ಮುಂಬೈಗೆ ಕಾರ್ತಿಕ
ಮುಂಬೈ: ಈ ಬಾರಿಯ ಐಪಿಎಲ್ನಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ತಂಡಕ್ಕೆ ಗೆಲುವು ಮರೀಚಿಕೆಯಾಗಿ ಉಳಿದಿದೆ.ಮಂಗಳವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 44 ರನ್ಗಳ ಸೋಲನುಭವಿಸುವ ಮೂಲಕ ಪಂದ್ಯಾವಳಿಯಲ್ಲಿ ತಮ್ಮ ಜಯದ ಖಾತೆ ತೆರೆಯಲು ಸಾಧ್ಯವಾಗಿಲ್ಲ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 209 ರನ್ ಪೇರಿಸಿತು.
ಪಾಂಟಿಂಗ್ ಮೊದಲ ಓವರ್ನಲ್ಲೇ ಶೂನ್ಯ ಸಂಪಾದನೆಯೊಂದಿಗೆ ಇರ್ಫಾನ್ ಪಠಾಣ್ಗೆ ವಿಕೆಟ್ ಒಪ್ಪಿಸಿದರೆ, ಎರಡನೇ ಓವರ್ನಲ್ಲಿ ಜಯವರ್ಧನೆಯವರ ಚುರುಕಿನ ಕ್ಷೇತ್ರ ರಕ್ಷಣೆಯಿಂದ ಸಚಿನ್ ರನೌಟ್ ಆದರು.
ನಂತರ ಜತೆಯಾದ ದಿನೇಶ್ ಕಾರ್ತಿಕ್ ಹಾಗೂ ರೋಹಿತ್ ಶರ್ಮಾ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತಿದರು. 3ನೇ ವಿಕೆಟ್ಗೆ ಜತೆಯಾದ ಈ ಜೋಡಿ ಭರ್ಜರಿ 132 ರನ್ ಪೇರಿಸುವ ಮೂಲಕ ತಂಡಕ್ಕೆ ಆಶ್ರಯವಾದರು.
ಸ್ಫೋಟಕ ಬ್ಯಾಟಿಂಗ್ ನಡೆಸಿದ ದಿನೇಶ್ ಕಾರ್ತಿಕ್ 48 ಎಸೆತಗಳನ್ನು ಎದುರಿಸಿ 86 ರನ್ಗಳಿಸಿದರು. ಕಾರ್ತಿಕ್ ಅವರ ಮೊತ್ತದಲ್ಲಿ 2 ಸಿಕ್ಸರ್ ಮತ್ತು 14 ಬೌಂಡರಿಗಳು ಸೇರಿದ್ದವು.
ನಂತರ ರೋಹಿತ್ ಶರ್ಮಾ ಕೂಡ ಉತ್ತಮ ಬ್ಯಾಟಿಂಗ್ ನಡೆಸಿದ್ದು, 50 ಎಸೆತಗಳನ್ನು ಎದುರಿಸಿ ಅಜೇಯ 74 ರನ್ಗಳಿಸಿದರು. ಶರ್ಮಾ ಕೂಡ 4 ಬೌಂಡರಿಗಳು ಹಾಗೂ 5 ಭರ್ಜರಿ ಸಿಕ್ಸರ್ ಬಾರಿಸಿದ್ದರು.
ನಂತರ ಬಂದ ಪೊಲಾರ್ಡ್ ಹಾಗೂ ರಾಯುಡು ಚುಟುಕಿನ ಆಟ ಪ್ರದರ್ಶಿಸಿದರು. ಪೊಲಾರ್ಡ್ 7 ಎಸೆತಗಳಲ್ಲಿ 13 ರನ್ಗಳಿಸಿ ಔಟಾದರೆ, ರಾಯುಡು ಕೇವಲ 8 ಎಸೆತಗಳಲ್ಲಿ 24 ರನ್ ಪೇರಿಸಿ ತಂಡ 200ರ ಗಡಿ ದಾಟುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಂತಿಮವಾಗಿ 5 ವಿಕೆಟ್ ಕಳೆದುಕೊಂಡ ಮುಂಬೈ ಬರೊಬ್ಬರಿ 209 ರನ್ಗಳಿಸಿದರು.
ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಡೇರ್ಡೆವಿಲ್ಸ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿದರು.
ಡೆಲ್ಲಿ ತಂಡವೂ ಸಹ ತನ್ನ ಖಾತೆ ತೆರೆಯುವ ಮುನ್ನವೇ ಆರಂಭಿಕ ಉನ್ಮುಕ್ತ್ ಚಾಂದ್ ವಿಕೆಟ್ ಕಲೆದುಕೊಂಡಿತು.
ನಂತರ ಬಂದ ಜಯವರ್ಧನೆ 3, ಜುನೇಜಾ 49, ಮೆಂಡಿಸ್ 0, ಪಠಾಣ್ 10, ಜಾಧವ್ 1, ನದೀಂ 2, ಮಾರ್ಕೆಲ್ ಅಜೇಯ 23, ನೆಹ್ರಾ 1 ಹಾಗೂ ಯಾದವ್ ಅಜೇಯ 5 ರನ್ಗಳಿಸಿದರು.
