ಕ್ರೀಡೆ

ಮತ್ತೆ ಮುಗ್ಗರಿಸಿದ ಡೇರ್ ಡೆವಿಲ್ಸ್

Published On :

ನವದೆಹಲಿ: ಈ ಬಾರಿಯ ಐಪಿಎಲ್ನಲ್ಲಿ ಮೊದಲ ಜಯವನ್ನು ಹರಸುತ್ತಿರುವ ಡೆಲ್ಲಿ ಡೇರ್ಡೆವಿಲ್ಸ್ ತಂಡ ಶುಕ್ರವಾರ ನಡೆದ ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಕುಸಿತ ಕಂಡಿದ್ದು, ಕೇವಲ 115 ರನ್ಗಳ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಡೆವಿಲ್ಸ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 114 ರನ್ಗಳಿಸಿತು. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಸನ್ರೈಸರ್ಸ್ ಬ್ಯಾಟಿಂಗ್ ಆರಂಭವಾಗಿರಲಿಲ್ಲ.
ಗಾಯದ ಸಮಸ್ಯೆಯಿಂದ ಆರಂಭಿಕ 3 ಪಂದ್ಯಗಳಿಂದ ಹೊರಗುಳಿದಿದ್ದ ಸ್ಪೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ತಂಡಕ್ಕೆ ವಾಪಸ್ಸಾದರು. ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಹಾಗೂ ಸೆಹ್ವಾಗ್ ತಂಡಕ್ಕೆ ಉತ್ತಮ ಆರಂಭ ನೀಡಲಿಲ್ಲ.
ಸ್ಟೇಯ್ನ್ ಅವರ ಮೊದಲ ಓವರ್ನ 4ನೇ ಎಸೆತದಲ್ಲಿ ಆನಂದ್ಗೆ ಕ್ಯಾಚ್ ನೀಡಿದ ವಾರ್ನರ್ ಶೂನ್ಯ ಸಂಪಾದನೆಯೊಂದಿಗೆ ಪೆವಿಲಿಯನ್ ಸೇರಿಕೊಂಡರು.
ನಂತರ ಬಂದ ನಾಯಕ ಮಹೇಲಾ ಜಯವರ್ಧನೆ ಕೂಡ 12 ರನ್ಗಳಿಸಿ ಇಶಾಂತ್ ಎಸೆತದಲ್ಲಿ ಸ್ಟೇಯ್ನ್ಗೆ ಕ್ಯಾಚ್ ನೀಡಿದರು. ಇದಾದ ನಂತರದ ಎಸೆತದಲ್ಲೇ 12 ರನ್ಗಳಿಸಿದ್ದ ಸೆಹ್ವಾಗ್, ವೈಟ್ಗೆ ಕ್ಯಾಚ್ ನೀಡಿ ಔಟಾದರು.
ನಂತರ ಬಂದ ಬೋತಾ 9, ಜನೇಜಾ 15 ರನ್ಗಳಿಸಿ ಔಟಾದರು. ಈ ವೇಳೆಗೆ ತಂಡದ ಮೊತ್ತ 65 ಕ್ಕೆ 5 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಜತೆಯಾದ ಇರ್ಫಾನ್ ಪಠಾಣ್ ಹಾಗೂ ಕೇದಾರ್ ಜಾಧವ್ 30 ರನ್ಗಳ ಜತೆಯಾಟ ನೀಡಿದರು. ಈ ವೇಳೆ 23 ರನ್ಗಳಿಸಿದ್ದ ಪಠಾಣ್, ಪೆರೇರಾ ಎಸೆತದಲ್ಲಿ ವಿಹಾರಿಗೆ ಕ್ಯಾಚ್ ನೀಡಿ ಹೊರ ನಡೆದರು. ನಂತರ ಬಂದ ಮಾರ್ಕೆಲ್ ಆಶಿಶ್ ರೆಡ್ಡಿಗೆ ಕ್ಯಾಚ್ ನೀಡಿದರು. ನಂತರ ಬಂದ ನದೀಂ ಕೂಡ ತಮ್ಮ ಮೊದಲ ಎಸೆತದಲ್ಲಿ ಸ್ಟೇಯ್ನ್ಗೆ ಬೌಲ್ಡ್ ಆದರು. ಜಾಧವ್ ಅಜೇಯ 30 ಹಾಗೂ ಯಾಧವ್ ಅಜೇಯ 2 ರನ್ಗಳಿಸಿದರು. ಅಂತಿಮವಾಗಿ ಡೆವಿಲ್ಸ್ ತಂಡ 8 ವಿಕೆಟ್ ಕಳೆದುಕೊಂಡು 114 ರನ್ಗಳಿಸಿತು. ಸನ್ರೈಸರ್ಸ್ ತಂಡದ ಪರ ಮಾರಕ ಬೌಲಿಂಗ್ ಮಾಡಿದ ಸ್ಟೇಯ್ನ್, ಇಶಾಂತ್, ಪೆರೇರಾ ತಲಾ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಡೆಲ್ಲಿ ಡೇರ್ಡೆವಿಲ್ಸ್ 114/8 (20 ಓವರ್); ಕೇದಾರ್ ಜಾಧವ್ ಅಜೇಯ 30 (20), ಪಠಾಣ್ 23 (30); ಬೌಲಿಂಗ್: ಸ್ಟೇಯ್ನ್ 11/2, ಪೆರೇರಾ 31/2

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.