ಈಡನ್ ಗಾರ್ಡನ್ನಲ್ಲಿ ರೈಡರ್ಸ್- ರೈಸರ್ಸ್ ವಾರ್
ಕೋಲ್ಕತಾ: ತವರಿನಿಂದ ಹೊರಗೆ ನಡೆದ ಎರಡು ಪಂದ್ಯಗಳಲ್ಲಿ ನಿರಂತರವಾಗಿ ಸೋಲನುಭವಿಸಿದ ಕೋಲ್ಕತಾ ನೈಟ್ ರೈಡರ್ಸ್, ಭಾನುವಾರ ತವರಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಜಯದ ಲಯಕ್ಕೆ ಮರಳಲು ಎದುರು ನೋಡುತ್ತಿದೆ.
ಹಾಲಿ ಚಾಂಪಿಯನ್ ಕೋಲ್ಕತಾ, ಉದ್ಘಾಟನಾ ಪಂದ್ಯದಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿತ್ತು. ಆದರೆ, ನಂತರ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎರಡು ಪಂದ್ಯಗಳಲ್ಲಿ ಸೋಲುವ ಮೂಲಕ, ಸ್ಥಿರ ಪ್ರದರ್ಶನ ಮುಂದುವರಿಸಿಕೊಂಡು ಹೋಗುವಲ್ಲಿ ವಿಫಲವಾಗಿತ್ತು.
ಬಲಿಷ್ಠ ಬ್ಯಾಟಿಂಗ್ ಪ್ರದರ್ಶಿಸಿದ ಸನ್ರೈಸರ್ಸ್ ತಂಡವನ್ನು ಸುಲಭವಾಗಿ ಕಟ್ಟಿಹಾಕಲು ನೈಟ್ ರೈಡರ್ಸ್ ಕಾರ್ಯತಂತ್ರ ಹೆಣೆಯುವ ಸಾಧ್ಯತೆಗಳಿವೆ. ರೇಯಾನ್ ಮೆಕ್ಲಾರೆನ್ ಸ್ಥಾನದಲ್ಲಿ ವೇಗಿ ಬ್ರೆಟ್ ಲೀ ತಂಡಕ್ಕೆ ಮರಳುವ ನಿರೀಕ್ಷೆಗಳಿವೆ. ನಿಧಾನಗತಿಯ ಬೌಲಿಂಗ್ಗೆ ಹೊಂದಿಕೊಳ್ಳುವ ಈಡನ್ ಗಾರ್ಡನ್ನಲ್ಲಿ ಸ್ಪಿನ್ನರ್ ಸುನಿಲ್ ನಾರಾಯಣ ಮತ್ತೊಮ್ಮೆ ಮಿಂಚುವ ಸಾಧ್ಯತೆಗಳಿವೆ.
ಇನ್ನು ಬ್ಯಾಟಿಂಗ್ ವಿಭಾಗಕ್ಕೆ ಬಲ ತರಲು, ಸ್ನಾಯು ಸೆಳೆತದಿಂದ ಚೇತರಿಸಿಕೊಂಡಿರುವ ನ್ಯೂಜಿಲೆಂಡ್ನ ಆರಂಭಿಕ ಆಟಗಾರ ಬ್ರೆಂಡಾನ್ ಮೆಕಲಂ ಅವರನ್ನು ಅಂಗಣಕ್ಕಿಳಿಸಲು ಕೋಲ್ಕತಾ ಎದುರು ನೋಡುತ್ತಿದೆ. ಮೆಕಲಂ ತಂಡಲ್ಲಿ ಸೇರಿಕೊಂಡರೆ ಎದುರಾಳಿ ಹೈದರಾಬಾದ್ ಮೇಲೆ ಒತ್ತಡ ಹೆಚ್ಚಲಿದೆ.
ಇನ್ನೊಂದೆಡೆ ಸನ್ರೈಸರ್ಸ್ ತಂಡ, ವಿಶ್ವದ ಅತ್ಯಂತ ವೇಗದ ಬೌಲರ್ ಡೇಲ್ ಸ್ಟೇಯ್ನ್ ಜತೆ ಇಶಾಂತ್ ಶರ್ಮಾ ಹಾಗೂ ಅಮಿತ್ ಮಿಶ್ರಾ ಅವರೊಂದಿಗೆ ಉತ್ತಮ ಸಾಥ್ ನೀಡುತ್ತಿದ್ದಾರೆ. ಸ್ಟೇಯ್ನ್ 4.73 ಎಕಾನಮಿಯೊಂದಿಗೆ ಉತ್ತಮ ಫಾರ್ಮ್ನಲ್ಲಿದ್ದಾರೆ. ಮಿಶ್ರಾ ಸಹ 5.68 ಎಕಾನಮಿಯೊಂದಿಗೆ ತಕ್ಕ ಪ್ರದರ್ಶನ ತೋರಿದ್ದು, ಈಡನ್ ಗಾರ್ಡನ್ನಲ್ಲಿ ಇನ್ನಷ್ಟು ಶ್ರೇಷ್ಠ ಪ್ರದರ್ಶನ ನೀಡುವ ಸಾಧ್ಯತೆಗಳಿವೆ.
