ಕ್ರೀಡೆ

ಗೆಲವಿನ ಹಳಿಗೆ ಮರಳುವುದೇ ರಾಜಸ್ಥಾನ ?

Published On :

ಜೈಪುರ: ಮೊದಲೆರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಪಂದ್ಯಾವಳಿಯಲ್ಲಿ ಉತ್ತಮ ಆರಂಭ ಪಡೆದಿದ್ದ ರಾಜಸ್ಥಾನ್ ರಾಯಲ್ಸ್ ತಂಡ, ಮೂರನೇ ಪಂದ್ಯದಲ್ಲಿ ಪುಣೆ ವಾರಿಯರ್ಸ್ ತಂಡದ ವಿರುದ್ಧ ಸೋಲನುಭವಿಸಿತ್ತು. ಹೀಗಾಗಿ ಭಾನುವಾರ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆಯಲಿರುವ ನಾಲ್ಕನೇ ಪಂದ್ಯದಲ್ಲಿ ಜಯ ಸಾಧಿಸಿ ಮತ್ತೇ ಗೆಲುವಿನ ಲಯಕ್ಕೆ ಮರಳುವುದೇ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ಪಂಜಾಬ್ ತಂಡ ಪಂದ್ಯಾವಳಿಯಲ್ಲಿ ಕೇವಲ 2 ಪಂದ್ಯಗಳನ್ನಾಡಿದ್ದು, ಮೊದಲ ಪಂದ್ಯದಲ್ಲಿ ಪುಣೆ ವಾರಿಯರ್ಸ್ ತಂಡದ ವಿರುದ್ಧ ಜಯಗಳಿಸಿದರೆ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪರಾಭವಗೊಂಡಿದೆ.
ರಾಜಸ್ಥಾನ್ ತಂಡದಂತೆ ಪಂಜಾಬ್ ತಂಡವೂ ಸಹ ಗೆಲುವಿನ ಲಯಕ್ಕೆ ಮರಳಲು ಕಾತರದಿಂದ ಕಾಯುತ್ತಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಮುಂದಿನ ಪಂದ್ಯಗಳಿಗೆ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ.
ಪಂಜಾಬ್ ತಂಡದಲ್ಲಿ ನಾಯಕ ಗಿಲ್‌ಕ್ರಿಸ್ಟ್, ಆರಂಭಿಕ ಬ್ಯಾಟ್ಸ್‌ಮನ್ ಮನ್‌ದೀಪ್ ಸಿಂಗ್ ಜತೆಗೆ ಡೇವಿಡ್ ಹಸ್ಸಿ ಹಾಗೂ ಗುರುಕೀರ್ತ್ ಸಿಂಗ್ ಬ್ಯಾಟಿಂಗ್ ವಿಭಾಗದ ಪ್ರಮುಖರಾಗಿದ್ದಾರೆ ಇನ್ನು ಬೌಲಿಂಗ್ ವಿಭಾಗದಲ್ಲಿ ಪ್ರವಿಣ್ ಕುಮಾರ್, ರಾಯನ್ ಹ್ಯಾರೀಸ್, ಅಜರ್ ಮಹಮದ್ ಹಾಗೂ ಅವಾನ ಪ್ರಮುಖ ಅಸ್ತ್ರಗಳಾಗಿದ್ದಾರೆ.
ಇತ್ತ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡುವ 11 ಆಟಗಾರರನ್ನು ಆಯ್ಕೆ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಫಿಟ್ನೆಸ್ ಸಮಸ್ಯೆಯ ಕಾರಣದಿಂದ ಶೇನ್ ವ್ಯಾಟ್ಸ್‌ನ್, ಶಾನ್ ಟೈಟ್ ಹಾಗೂ ರಾಹುಲ್ ಶುಕ್ಲಾ ತಂಡದಿಂದ ಹೊರಗುಳಿಯುವ ಸಾಧ್ಯತೆಗಳಿವೆ.
