ಕ್ರೀಡೆ

ಡೇರ್ ಡೆವಿಲ್ಸ್‌ಗೆ ದಿನೇಶ್ ದಂಡನೆ

Published On :

ಮುಂಬೈ: ಆರಂಭಿಕ ಆಘಾತ ಅನುಭವಿಸಿದ ನಂತರ ರನ್ ಮಳೆ ಸುರಿಸಿದ ದಿನೇಶ್ ಕಾರ್ತಿಕ್ (86) ಹಾಗೂ ರೋಹಿತ್ ಶರ್ಮಾ (74) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಡೇರ್‌ಡೆವಿಲ್ಸ್‌ಗೆ 210 ರನ್‌ಗಳ ಬೃಹತ್ ಸವಾಲೊಡ್ಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 209 ರನ್ ಪೇರಿಸಿತು. ಪಾಂಟಿಂಗ್ ಮೊದಲ ಓವರ್‌ನಲ್ಲೇ ಶೂನ್ಯ ಸಂಪಾದನೆಯೊಂದಿಗೆ ಇರ್ಫಾನ್ ಪಠಾಣ್‌ಗೆ ವಿಕೆಟ್ ಒಪ್ಪಿಸಿದರೆ, ಎರಡನೇ ಓವರ್‌ನಲ್ಲಿ ಜಯವರ್ಧನೆಯವರ ಚುರುಕಿನ ಕ್ಷೇತ್ರ ರಕ್ಷಣೆಯಿಂದ ರನೌಟ್ ವೆಕೆಟ್ ತೆತ್ತರು. ನಂತರ ಜತೆಯಾದ ದಿನೇಶ್ ಕಾರ್ತಿಕ್ ಹಾಗೂ ರೋಹಿತ್ ಶರ್ಮಾ ಜತೆಯಾಟದಲ್ಲಿ 3ನೇ ವಿಕೆಟ್ 132 ರನ್ ಪೇರಿಸುವ ಮೂಲಕ ತಂಡಕ್ಕೆ ಆಶ್ರಯವಾದರು. ಹೊಡಿಬಡಿ ಆಟಕ್ಕೆ ಮುಂದಾಗಿ 48 ಎಸೆತಗಳನ್ನು ಎದಿರಿಸಿದ ದಿನೇಶ್ ಮೊತ್ತದಲ್ಲಿ 2 ಸಿಕ್ಸ್‌ರ್ ಮತ್ತು 14 ಬೌಂಡರಿಗಳು ಸೇರಿದ್ದವು. 2 ಸಿಕ್ಸರ್, 4 ಬೌಂಡರಿ ಸೇರಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.