ಡೆವಿಲ್ಸ್ ತಂಡ ಇನಿಂಗ್ಸ್ನ ಉದ್ದಕ್ಕೂ ನಿರಂತರವಾಗಿ ವಿಕೆಟ್ ಕಳೆದುಕೊಂಡ ಹಿನ್ನಲೆಯಲ್ಲಿ ಡೆಲ್ಲಿ ತಂಡ 44 ರನ್ಗಳ ಸೋಲನುಭವಿಸಿತು. ಆದರೆ ಮುಂಬೈ ತಂಡಕ್ಕೆ ಕೊಂಚ ಪ್ರತಿರೋಧ ನೀಡಿದ ವಾರ್ನರ್ 37 ಎಸೆತದಲ್ಲಿ 61 ರನ್ಗಳಿಸಿದರು.
ಸ್ಕೋರ್ ಬೋರ್ಡ್
ಮುಂಬೈ ಇಂಡಿಯನ್ಸ್: 209/5 (20 ಓವರ್)
ರಿಕಿ ಪಾಂಟಿಂಗ್ ಸಿ ಜಯವರ್ಧನೆ ಬಿ ಇರ್ಫಾನ್ 0 (6), ಸಚಿನ್ ತೆಂಡೂಲ್ಕರ್ ರನೌಟ್ (ಜಯವರ್ಧನೆ) 1 (1), ದಿನೇಶ್ ಕಾರ್ತಿಕ್ ಸಿ ಮೆಂಡಿಸ್ ಬಿ ಮಾರ್ಕೆಲ್ 86 (48), ರೋಹಿತ್ ಶರ್ಮಾ ಅಜೇಯ 74 (50), ಪೊಲಾರ್ಡ್ ಸಿ ನದೀಂ ಬಿ ನೆಹ್ರಾ 13 (7), ಆಂಬಟಿ ರಾಯುಡು ಸಿ ಅಂಡ್ ಬಿ ನೆಹ್ರಾ 24 (8), ಹರ್ಭಜನ್ ಸಿಂಗ್ ಅಜೇಯ 1 (1). ಇತರೆ 10
ವಿಕೆಟ್ ಪತನ: 1-0, 2-1, 3-133, 4-163, 5- 189.
ಬೌಲಿಂಗ್: ಇರ್ಫಾನ್ ಪಠಾಣ್ 4-1-37-1, ಆಶೀಶ್ ನೆಹ್ರಾ 4-0-49-2, ಮಾರ್ನೆ ಮಾರ್ಕೆಲ್ 4-0-43-1, ಉಮೇಶ್ ಯಾದವ್ 3-0-28-0, ಶಾಬಾಜ್ ನದೀಂ 3-0-26-0, ಜೀವನ್ ಮೆಂಡಿಸ್ 2-0-20-0.
ಡೆಲ್ಲಿ ಡೇರ್ ಡೆವಿಲ್ಸ್; 165/9 (20 ಓವರ್)
ಉನ್ಮುಕ್ತ್ ಚಾಂದ್ ಸಿ ಪಾಂಟಿಂಗ್ ಬಿ ಹರ್ಭಜನ್ 0 (1), ಡೇವಿಡ್ ವಾರ್ನರ್ ಸಿ ರಾಯುಡು ಬಿ ಜಾನ್ಸನ್ 61 (37), ಜಯವರ್ಧನೆ ಸಿ ಕಾರ್ತಿಕ್ ಬಿ ಜಾನ್ಸನ್ 3 (6), ಜುನೇಜಾ ರನೌಟ್ (ಧವನ್) 49 (40), ಜೀವನ್ ಮೆಂಡಿಸ್ ಸಿ ಅಂಡ್ ಬಿ ಪೊಲಾರ್ಡ್ 0 (1), ಇರ್ಫಾನ್ ಪಠಾಣ್ ಸಿ ಜಾನ್ಸನ್ ಬಿ ಓಜಾ 10 (12), ಕೇದಾರ್ ಜಾಧವ್ ಸಿ ಅಂಡ್ ಬಿ ಮಾಲಿಂಗ 1 (2), ಶಾಬಾಜ್ ನದೀಂ ಸಿ ಧವನ್ ಬಿ ಓಜಾ 2 (3), ಮಾರ್ನೆ ಮಾರ್ಕೆಲ್ ಅಜೇಯ 23 (9), ಆಶೀಶ್ ನೆಹ್ರಾ ಸಿ ಓಜಾ ಬಿ ಪೊಲಾರ್ಡ್ 1 (5), ಉಮೇಶ್ ಯಾದವ್ ಅಜೇಯ 5 (4). ಇತರೆ 10.
ವಿಕೆಟ್ ಪತನ: 1-0, 2-13, 3-95, 4-97, 5-118, 6-127, 7-134, 8-140, 9-154.
ಬೌಲಿಂಗ್: ಹರ್ಭಜನ್ ಸಿಂಗ್ 4-0-25-1, ಮಾಲಿಂಗ 4-0-20-1, ಜಾನ್ಸನ್ 4-0-49-2, ಪ್ರಗ್ಯಾನ್ ಓಜಾ 4-0-34-2, ಪೊಲಾರ್ಡ್ 4-0-35-2.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

