ಕ್ರೀಡೆ

ಗೆಲುವಿನ ಕನವರಿಕೆಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್

Published On :

ಮುಂಬೈ: ಈ ಬಾರಿಯ ಐಪಿಎಲ್‌ನಲ್ಲಿ ಆರಂಭಿಕ ಎರಡೂ ಪಂದ್ಯಗಳನ್ನು ಸೋತು ಕಂಗೆಟ್ಟಿರುವ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಮಂಗಳವಾರ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ತಮ್ಮ ಮೊದಲ ಪಂದ್ಯದಲ್ಲಿ ಕೆಕೆಆರ್ ತಂಡದ ಪರ 6 ವಿಕೆಟ್‌ಗಳ ಅಂತರದಲ್ಲಿ ಸೋಲು ಕಂಡಿದ್ದ ಡೆವಿಲ್ಸ್, ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 5 ರನ್‌ಗಳ ಸೋಲನುಭವಿಸಿತ್ತು.
ತಂಡದ ಬ್ಯಾಟಿಂಗ್ ನಾಯಕ ಜಯವರ್ಧನೆ ಹಾಗೂ ಡೇವಿಡ್ ವಾರ್ನರ್ ಮೇಲೆ ಹೆಚ್ಚು ಅವಲಂಬನೆಯಾಗಿದೆ. ಉಳಿದ ಬ್ಯಾಟ್ಸ್‌ಮನ್‌ಗಳಾದ ರಸ್ಸೆಲ್, ಉನ್ಮುಕ್ತ್ ಚಾಂದ್, ಯೋಗೇಶ್ ನಾಯರ್ ನಮನ್ ಓಜಾ, ಇರ್ಫಾನ್ ಪಠಾಣ್ ರನ್‌ಗಳಿಸದಿರುವುದು ಡೆಲ್ಲಿ ತಂಡಕ್ಕೆ ಆತಂಕ ಹೆಚ್ಚುವಂತೆ ಮಾಡಿದೆ.
ಅಲ್ಲದೆ ಮೊದಲೆರಡು ಪಂದ್ಯಗಳಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಬೆನ್ನು ನೋವಿನಿಂದಾಗಿ ತಂಡದಿಂದ ಹೊರಗುಳಿದಿರುವುದು ತಂಡಕ್ಕೆ ಹಿನ್ನಡೆ ತಂದಿದೆ. ಆದರೆ ಡೆವಿಲ್ಸ್ ಮೂರನೇ ಪಂದ್ಯದಲ್ಲಿ ಸೆಹ್ವಾಗ್ ಅವರು ತಂಡಕ್ಕೆ ವಾಪಸ್ಸಾಗುವ ನಿರೀಕ್ಷೆಯಲ್ಲಿದೆ.
ಇನ್ನು, ಬೌಲಿಂಗ್ ವಿಭಾಗದಲ್ಲಿ ಅಗರ್ಕರ್, ಜೊಹಾನ್ ಬೋತಾ, ರಸ್ಸೆಲ್, ಇರ್ಫಾನ್ ರಂತಹ ಆಟಗಾರರು ಉತ್ತಮ ಪ್ರದರ್ಶನ ತೋರದಿರುವು ತಂಡಕ್ಕೆ ತಲೆನೋವಾಗಿ ಪರಿಣಮಿಸಲಿದೆ.
ಮೊದಲ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಸೋಲನುಭವಿಸಿದ್ದ ಮುಂಬೈ, ಎರಡನೇ ಪಂದ್ಯದಲ್ಲಿ ಚೆನ್ನೈ ವಿರುದ್ಧ ಜಯ ಸಾಧಿಸಿ ಗೆಲುವಿನ ಲಯ ಕಂಡುಕೊಂಡಿದೆ. ಅಲ್ಲದೇ ಈ ಪಂದ್ಯವನ್ನು ತವರಿನಲ್ಲೇ ಆಡುತ್ತಿರುವುದರಿಂದ ಇದರ ಲಾಭ ಪಡೆಯಲಿದೆ.