ಅಲ್ಲದೇ ಬ್ಯಾಟಿಂಗ್ ವಿಭಾಗದಲ್ಲಿ ಆರಂಭಿಕರಾದ ಅಜಿಕ್ಯ ರಹಾನೆಗೆ ಇನ್ನು ಉತ್ತಮ ಜತೆಗಾರ ಸಿಕ್ಕಿಲ್ಲ. ರಹಾನೆ ಜತೆಗೆ ದ್ರಾವಿಡ್ ಉತ್ತಮ ಫಾರ್ಮ್‌ನಲ್ಲಿದ್ದರೂ, ಉಳಿದ ಬ್ಯಾಟ್ಸ್‌ಮನ್‌ಗಳು ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವುತಿದ್ದಾರೆ. ಬ್ರಾಡ್ ಹಾಡ್ಜ್ ಹಾಗೂ ಅಶೋಕ್ ಮನೇರಿಯಾ ಫಾರ್ಮ್‌ಗೆ ಮರಳಬೇಕಾದ ಪರಿಸ್ಥಿತಿ ಎದುರಾಗಿದೆ.
ಅಲ್ಲದೇ ರಾಜಸ್ಥಾನ್ ತಂಡ ಆಲ್ರೌಂಡರ್‌ಗಳಾದ ಸ್ಟುವರ್ಟ್ ಬಿನ್ನಿ ಹಾಗೂ ಕೆವಿನ್ ಕೂಪರ್ ಅವರಿಂದ ಉತ್ತಮ ಪ್ರದರ್ಶನವನ್ನು ಎದುರಿಸುತ್ತಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಸಿದ್ಧಾರ್ತ್ ತ್ರಿವೇದಿ, ಕೂಪರ್ ಉತ್ತಮ ಪ್ರದರ್ಶನ ನೀಡಿದ್ದು, ಇವರಿಗೆ ಶ್ರೀಶಾಂತ್ ಉತ್ತಮ ಸಾಥ್ ನೀಡುವ ಅವಶ್ಯಕತೆ ಇದೆ.
ರಾಜಸ್ಥಾನ್ ರಾಯಲ್ಸ್
ರಾಹುಲ್ ದ್ರಾವಿಡ್ (ನಾಯಕ), ಅಜಿಂಕ್ಯ ರಹಾನೆ, ಅಜಿತ್ ಚಾಂಡಿಲಾ, ಅಂಕಿತ್ ಚವಾಣ್, ಅಮಿತ್ ಸಿಂಗ್, ಅಶೋಕ್ ಮನೇರಿಯಾ, ಬ್ರಾಡ್ ಹಾಡ್ಜ್, ಬ್ರಾಡ್ ಹಾಗ್, ದಿಶಾಂತ್ ಯಗ್ನಿಕ್, ಫಿಡೆಲ್ ಎಡ್ವರ್ಡ್ಸ್, ಹರ್ಮೀತ್ ಸಿಂಗ್, ಜೇಮ್ಸ್ ಫಾಕ್ನರ್, ಕೆವಿನ್ ಕೂಪರ್, ಕುಶಾಲ್ ಜನಿತ್ ಪೆರೇರಾ, ಒವೈಸ್ ಶಾ, ಪ್ರವೀಣ್ ತಂಬೆ, ರಾಹುಲ್ ಶುಕ್ಲಾ, ಶ್ರೀಶಾಂತ್, ಸಚಿನ್ ಬೇಬಿ, ಸ್ಯಾಮ್ಯುಯೆಲ್ ಬದ್ರೀ, ಸಂಜು ಸ್ಯಾಮ್‌ಸನ್, ಶೇನ್ ವ್ಯಾಟ್ಸನ್, ಶಾನ್ ಟೈಟ್, ಶ್ರೀವತ್ಸ ಗೋಸ್ವಾಮಿ, ಸಿದ್ಧಾರ್ಥ್ ತ್ರಿವೇದಿ, ಸ್ಟುವರ್ಟ್ ಬಿನ್ನಿ.
ಕಿಂಗ್ಸ್ ಇಲೆವೆನ್ ಪಂಜಾಬ್
ಆ್ಯಡಮ್ ಗಿಲ್‌ಕ್ರಿಸ್ಟ್ (ನಾಯಕ), ಶಾನ್ ಮಾರ್ಷ್, ಡೇವಿಡ್ ಹಸ್ಸಿ, ಡೇವಿಡ್ ಆ್ಯಂಡ್ರೂ ಮಿಲ್ಲರ್, ರಿಯಾನ್ ಹ್ಯಾರಿಸ್, ಡಿಮಿಟ್ರಿ ಮಸ್ಕೆರೆನ್‌ಹ್ಯಾಸ್, ಅಜರ್ ಮೆಹಮೂದ್, ಪಿಯೂಶ್ ಚಾವ್ಲಾ, ಪ್ರವೀಣ್ ಕುಮಾರ್, ಮನದೀಪ್ ಸಿಂಗ್, ಸಿದ್ದಾರ್ಥ್ ಚಿಂಟಿಸ್, ನಿತಿನ್ ಸೈನಿ, ಸನ್ನಿ ಸಿಂಗ್, ಭಾರ್ಗವ್ ಭಟ್, ಬಿಪುಲ್ ಶರ್ಮಾ, ಪಾಲ್ ಚಂದ್ರಶೇಖರ್ ವಾಲ್ತಾಟಿ, ಲ್ಯೂಕ್ ಪ್ಯುಮರ್‌ಬ್ಯಾಚ್, ಮನ್‌ಪ್ರೀತ್ ಸಿಂಗ್ ಗೋನಿ, ಗುರ್‌ಕೀರತ್ ರೂಪಿಂದರ್ ಸಿಂಗ್, ಪರ್ವಿಂದರ್ ಆವಾನಾ, ರಾಜಗೋಪಾಲ್ ಸತೀಶ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.