ಲಿಯೋನ್ ಎಟಿಪಿ ಚಾಲೆಂಜರ್: ದಿವಿಜ್- ಪುರುವ ರನ್ನರ್ಸ್ ಅಪ್
ಲಿಯೋನ್ (ಮೆಕ್ಸಿಕೋ): ಭಾರತದ ದಿವಿಜ್ ಶರಣ್ ಮತ್ತು ಪುರವ ರಾಜಾ ಜೋಡಿ, ಲಿಯೋನ್ ಎಟಿಪಿ ಚಾಲೆಂಜರ್ ಪಂದ್ಯಾವಳಿಯಲ್ಲಿ ರನ್ನರ್ಸ್ ಅಪ್ ಪ್ರಶಸ್ತಿ ತೃಪ್ತಿಪಟ್ಟಿತು. ಪಂದ್ಯಾವಳಿಯಲ್ಲಿ 4ನೇ ಶ್ರೇಯಾಂಕ ಪಡೆದಿದ್ದ ಭಾರತದ ಜೋಡಿ, ಫೈನಲ್ ಪಂದ್ಯದಲ್ಲಿ ಶ್ರೇಯಾಂಕ ಪಡೆಯದ ಆಸ್ಟ್ರೇಲಿಯಾದ ಕ್ರಿಸ್ ಗಾಸಿನೋ ಮತ್ತು ಮಟ್ ರೀಡ್ಸ್ ಜೋಡಿ ವಿರುದ್ಧ 3-6, 5-7 ನೇರ ಸೆಟ್ಗಳ ಅಂತರದಿಂದ ಪರಾಭವ ಹೊಂದಿತು.ದಿವಿಜ್ ಮತ್ತು ಪುರವ ಜೋಡಿ ಕಳೆದ ತಿಂಗಳು ನೆಡೆದ ಕ್ವೋಟೊ ಚಾಲೆಂಜರ್ನಲ್ಲಿ ಇದೇ ಜೋಡಿಯನ್ನು ಪರಾಭವಗೊಳಿಸಿತ್ತು. ಆದರೆ, ಈ ಪಂದ್ಯಾವಳಿಯಲ್ಲಿ ಕೈಚೆಲ್ಲಿದ್ದು, ಪ್ರಶಸ್ತಿಯಿಂದ ವಂಚಿತವಾಗುವಂತೆ ಮಾಡಿತು. ಈ ಪಂದ್ಯಾವಳಿಯಲ್ಲಿ ರನ್ನರ್ಸ್ ಅಪ್ ಪ್ರಶಸ್ತಿ ಪಡೆದ ಭಾರತದ ಜೋಡಿಗೆ 48 ರ್ಯಾಂಕಿಂಗ್ ಅಂಕಗಳು ದೊರಕಿದವು. ಮೊದಲ ಸೆಟ್ನ ಎರಡನೇ ಗೇಮ್ನಲ್ಲಿ ದಿವಿಜ್ ಸರ್ವ್ ವಿಫಲವಾದ ನಂತರ ಎದುರಾಳಿಯನ್ನು ಎದುರಿಸುವುದು ತುಂಬಾ ಕಷ್ಟದಾಯಕವಾಯಿತು. ಇನ್ನು ಎರಡನೇ ಸೆಟ್ನಲ್ಲಿ ಭಾರತದ ಜೋಡಿ ತೀವ್ರ ಪೈಪೋಟಿಯನ್ನು ನೀಡಿತು. 4ನೇ ಗೇಮ್ನಲ್ಲಿ ಮಟ್ ರೈಡ್ಸ್ ಸರ್ವ್ವನ್ನು ಅವರು ಮುರಿದರು. ಅಲ್ಲದೆ 5-3 ಅಂತರದಿಂದ ಮುನ್ನಡೆಯನ್ನೂ ಕಂಡುಕೊಂಡಿದ್ದರು. ಆದರೆ, ನಂತರ ಬಲಿಷ್ಠ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ಜೋಡಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

