ಕ್ರೀಡೆ

ಕಿಂಗ್ಸ್ ಗೆ ರಾಯಲ್ 'ಚಾಲೆಂಜ್'

Published On :

ಚೆನ್ನೈ: ಐಪಿಎಲ್ ನ ಎರಡು ಬಲಿಷ್ಠ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಶನಿವಾರ ಇಲ್ಲಿನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ಸೆಣೆಸಾಟ ನಡೆಸಲಿವೆ.
ಎರಡು ತಂಡಗಳು ಕಾಗದದ ಮೇಲೆ ಸಮತೋಲಿತ ತಂಡಗಳಾಗಿ ಬಿಂಬಿತವಾಗಿವೆ. ಎರಡು ತಂಡಗಳು ತಮ್ಮ ಹಿಂದಿನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಆತ್ಮ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿವೆ. ಸಿಎಸ್ಕೆ ತಮ್ಮ ಹಿಂದಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧ 10 ವಿಕೆಟ್ಗಳ ಜಯ ಸಾಧಿಸಿದರೆ, ಆರ್ಸಿಬಿ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ 8 ವಿಕೆಟ್ಗಳ ಜಯ ಸಾಧಿಸಿದೆ. ಆದರೆ ಸಿಎಸ್ಕೆ ತಮ್ಮ ತವರಿನಲ್ಲಿ ಪಂದ್ಯವನ್ನಾಡುತ್ತಿರುವುದು ಇಲ್ಲಿನ ವಾತಾವರಣದ ಲಾಭ ಪಡೆಯಲಿದೆ. ಆರ್ಸಿಬಿ ತಂಡದ ಪರ ಬ್ಯಾಟಿಂಗ್ನಲ್ಲಿ ಕ್ರಿಸ್ ಗೇಯ್ಲ್ ಪ್ರಮುಖ ಆಟಗಾರನಾಗಿದ್ದು, ಇವರ ಜತೆಗೆ ನಾಯಕ ಕೊಹ್ಲಿ, ಅಗರ್ವಾಲ್, ಎಬಿ ಡಿವಿಲಿಯರ್ಸ್ ಕೈಜೋಡಿಸುವ ವಿಶ್ವಾಸವಿದೆ. ಇನ್ನು ಸಿಎಸ್ಕೆ ಪರ ಮೈಕ್ ಹಸ್ಸಿ ಪ್ರಮುಖ ಆಟಗಾರನಾಗಿದ್ದು ಇವರಿಗೆ  ವಿಜಯ್, ರೈನಾ, ನಾಯಕ ಧೋನಿ ತಕ್ಕ ಬೆಂಬಲ ನೀಡಲಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಆರ್ಸಿಬಿ ವಿನಯ್, ಆರ್ಪಿ ಸಿಂಗ್, ಉನಾದ್ಕತ್ ಉತ್ತಮ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದ್ದರೆ, ಸಿಎಸ್ಕೆ ತಂಡದಲ್ಲಿ ಆರ್ ಅಶ್ವಿನ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಇವರಿಗೆ ಮೋರಿಸ್, ರಜ್ಪೂತ್ ಉತ್ತಮ ಬೆಂಬಲ ನೀಡುವ ನಿರೀಕ್ಷೆ ಇದೆ.
ಮುರಳಿ ಬದಲು ಯಾರು?: ಈ ಬಾರಿಯ ಐಪಿಎಲ್ ವೇಳೆ ಚೆನ್ನೈನಲ್ಲಿ ಶ್ರೀಲಂಕಾ ಆಟಗಾರರಿಗೆ ಪ್ರವೇಶವಿರದ ಕಾರಣ ಆರ್ಸಿಬಿ ತಂಡದಲ್ಲಿ ಮುರಳಿಧರನ್ ಬದಲಿಗೆ ಯಾರು ಆಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.
ಕಳೆದ ಪಂದ್ಯದಲ್ಲಿ ಭಾರತದ ಮುರಳಿ ಕಾರ್ತಿಕ್ ಹೊರಗುಳಿದಿದ್ದು, ಈ ಪಂದ್ಯದಲ್ಲಿ ಮುರಳಿಧರನ್ ಅವರ ಸ್ಪಿನ್ನರ್ ಕೊರತೆಯನ್ನು ತುಂಬುವ ಸಾಧ್ಯತೆ ಇದೆ. ಜತೆಗೆ ತೆರವಾಗ ಓರ್ವ ವಿದೇಶಿ ಆಟಗಾರನ ಸ್ಥಾನಕ್ಕೆ ವಿಂಡೀಸ್ನ ರವಿ ರಾಮ್ಪಾಲ್ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶ ಹೆಚ್ಚಿದೆ. ಒಂದು ವೇಳೆ ಕಾರ್ತಿಕ್ ಹಾಗೂ ರಾಮ್ಪಾಲ್ ಇಬ್ಬರು ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ಕೆಎಲ್ ರಾಹುಲ್ ತಂಡದಿಂದ ಹೊರಗುಳಿಯಬೇಕಿದೆ.