ಗಾಯದಿಂದ ಬಳಲುತ್ತಿರುವ ಆರಂಭಿಕ ಆಟಗಾರ ಶಿಖರ್ ಧವನ್ ಅನುಪಸ್ಥಿತಿ ಮತ್ತು ನಾಯಕ ಕುಮಾರ ಸಂಗಕ್ಕಾರ ಲಯ ಕಂಡುಕೊಳ್ಳದಿರುವುದು ತಂಡದ ಪ್ರಮುಖ ವೈಫಲ್ಯಗಳಾಗಿವೆ.
ಇನ್ನು ತಿಸರಾ ಪೆರೇರಾ ಹಾಗೂ ಕೆಮರೂನ್ ವೈಟ್ ಬ್ಯಾಟಿಂಗ್ನಲ್ಲಿ ಹೈದರಾಬಾದ್ಗೆ ಕೊಂಚ ಆಶ್ರಯವಾಗುತ್ತಿದ್ದಾರೆ. ಆದರೆ, ಈ ಇಬ್ಬರೂ ಬ್ಯಾಟ್ಸ್ಮನ್ಗಳೂ ಬೃಹತ್ ಮೊತ್ತ ಪೇರಿಸುವಲ್ಲಿ ವಿಫಲವಾಗಿದ್ದಾರೆ.
ಕೆಕೆಆರ್
ಗೌತಮ್ ಗಂಭೀರ್ (ನಾಯಕ), ಇಯಾನ್ ಮಾರ್ಗನ್, ಮನೋಜ್ ತಿವಾರಿ, ದೇಬಬ್ರತಾ ದಾಸ್, ಬ್ರಾಡ್ ಹ್ಯಾಡಿನ್, ಮನ್ವಿಂದರ್ ಬಿಸ್ಲಾ, ಬ್ರೆಂಡನ್ ಮೆಕಲಂ, ಶಕೀಬ್ ಅಲ್ ಹಸನ್, ರಿಯಾನ್ ಟೆನ್ ಡಸ್ಕೇಟ್, ಜಾಕ್ ಕಾಲಿಸ್, ಯೂಸುಫ್ ಪಠಾಣ್, ಲಕ್ಷ್ಮೀ ರತನ್ ಶುಕ್ಲಾ, ರಜತ್ ಭಾಟಿಯಾ, ರಿಯಾನ್ ಮೆಕ್ಲಾರೆನ್, ಬ್ರೆಟ್ ಲೀ, ಲಕ್ಷ್ಮೀಪತಿ ಬಾಲಾಜಿ, ಇಕ್ಬಾಲ್ ಅಬ್ದುಲ್ಲಾ, ಮಹಮ್ಮದ್ ಶಮಿ, ಪ್ರದೀಪ್ ಸಾಂಗ್ವಾನ್, ಸರಬ್ಜೀತ್ ಲಡ್ಡಾ, ಸುನಿಲ್ ನಾರಾಯಣ್, ಸಚಿತ್ರಾ ಸೇನಾನಾಯಕೆ.
ಸನ್ರೈಸರ್ಸ್
ಕುಮಾರ ಸಂಗಕ್ಕಾರ (ನಾಯಕ), ಅಕ್ಷತ್ ರೆಡ್ಡಿ, ಅಮಿತ್ ಮಿಶ್ರಾ, ಆನಂದ್ ರಾಜನ್, ಅಂಕಿತ್ ಶರ್ಮಾ, ಆಶೀಶ್ ರೆಡ್ಡಿ, ಬಿಪ್ಲಾಪ್ ಸಮಾಂತ್ರೇ, ಕೆಮೆರೂನ್ ವೈಟ್, ಕ್ರಿಸ್ ಲಿನ್, ಕ್ಲಿಂಟ್ ಮೆಕೇ, ಡೇಲ್ ಸ್ಟೇನ್, ಡರೇನ್ ಸಾಮಿ, ದ್ವಾರಕ ರವಿತೇಜ, ಹನುಮ ವಿಹಾರಿ, ಇಶಾಂತ್ ಶರ್ಮಾ, ಜೆಪಿ ಡುಮಿನಿ, ಕರಣ್ ಶರ್ಮಾ, ನಥಾನ್ ಮೆಕಲಂ, ಪಾರ್ಥೀವ್ ಪಟೇಲ್, ಕ್ವಿಂಟನ್ ಡಿ ಕಾಕ್, ಸಚಿನ್ ರಾಣಾ, ಶಿಖರ್ ಧವನ್, ಸುದೀಪ್ ತ್ಯಾಗಿ, ತಲವಿವನ್ ಸರ್ಗುನನ್, ತಿಸರಾ ಪರೇರಾ, ವೀರ್ ಪ್ರತಾಪ್ ಸಿಂಗ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

