ಕ್ರೀಡೆ

ಏಕದಿನದಲ್ಲೂ ಕ್ಲೀನ್ ಸ್ವೀಪ್

Published On :

ಅಹ್ಮದಾಬಾದ್: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಇತ್ತೀಚೆಗೆ ನಡೆದಿದ್ದ ಟ್ವೆಂಟಿ20 ಸರಣಿಯನ್ನು ಕ್ಲೀನ್ಸ್ವೀಪ್ ಮೂಲಕ ಗೆದ್ದಿದ್ದ ಭಾರತ ವನಿತೆಯರ ತಂಡ, ಇದೀಗ, ಏಕದಿನ ಸರಣಿಯನ್ನೂ 3-0 ಅಂತರದಲ್ಲಿ ಗೆದ್ದುಕೊಂಡು ಮತ್ತೊಂದು ಕ್ಲೀನ್ಸ್ವೀಪ್ ಸಾಧನೆ ಮಾಡಿದೆ.
ಶುಕ್ರವಾರ ಇಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡ, ಬಾಂಗ್ಲಾವನ್ನು 58 ರನ್ಗಳಿಂದ ಸೋಲಿಸಿ ಪಂದ್ಯದಲ್ಲಿ ಜಯಭೇರಿ ಬಾರಿಸಿತು. ಮೊದಲು ಬ್ಯಾಟ್ ಮಾಡಿದ್ದ ಭಾರತ 48.3 ಓವರ್ಗಳಲ್ಲಿ 154 ರನ್ಗಳಿಗೆ ಆಲೌಟ್ ಆಯಿತು. ನಂತರ, ಬ್ಯಾಟಿಂಗ್ಗೆ ಇಳಿದ ಬಾಂಗ್ಲಾದೇಶವನ್ನು 96 ರನ್ಗಳಿಗೆ (41.1 ಓವರ್) ಆಲೌಟ್ ಮಾಡುವಲ್ಲಿ ಯಶಸ್ವಿಯಾದ ಭಾರತೀಯ ಬೌಲರ್ಗಳು ಜಯದ ನಗೆ ತಂದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತೀಯರಿಗೆ ಬಾಂಗ್ಲಾದ ಬೌಲರ್ಗಳು ಬಿಸಿ ಮುಟ್ಟಿಸಿದರು. ಲತಾ ಮೋಂದಾಲ್ ಹಾಗೂ ಪನ್ನಾ ಘೋಷ್ ಇಬ್ಬರೂ ಆರಂಭಿಕ ಕ್ರಮಾಂಕ ಬೇಗನೇ ಕುಸಿಯುವಂತೆ ಮಾಡಿದರು. ಆನಂತರ, ದಾಳಿಗಿಳಿದ ರುಮಾನಾ ಅಹ್ಮದ್ ತಮ್ಮ ಆಕ್ರಮಣಕಾರಿ ಬೌಲಿಂಗ್ನಿಂದ ಭಾರತದ ಇನಿಂಗ್ಸ್ ದಿಕ್ಕುತಪ್ಪುವಂತೆ ಮಾಡಿದರು.
10 ಓವರ್ಗಳನ್ನು ಮಾಡಿದ ರುಮಾನಾ, ಕೇವಲ 20 ರನ್ ನೀಡಿದರಲ್ಲದೇ, ನಾಲ್ಕು ವಿಕೆಟ್ ಕಬಳಿಸಿದರು. ಅಂತೂ ಬಾಂಗ್ಲಾದೇಶದ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತದ ಪರ ಸ್ವಾಗತಿಕಾ ರಥ್ (30) ಮಾತ್ರ ಕೊಂಚ ಏಕಾಂಗಿ ಹೋರಾಟ ನಡೆಸಿದರು. ಅಂತಿಮವಾಗಿ, ಭಾರತ 154 ರನ್ಗಳಿಗೆ ಆಲೌಟ್ ಆಯಿತು.
