ಕ್ರೀಡೆ

ಕೆಕೆಆರ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ರಾಯಲ್ಸ್

Published On :

ಜೈಪುರ: ಆರಂಭಿಕರ ವೈಫಲ್ಯದ ಹೊರತಾಗಿಯೂ ಬ್ರಾಡ್ ಹಾಡ್ಜ್ ಅವರ ಸಮಯೋಜಿತ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಿದೆ. ಈ ಎರಡು ತಂಡಗಳು ತಮ್ಮ ಮೊದಲೆರಡು ಪಂದ್ಯದಲ್ಲಿ ಗೆಲುವಿನ ಸಿಹಿ ಕಂಡಿದ್ದು, ಗೆಲುವಿನ ಲಯ ಮುಂದುವರಿಸಲು ಎದುರು ನೋಡುತ್ತಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದ ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 144 ರನ್‌ಗಳಿಸಿತು. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಕೆಕೆಆರ್ ಇನಿಂಗ್ಸ್ ಆರಂಭವಾಗಿರಲಿಲ್ಲ.
ಆರಂಭಿಕರಾಗಿ ಕಣಕ್ಕಿಳಿದ ಶೇನ್ ವ್ಯಾಟ್ಸನ್ ಹಾಗೂ ಅಜಿಂಕ್ಯ ರಹಾನೆ ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಕೊಡುವಲ್ಲಿ ವಿಫಲರಾದರು. 10 ಎಸೆತಗಳನ್ನು ಎದುರಿಸಿದ ವ್ಯಾಟ್ಸನ್ ಕೇವಲ 5 ರನ್‌ಗಳಿಸಿ ಔಟಾದರು.
ನಂತರ ಬಂದ ರಾಹುಲ್ ದ್ರಾವಿಡ್, ರಹಾನೆ ಜತೆಗೂಡಿ ತಂಡಕ್ಕೆ 35 ರನ್‌ಗಳ ಜತೆಯಾಟ ನೀಡಿದರು. ಈ ವೇಳೆ 17 ರನ್‌ಗಳಿಸಿದ್ದ ದ್ರಾವಿಡ್, ರಜತ್ ಭಾಟಿಯಾ ಎಸೆತದಲ್ಲಿ ಬೌಲ್ಡ್ ಆದರು.
ಈ ವೇಳೆ ಕಣಕ್ಕಿಳಿದ ಸ್ಟುವರ್ಟ್ ಬಿನ್ನಿ 11 ಎಸೆತಗಳಲ್ಲಿ 14 ರನ್‌ಗಳಿಸಿದರು. ರತನ್ ಶುಕ್ಲಾ ಎಸೆತದಲ್ಲಿ ಎಲ್‌ಬಿ ಡಬ್ಲ್ಯೂ ಬಲೆಗೆ ಬಿದ್ದ ಬಿನ್ನಿ, ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ನಂತರ ಬಂದ ಅನುಭವಿ ಬ್ಯಾಟ್ಸ್‌ಮನ್ ಬ್ರಾಡ್ ಹಾಡ್ಜ್, ರಹಾನೆ ಜತೆಗೂಡಿ 38 ರನ್‌ಗಳ ಜತೆಯಾಟವಾಡಿದರು. ಈ ವೇಳೆ 36 ರನ್‌ಗಳಿಸಿದ್ದ ರಹಾನೆ, ನಾರಾಯಣ್ ಎಸೆತದಲ್ಲಿ ಎಲ್‌ಬಿ ಡಬ್ಲ್ಯೂ ಆದರು. ನಂತರದ ಬಂದ ಕೂಪರ್, ಸ್ಟಂಪ್ ಔಟ್ ಆಗುವ ಮೂಲಕ 2ನೇ ಎಸೆತದಲ್ಲೇ ನಿರ್ಗಮಿಸಿದರು. ನಂತರ ಹಾಡ್ಜ್ ಜತೆಯಾದ ಯಾಗ್ನಿಕ್ ತಂಡಕ್ಕೆ 35 ರನ್‌ಗಳ ಜತೆಯಾಟ ನೀಡಿದರು. ಈ ವೇಳೆ 16 ರನ್‌ಗಳಿಸಿದ ಯಾಗ್ನಿಕ್ ರನೌಟ್ ಆದರು. ಅಂತಿಮವಾಗಿ ರಾಯಲ್ಸ್ 144 ರನ್‌ಗಳಿಸಿತು.
ಸ್ಕೋರ್ ಬೋರ್ಡ್
ರಾಜಸ್ಥಾನ್ ರಾಯಲ್ಸ್ 144/6 (20 ಓವರ್)
ವ್ಯಾಟ್ಸನ್ ಸಿ ಮಾರ್ಗನ್ ಬಿ ಬ್ರೆಟ್ ಲೀ 5 (10), ರಹಾನೆ ಎಲ್‌ಬಿ ಡಬ್ಲ್ಯೂ ಬಿ ನಾರಾಯಣ್ 36 (34), ದ್ರಾವಿಡ್ ಬಿ ಭಾಟಿಯಾ 17 (20), ಬಿನ್ನಿ ಎಲ್‌ಬಿ ಡಬ್ಲ್ಯೂ ಬಿ ರತನ್ ಶುಕ್ಲಾ 14 (11), ಹಾಡ್ಜ್ ಅಜೇಯ 46 (31), ಕೂಪರ್ ಸ್ಟಂಪ್ ಬಿಸ್ಲಾ ಬಿ ನಾರಾಯಣ್ 0 (1), ಯಾಗ್ನಿಕ್ ರನೌಟ್ 16 (11), ಶ್ರೀಶಾಂತ್ ಅಜೇಯ 1 (2), ಇತರೆ 9
ವಿಕೆಟ್ ಪತನ: 1-11, 2-46, 3-63, 4-101, 5-101, 6-137
ಬೌಲಿಂಗ್: ಬ್ರೆಟ್ ಲೀ 4-0-20-1, ಶಮಿ 3-0-26-0, ನಾರಾಯಣ್ 4-0-28-2, ಕಾಲಿಸ್ 4-0-28-0, ಭಾಟಿಯಾ 3-0-21-1, ಶುಕ್ಲಾ 2-0-14-1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.