ಸಿಎಸ್ಕೆ
 ಮಹೇಂದ್ರ ಸಿಂಗ್ ಧೋನಿ (ನಾಯಕ), ಶ್ರೀಕಾಂತ್ ಅನಿರುದ್ಧ, ಬಾಬಾ ಅಪರಾಜಿತ್, ಆರ್.ಅಶ್ವಿನ್, ಎಸ್.ಬದ್ರಿನಾಥ್, ಡ್ವೇನ್ ಬ್ರಾವೊ, ಅಖಿಲ ಧನಂಜಯ, ಡುಪ್ಲಿಸೆಸ್, ಜಾಸನ್ ಹೊಲ್ಡರ್, ಬೆನ್ ಹಿಲ್ಫಾನಾಸ್, ಮೈಕ್ ಹಸ್ಸಿ, ಇಮ್ತಿಯಾಜ್ ಅಹಮದ್, ರವೀಂದ್ರ ಜಡೇಜಾ, ಶಡಬ್ ಜಕಾಟಿ, ಆರ್.ಕಾರ್ತಿಕೇಯನ್, ನುವಾನ್ ಕುಲಸೇಕರ, ಬೆನ್ ಲಾಹ್ಲಿನ್, ರೋನಿತ್ ಮೋರೆ, ಆಲ್ಬಿ ಮಾರ್ಕೆಲ್, ಕ್ರಿಸ್ ಮೊರಿಸ್, ಡರ್ಕ್ ನ್ಯಾನಿಸ್, ಸುರೇಶ್ ರೈನಾ, ಅಂಕಿತ್ ರಜ್ಪೂತ್, ವೃದ್ಧಿಮಾನ್ ಸಾಹಾ, ವಿಜಯ್ ಶಂಕರ್, ಮೊಹಿತ್ ಶರ್ಮಾ, ಮುರಳಿ ವಿಜಯ್.

ಆರ್ಸಿಬಿ
ವಿರಾಟ್ ಕೊಹ್ಲಿ (ನಾಯಕ), ಮಾಯಾಂಕ್ ಅಗರ್ವಾಲ್, ಕೆ.ಪಿ ಅಪ್ಪಣ್ಣ, ಶ್ರೀನಾಥ್ ಅರವಿಂದ್, ಅರುಣ್ ಕಾರ್ತಿಕ್, ಕ್ರಿಸ್ಟೊಫರ್ ಬರ್ನ್ವೆಲ್, ಡೇನಿಯಲ್ ಕ್ರಿಸ್ಚಿಯನ್, ಎಬಿ ಡಿವಿಲಿಯರ್ಸ್, ತಿಲಕರತ್ನೆ ದಿಲ್ಶಾನ್, ಕ್ರಿಸ್ ಗೇಯ್ಲ್, ಮೊಯ್ಸಿಸ್ ಹೆನ್ರಿಕೇಸ್, ಶೆಲ್ಡನ್ ಜಾಕ್ಸನ್, ಮುರಳಿ ಕಾರ್ತಿಕ್, ಜಹೀರ್ ಖಾನ್, ಆ್ಯಂಡ್ರೂ ಮೆಕ್ಡೊನಾಲ್ಡ್, ಅಭಿಮನ್ಯು ಮಿಥುನ್, ಅಭಿನವ್ ಮುಕುಂದ್, ಮುತ್ತಯ್ಯ ಮುರಳಿಧರನ್, ಕರುಣ್ ನಾಯರ್, ಪಂಕಜ್ ಸಿಂಗ್, ಪಿ.ಪರಮೇಶ್ವರನ್, ಹರ್ಶದ್ ಪಟೇಲ್, ಚೇತೇಶ್ವರ ಪೂಜಾರ, ರವಿ ರಾಮ್ಪಾಲ್, ಸಂದೀಪ್ ವಾರಿಯರ್, ಆರ್.ಪಿ. ಸಿಂಗ್, ಸನ್ನಿ ಸೋಹೈಲ್, ಸೈಯದ್ ಮಹಮದ್, ಸೌರಬ್ ತಿವಾರಿ, ಜಯ್ದೇವ್ ಉನದ್ಕತ್, ಡೇನಿಯಲ್ ವೆಟ್ಟೊರಿ, ವಿನಯ್ ಕುಮಾರ್, ವಿಜಯ್ ಜೋಲ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.