ಮುಂಬೈ ಇಂಡಿಯನ್ಸ್: ರಿಕಿ ಪಾಂಟಿಂಗ್ (ನಾಯಕ), ತೆಂಡೂಲ್ಕರ್, ಅಬು ನಚಿಮ್, ಅಮಿತೊಜ್ ಸಿಂಗ್, ಐಡೆನ್ ಬ್ಲಿಜರ್ಡ್, ಯುಜ್ವೆಂದ್ರ ಚಾಹಲ್, ನೇಥನ್ ಕೌಲ್ಟರ್ ನೆಲ್, ರಿಶಿ ಧವನ್, ಜೇಮ್ಸ್ ಫ್ರಾಂಕ್ಲಿನ್, ಹರ್ಭಜನ್ ಸಿಂಗ್, ಫಿಲಿಪ್ ಹ್ಯೂಸ್, ಮಿಚ್ಚೆಲ್ ಜಾನ್ಸನ್, ದಿನೇಶ್ ಕಾರ್ತಿಕ್, ದವಳ್ ಕುಲಕರ್ಣಿ, ಲಸಿತ್ ಮಾಲಿಂಗಾ, ಸುಶಾಂತ್ ಮರಾತೆ, ಗ್ಲೆನ್ ಮ್ಯಾಕ್ಸ್‌ವೆಲ್, ಪ್ರಗ್ಯಾನ್ ಓಜಾ, ಜೇಕಬ್ ಓರಂ, ಅಕ್ಷರ್ ಪಟೇಲ್, ಮುನಾಫ್ ಪಟೇಲ್, ಕೀರನ್ ಪೊಲಾರ್ಡ್, ಅಂಬಟಿ ರಾಯುಡು, ಜಲಜ್ ಸಕ್ಸೇನಾ, ರೋಹಿತ್ ಶರ್ಮಾ, ಡ್ವೇನ್ ಸ್ಮಿತ್, ಪವನ್ ಸುಯಾಲ್, ಆದಿತ್ಯ ತಾರೆ, ಸೂರ್ಯ ಕುಮಾರ್ ಯಾದವ್.

ಡೇರ್ ಡೆವಿಲ್ಸ್: ಜಯವರ್ಧನೆ (ನಾಯಕ),  ಸೆಹ್ವಾಗ್, ವಾರ್ನರ್, ಮನ್‌ಪ್ರೀತ್ ಜುನೇಜಾ, ವರುಣ್ ಆ್ಯರನ್, ಅಗರ್ಕರ್, ಗುಲಬ್ ಬೋಡಿ, ಜೊಹಾನ್ ಬೊತಾ, ಉನ್ಮುಕ್ತ್ , ರಾಯ್‌ಸ್ಟನ್ ಡಯಾಸ್, ಸಿ.ಎಂ.ಗೌತಮ್, ಕೇದಾರ್ ಜಾದವ್, ಸಿದ್ದಾರ್ತ್ ಕೌರ್, ಮೆಂಡಿಸ್, ಮಾರ್ನೆ ಮಾರ್ಕೆಲ್, ಶಹ್‌ನಾಬ್ ನದೀಂ, ಯೋಗೇಶ್ ನಾಯರ್, ಸುಜಿತ್ ನಾಯಕ್, ಪವನ್ ನೇಗಿ, ನಮನ್ ಓಜಾ, ಇರ್ಫಾನ್ ಪಠಾಣ್,  ಆ್ಯಂಡ್ರೂ ರಸೆಲ್, ಅರ್ಷಿತ್ ಸಿಂಗ್ವಿ, ವಾನ್ ಡರ್ ಮರ್ವೆ, ವೇಣುಗೋಪಾಲ್ ರಾವ್, ಉಮೇಶ್ ಯಾದವ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.