ಕ್ರೀಡೆ

ಕ್ರಿಸ್ ಗೇಯ್ಲ್ ಆರ್ಭಟಕ್ಕೆ ನೈಟ್ ರೈಡರ್ಸ್ ತತ್ತರ

Published On :

ಬೆಂಗಳೂರು: ಆರ್‌ಸಿಬಿ ತಂಡ ತಮ್ಮ ಈ ಬಾರಿಯ ಐಪಿಎಲ್‌ನಲ್ಲಿ ಸಾಂಘಿಕ ಪ್ರದರ್ಶನವನ್ನು ತೋರುತ್ತಿದ್ದು, ಗುರುವಾರ ನಡೆದ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧದ ಪಂದ್ಯದಲ್ಲು ಮುಂದುವರಿಸಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ, ಎದುರಾಳಿ ತಂಡವನ್ನು 20 ಓವರ್‌ಗಳಲ್ಲಿ 154 ರನ್‌ಗಳಿಗೆ ನಿಯಂತ್ರಿಸಿತು.
ಈ ಮೊತ್ತವನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ ಕ್ರಿಸ್ ಗೇಯ್ಲ್ ಹಾಗೂ ವಿರಾಟ್ ಕೊಹ್ಲಿಯವರ ಅದ್ಭುತ ಬ್ಯಾಟಿಂಗ್ ನೆರವಿನಿಂದ 17.3 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.
ಈ ಪಂದ್ಯದೊಂದಿಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಾನು ಇದುವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿದಂತಾಗಿದೆ. ಅತ್ತ, ಕೆಕೆಆರ್ ತಂಡ ಇದುವರೆಗೂ ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡನೇ ಸೋಲನ್ನು ದಾಖಲಿಸಿದಂತಾಗಿದೆ.

ಕಿತ್ತಾಡಿದ ಗೌತಿ- ಕೊಹ್ಲಿ
ಕೆಕೆಆರ್ ನೀಡಿದ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ ಆರಂಭದಲ್ಲೇ ಅಗರ್ವಾಲ್ ವಿಕೆಟ್ ಕಳೆದುಕೊಂಡಿತು. ಈ ವೇಳೆ ಕ್ರಿಸ್ ಗೇಯ್ಲ್ ಜತೆಗೂಡಿದ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ 53 ರನ್‌ಗಳ ಜತೆಯಾಟ ನೀಡಿದರು. ಅಲ್ಲದೆ ವಯಕ್ತಿಕವಾಗಿ 27 ಎಸೆತದಲ್ಲಿ 35 ರನ್‌ಗಳಿಸಿ ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ ಇನಿಂಗ್ಸ್‌ನ 9.1ನೇ ಓವರ್‌ನಲ್ಲಿ ಬಾಲಾಜಿ ಎಸೆತದಲ್ಲಿ ಮಾರ್ಗನ್‌ಗೆ ಕ್ಯಾಚಿತ್ತು ನಿರಾಸೆಯಿಂದ ಪೆವಿಲಿಯನ್‌ಗೆ ಹೋಗುವಾಗ ಕೆಕೆಆರ್ ತಂಡದ ನಾಯಕ ಗಂಭೀರ್ ವರ್ತನೆಗೆ ಬೇಸತ್ತ ಕೊಹ್ಲಿ ಗಂಭೀರ್ ವಿರುದ್ಧ ಮಾತಿನ ಚಕಮಕಿಗೆ ಮುಂದಾದರು. ಈ ವೇಳೆ ಈ ಇಬ್ಬರು ಆಟಗಾರರು ಪರಸ್ಪರ ಮಾತಿಗಿಳಿಯುವ ಮುನ್ನ ಸಹ ಆಟಗಾರರು ಹಾಗೂ ಅಂಪೈರ್‌ಗಳ ಮಧ್ಯ ಪ್ರವೇಶದಿಂದ ಅವರಿಬ್ಬರ ಜಗಳ ನಿಂತಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.