ಕುಸಿದ ಬಾಂಗ್ಲಾ:  ಭಾರತದ ಇನಿಂಗ್ಸನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದ ಖುಷಿಯಲ್ಲಿದ್ದ ಬಾಂಗ್ಲಾದೇಶಕ್ಕೆ ಭಾರತದ ಬೌಲರ್ಗಳು ಪೆಟ್ಟು ನೀಡಿದರು. ಬಾಂಗ್ಲಾ ಇನಿಂಗ್ಸ್ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಏಕ್ತಾ ಬಿಶ್ತ್, ಆರಂಭಿಕರಾದ ಫರ್ಜಾನಾ ಹಕ್ ಅವರನ್ನು ಆಚೆ ಕಳಿಸಿದರೆ, ಮತ್ತೊಬ್ಬ ಬೌಲರ್ ರೀತು ಧ್ರುವ್ ಅವರು ಮತ್ತೊಬ್ಬ ಆರಂಭಿಕ ಆಟಗಾರ್ತಿ ಶುಕ್ತಾರಾ ರಹಮಾನ್ ಅವರನ್ನು ಪೆವಿಲಿಯನ್ಗೆ ಕಳಿಸಿದರು. ಆನಂತರ, ದಾಳಿಗಿಳಿದ ಪೂನಮ್ ಯಾದವ್, ಬಾಂಗ್ಲಾದ ಪ್ರಮುಖ ಮೂರು ವಿಕೆಟ್ (ರುಮಾನಾ ಅಹ್ಮದ್, ಲತಾ ಮೊಂದಾಲ್, ಶಹನಾಜ್ ಪರ್ವೀನ್)ಗಳನ್ನು ಕಬಳಿಸಿದರು.
ಬಿಶ್ತ್ ಹಾಗೂ ರೀತು ಇಬ್ಬರೂ ಬಾಂಗ್ಲಾವನ್ನು ಕಾಡಿದ ನಂತರ, ಸ್ವಾಗತಿಕಾ ರಥ್ ಅವರು ತಾಜಿಯಾ ಅಕ್ತರ್ ಹಾಗೂ ಪನ್ನಾ ಘೋಷ್ ಅವರ ವಿಕೆಟ್ ಪಡೆಯುವ ಮೂಲಕ ಬಾಂಗ್ಲಾದೇಶದ ಮಧ್ಯಮ ಕ್ರಮಾಂಕಕ್ಕೆ ಮತ್ತಷ್ಟು ಪೆಟ್ಟು ನೀಡಿದರು.  ಅಂತಿಮವಾಗಿ, ಬಾಂಗ್ಲಾದೇಶ 41.1 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ಗಳನ್ನೂ ಕಳೆದುಕೊಂಡು ಕೇವಲ 96 ರನ್ ಮಾತ್ರ ಗಳಿಸಲು ಶಕ್ತವಾಯಿತು. ಭಾರತ 58 ರನ್ಗಳ ಜಯ ಸಂಪಾದಿಸಿ, ಮೂರು ಪಂದ್ಯಗಳ ಸರಣಿಯನ್ನು ಕ್ವೀನ್ಸ್ವೀಪ್ ಮಾಡಿಕೊಂಡು ಗೆಲುವು ಸಾಧಿಸಿತು.

ಸಂಕ್ತಿಪ್ತ ಸ್ಕೋರ್
ಭಾರತ: 154 (48.3 ಓವರ್)
ಸ್ವಾಗತಿಕಾ ರಥ್ 30 (43), ಹರ್ಮನ್ ಪ್ರೀತ್ ಕೌರ್ 29 (72)
ಬೌಲಿಂಗ್: ರುಮಾನಾ ಅಹ್ಮದ್ 20/4, ಲತಾ ಮೊಂದಾಲ್ 23/2
ಬಾಂಗ್ಲಾ: 96 (41.1 ಓವರ್)
ಸಲ್ಮಾ ಖಾತುನ್ 22 (44), ಪನ್ನಾ ಘೋಷ್ 13 (25)
ಬೌಲಿಂಗ್: ಪೂನಮ್ ಯಾದವ್ 24/3, ಬಿಶ್ತ್ 19/2

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.