ಸನ್ರೈಸರ್ಸ್ಗೆ ಸಾಧಾರಣ ಗುರಿ ನೀಡಿದ ಆರ್ಸಿಬಿ
ಹೈದರಾಬಾದ್: ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದ ಕ್ರೀಸ್ ಗೇಲ್ ಬೇಗನೆ ನಿರ್ಗಮಿಸುವ ಮೂಲಕ, ಭಾನುವಾರ ನಡೆದ ಐಪಿಎಲ್ನ 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ರೈಸರ್ಸ್ಗೆ 130 ರನ್ಗಳ ಸಾಧಾರಣ ಗುರಿ ನೀಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 130 ರನ್ಗಳಿಸಿತು. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಸನ್ರೈಸರ್ಸ್ ತಂಡದ ಬ್ಯಾಟಿಂಗ್ ಆರಂಭವಾಗಿರಲಿಲ್ಲ.
ಆರಂಭಿಕರಾಗಿ ಕಣಕ್ಕಿಳಿದ ಕ್ರಿಸ್ ಗೇಯ್ಲ್ ಹಾಗೂ ತಿಲಕರತ್ನೆ ದಿಲ್ಷಾನ್ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಕಳೆದ ಪಂದ್ಯದಲ್ಲಿ ಆರ್ಭಟಿಸಿದ್ದ ಕ್ರಿಸ್ ಗೇಯ್ಲ್ ಈ ಪಂದ್ಯದಲ್ಲಿ ಕೇವಲ 2 ಎಸೆತಗಳನ್ನು ಎದುರಿಸಿ 1 ರನ್ಗಳಿಸಿ ವಿಹಾರಿ ಎಸೆತದಲ್ಲಿ ಪಾರ್ಥೀವ್ಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು.
ಈ ವೇಳೆ ದಿಲ್ಷಾನ್ ಕೂಡ ಕೇವಲ 5 ರನ್ಗಳಿಸಿ ಇಶಾಂತ್ ಶರ್ಮಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ನಾಯರ್ 9 ಎಸೆತಗಳಲ್ಲಿ 9 ರನ್ಗಳಿಸಿ ಮಿಶ್ರಾ ಎಸೆತದಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ನಂತರ ಜತೆಗೂಡಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಹೆನ್ರಿಕೇಸ್ ತಂಡಕ್ಕೆ 43 ರನ್ಗಳ ಜತೆಯಾಟ ನೀಡಿದರು. ಈ ವೇಳೆ ಎಚ್ಚರ ತಪ್ಪಿದ ಕೊಹ್ಲಿ ಆಶಿಶ್ ರೆಡ್ಡಿಗೆ ಕಾಟ್ ಅಂಡ್ ಬೌಲ್ ಆಗುವ ಮೂಲಕ ಹೊರ ನಡೆದರು. ನಂತರ ಹೆನ್ರಿಕೇಸ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ 40 ಎಸೆತಗಳಲ್ಲಿ 44 ರನ್ಗಳಿಸಿ ತಂಡದ ಮೊತ್ತ ಏರಿಕೆಯಾಗುವಂತೆ ಮಾಡಿದರು. ಉಳಿದಂತೆ ಅಗರ್ವಾಲ್ 7, ಅರುಣ್ 0, ವಿನಯ್ 7, ಕಾರ್ತಿಕ್ ಅಜೇಯ 2 ಹಾಗೂ ಉನಾದ್ಕತ್ ಅಜೇಯ 1 ರನ್ಗಳಿಸಿದರು.
ಸ್ಕೋರ್ ಬೋರ್ಡ್
ರಾಯಲ್ ಚಾಲೆಂಜರ್ಸ್ ಬೆಂಗಳೂರು 130/8 (20 ಓವರ್)
ಗೇಯ್ಲ್ ಸಿ ಪಟೇಲ್ ಬಿ ವಿಹಾರಿ 1 (2), ದಿಲ್ಶಾನ್ ಬಿ ಇಶಾಂತ್ 5 (9), ಕೊಹ್ಲಿ ಸಿ ಮತ್ತು ಬಿ ಆಶಿಶ್ 46 (44), ನಾಯರ್ ಎಲ್ಬಿಡಬ್ಲ್ಯೂ ಮಿಶ್ರಾ 9 (9), ಹೆನ್ರಿಕೇಸ್ ಸಿ ವೈಟ್ ಬಿ ಶರ್ಮಾ 44 (40), ಅಗರ್ವಾಲ್ ಸಿ ಅಂಕಿತ್ ಬಿ ಸ್ಟೇಯ್ನ್ 7 (8), ಅರುಣ್ ಸಿ ಆಶಿಶ್ ಬಿ ಪೆರೇರಾ 0 (1), ವಿನಯ್ಸಿ ಸಂಗಕಾರ ಬಿ ಶರ್ಮಾ 7 (4), ಕಾರ್ತಿಕ್ ಅಜೇಯ 2 (2), ಉನಾದ್ಕತ್ ಅಜೇಯ 1 (1), ಇತರೆ 8
ವಿಕೆಟ್ ಪತನ: 1-8, 2-22, 3-42, 4-85, 5-108, 6-114, 7-125, 8-127
ಬೌಲಿಂಗ್: ಸ್ಟೇಯ್ನ್ 4-0-37-1, ವಿಹಾರಿ 1-0-5-1, ಇಶಾಂತ್ 4-0-27-3, ಅಂಕಿತ್ 2-0-17-0, ಪೆರೇರಾ 4-0-21-1, ಮಿಶ್ರಾ 4-0-15-1, ಆಶಿಶ್ 1-0-7-1
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

