲ್ಸ್, ಅನಾವಶ್ಯಕ ರನ್ ಪಡೆಯಲು ಮುಂದಾಗಿ ರನೌಟ್ ಆದರು.
ಈ ವೇಳೆ ದಾಳಿಗಿಳಿದ ಚಾವ್ಲಾ 19 ರನ್‌ಗಳಿಸಿದ್ದ ಉತ್ತಪ್ಪ ಅವರನ್ನು ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್ ಹಾದಿ ತೋರಿದರು.
ನಂತರ ಬಂದ ನಾಯಕ ಮ್ಯಾಥ್ಯೂಸ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಅವಾನ ಎಸೆತದಲ್ಲಿ ಕೀಪರ್‌ಗೆ ಕ್ಯಾಚ್ ನೀಡಿದ ಮ್ಯಾಥ್ಯೂಸ್, ಕೀಪರ್ ಗಿಲ್‌ಕ್ರಿಸ್ಟ್‌ಗೆ ಕ್ಯಾಚ್ ನೀಡಿದರು. ಈ ವೇಳೆಗೆ ತಂಡದ ಮೊತ್ತ 10 ಓವರ್‌ಗೆ 5 ವಿಕೆಟ್ ಕಳೆದುಕೊಂಡು ಕೇವಲ 38 ರನ್‌ಗಳಿಸಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ರಾಸ್ ಟೇಲರ್ ಗುರುಕೀರ್ತ್ ಸಿಂಗ್ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು. ನಿರೀಕ್ಷೆ ಮೂಡಿಸದ್ದಿ ಟೇಲರ್ 19 ಎಸೆತಗಳಲ್ಲಿ 15 ರನ್‌ಗಳಿಸಿ  ನಿರಾಸೆ ಮೂಡಿಸಿದರು. ಆಗ ಜತೆಯಾದ ಮಿಚೆಲ್ ಮಾರ್ಷ್ ಹಾಗೂ ನಾಯರ್ ಬಿರುಸಿನ ಆಟಕ್ಕೆ ಮುಂದಾದರು. ಆದರೆ ಸ್ಪೋಟಕ ಆಟಕ್ಕೆ ಮುಂದಾದ ಮಾರ್ಷ್, ಹ್ಯಾರಿಸ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ಉಳಿದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ಅಂತಿಮವಾಗಿ ಪುಣೆ ತಂಡ 99 ರನ್‌ಗಳನ್ನಷ್ಟೇ ಪೇರಿಸಿತು.
ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡ ಕೇವಲ 12.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.
ಆರಂಭಿಕರಾಗಿ ಕಣಕ್ಕಿಳಿದ ನಾಯಕ ಗಿಲ್‌ಕ್ರಿಸ್ಟ್ 10 ಎಸೆತಗಳಲ್ಲಿ 15 ರನ್‌ಗಳಿಸಿ ಮ್ಯಾಥ್ಯೂಸ್ ಎಸೆತದಲ್ಲಿ ಸ್ಯಾಮ್ಯುಯೆಲ್ಸ್‌ಗೆ ಕ್ಯಾಚ್ ನೀಡಿ ಹೊರ ನಡೆದರು. ನಂತರ ಮತ್ತೋರ್ವ ಆರಂಭಿಕ ಮನ್‌ದೀಪ್ ಸಿಂಗ್ 26 ಎಸೆತಗಳಲ್ಲಿ 31 ರನ್‌ಗಳಿಸಿ ರಾಹುಲ್ ಶರ್ಮಾ ಎಸೆತದಲ್ಲಿ ಬೌಲ್ಡ್ ಆದರು.
ನಂತರ ಜತೆಯಾದ ಮನನ್ ವೊಹ್ರಾ 28 ಎಸೆತಗಳಲ್ಲಿ 43 ಹಾಗೂ ಡೇವಿಡ್ ಹಸ್ಸಿ 11 ಎಸೆತಗಳಲ್ಲಿ 8 ರನ್‌ಗಳಿಸಿ ಅಜೇಯರಾಗುಳಿದು ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.


ಸ್ಕೋರ್ ಬೋರ್ಡ್

ಪುಣೆ ವಾರಿಯರ್ಸ್ 99/9 (20 ಓವರ್)
ಉತ್ತಪ್ಪ ಬಿ ಚಾವ್ಲಾ 19 (23), ಪಾಂಡೆ ಬಿ ಪ್ರವಿಣ್ 0 (4), ಸುಮನ್ ಸಿ ಪ್ರವಿಣ್ ಬಿ ಅಜರ್ 6 (14), ಸ್ಯಾಮ್ಯುಯೆಲ್ಸ್ ರನೌಟ್ (ಚಾವ್ಲಾ/ಗಿಲ್‌ಕ್ರಿಸ್ಟ್) 23(9), ಟೇಲರ್ ಸಿ ಗುರುಕೀರ್ತ್ ಬಿ ಪ್ರವಿಣ್ 15 (19), ಮ್ಯಾಥ್ಯೂಸ್ ಸಿ ಗಿಲ್‌ಕ್ರಿಸ್ಟ್ ಬಿ ಅವಾನ 4 (4), ನಾಯರ್ ಅಜೇಯ 25 (26), ಮಾರ್ಷ್ ಬಿ ಹ್ಯಾರಿಸ್ 15 (8), ಭುವನೇಶ್ವರ್ ಬಿ ಅಜರ್ 8 (12), ರಾಹುಲ್ ಶರ್ಮಾ ರನೌಟ್ (ಚಾವ್ಲಾ) 1 (1) ಇತರೆ 3.ವಿಕೆಟ್ ಪತನ: 1-1, 2-21, 3-29, 4-33, 5-38, 6-53, 7-78, 8-93, 9-99.
ಬೌಲಿಂಗ್: ಪ್ರವಿಣ್ 4-0-31-2, ಹ್ಯಾರೀಸ್ 4-0-12-1, ಅಜರ್ 4-0-19-2, ಅವಾನ 4-0-16-1, ಚಾವ್ಲಾ 4-0-19-1.
ಕಿಂಗ್ಸ್ ಇಲೆವೆನ್ ಪಂಜಾಬ್ 100/2 (12.2 ಓವರ್)
ಗಿಲ್‌ಕ್ರಿಸ್ಟ್ ಸಿ ಸ್ಯಾಮ್ಯುಯೆಲ್ಸ್ ಬಿ ಮ್ಯಾಥ್ಯೂಸ್ 15 (10), ಮನ್‌ದೀಪ್ ಸಿಂಗ್ ಬಿ ಶರ್ಮಾ 31 (26), ವೊಹ್ರಾ ಅಜೇಯ 43 (28), ಹಸ್ಸಿ ಅಜೇಯ 8 (11), ಇತರೆ 3. ವಿಕೆಟ್ ಪತನ: 1-21, 2-79.
ಬೌಲಿಂಗ್: ಭುವನೇಶ್ವರ್ 2-0-16-0, ದಿಂಡಾ 2-0-28-0, ಮ್ಯಾಥ್ಯೂಸ್ 2-0-12-1, ಮಾರ್ಷ್ 3.2-0-24-0, ಶರ್ಮಾ 3-0-20-1.

ಪಂದ್ಯಶ್ರೇಷ್ಠ: ಮನನ್ ವೋಹ್ರಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.