ಮುಂಬೈ ಮುಂದೆ ಪುಣೆ ಸಪ್ಪೆ
ಮುಂಬೈ: ಅಚ್ಚುಕಟ್ಟಾದ ಬ್ಯಾಟಿಂಗ್, ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆ ಪ್ರದರ್ಶಿಸಿದ ಮುಂಬೈ ತಂಡ, ಪುಣೆ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ 41 ರನ್ಗಳ ಅಂತರದಿಂದ ಜಯ ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ ರೋಹಿತ್ ಶರ್ಮಾ (ಅಜೇಯ 62) ಅವರ ಆಕರ್ಷಕ ಬ್ಯಾಟಿಂಗ್ ನೆರವಿನೊಂದಿಗೆ 3 ವಿಕೆಟ್ ನಷ್ಟಕ್ಕೆ 182 ರನ್ಗಳ ಬೃಹತ್ ಮೊತ್ತ ದಾಖಲಿಸಿತು. ನಂತರ ಈ ಮೊತ್ತವನ್ನು ಬೆನ್ನಟ್ಟಿದ ಪುಣೆ ವಾರಿಯರ್ಸ್ ತಂಡ, ಬ್ಯಾಟಿಂಗ್ ವೈಫಲ್ಯ ಕಾಣುವ ಮೂಲಕ 8 ವಿಕೆಟ್ ಕಳೆದುಕೊಂಡು 142 ರನ್ ಗಳಿಸಿ ಸೋಲೊಪ್ಪಿಕೊಂಡಿತು.
32 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ ಮೊತ್ತದಲ್ಲಿ 5 ಸಿಕ್ಸರ್ ಮತ್ತು 3 ಬೌಂಡರಿಗಳು ಸೇರಿದ್ದವು. ಸಚಿನ್ ತೆಂಡೂಲ್ಕರ್ (44) ಮತ್ತು ದಿನೇಶ್ ಕಾರ್ತಿಕ್ (41) ಸಹ ತಂಡಕ್ಕೆ ಉತ್ತಮ ಕೊಡುಗೆಯನ್ನು ನೀಡಿದರು.
ಪುಣೆ ಪರ ಮಿಚೆಲ್ ಮಾರ್ಷ್ (38) ಹೊರತುಪಡಿಸಿ ಉಳಿದ ಬ್ಯಾಟ್ಸ್ಮನ್ಗಳು ವೈಫಲ್ಯ ಕಂಡಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು.
ಇದರೊಂದಿಗೆ ಪಂದ್ಯಾವಳಿಯಲ್ಲಿ ನಾಲ್ಕು ಪಂದ್ಯಗಳನ್ನಾಡಿದ ಮುಂಬೈ ಮೂರನೇ ಜಯ ಸಾಧಿಸಿತು. ಇನ್ನೊಂದೆಡೆ ನಾಲ್ಕು ಪಂದ್ಯಗಳನ್ನಾಡಿದ ಪುಣೆ ವಾರಿಯರ್ಸ್ ತಂಡ 3 ಪಂದ್ಯಗಳಲ್ಲಿ ಸೋಲನುಭವಿಸಿ ಒಂದರಲ್ಲಿ ಮಾತ್ರ ಜಯ ಕಂಡುಕೊಂಡಿದೆ.
ಮುಂಬೈ ಪರ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ಎಡಗೈ ವೇಗದ ಬೌಲರ್ ಮಿಚೆಲ್ ಜಾನ್ಸನ್ 33 ರನ್ ನೀಡಿ 3 ವಿಕೆಟ್ ಕಬಳಿಸಿದರು. ಮೂರು ಓವರ್ಗಳಲ್ಲಿ 13 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡಿದ್ದ ಪುಣೆ ತಂಡ ನಂತರ ಚೇತರಿಸಿಕೊಳ್ಳಲೇ ಇಲ್ಲ.
ಪ್ರಮುಖ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ (24) ಮತ್ತು ನಾಯಕ ಏಂಜೆಲೋ ಮ್ಯಾಥ್ಯೂಸ್ (19) ಸಹ ವೈಫಲ್ಯ ಕಂಡಿದ್ದು ತಂಡಕ್ಕೆ ದುಬಾರಿಯಾಗಿ ಪರಿಣಿಸಿತು.
ಇನ್ನು, ನ್ಯೂಜಿಲೆಂಡ್ನ ಭರವಸೆಯ ಬ್ಯಾಟ್ಸ್ಮನ್ ರಾಸ್ ಟೇಲರ್ ಕೂಡ ಪುಣೆ ತಂಡದ ನೆರವಿಗೆ ಬರಲಿಲ್ಲ. ಕಳೆದ ಎರಡೂ ಆವೃತ್ತಿಗಳಿಂದ ಟೇಲರ್ ಯಾವುದೇ ಕೊಡುಗೆಯನ್ನು ನೀಡಿಲ್ಲ. ಟೇಲರ್ ಬದಲು ಸ್ಟೀವ್ ಸ್ಮಿತ್ಗೆ ಅವಕಾಶ ನೀಡಿದರೆ ಪುಣೆ ತಂಡಕ್ಕೆ ಕೊಂಚ ನೆರವಾಗಬಹುದು.
ಮಾರ್ಷ್ ತಕ್ಕಮಟ್ಟಿಗೆ ಶ್ರೇಷ್ಠ ಪ್ರದರ್ಶನ ನೀಡಿದರು. ಆದರೆ, ಅವರೊಂದಿಗೆ ಯಾವುದೇ ಆಟಗಾರನೂ ಉತ್ತಮ ಸಾಥ್ ನೀಡಲಿಲ್ಲ. ಹೀಗಾಗಿ ಪಂದ್ಯದಲ್ಲಿ ನಿರಂತರವಾಗಿ ಮುಂಬೈ ಇಂಡಿಯನ್ಸ್ ಬೌಲರ್ಗಳು ಯಶಸ್ವಿಯಾದರು. ಮುಂಬೈ ಪರ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನಾದರು.
ಮುಂಬೈ ಇಂಡಿಯನ್ಸ್ 183/3 (20 ಓವರ್)
ಪಾಂಟಿಂಗ್ ಸಿ ನಾಯರ್ ಬಿ ಯುವರಾಜ್ 14 (17), ತೆಂಡೂಲ್ಕರ್ ಸಿ ಮಾರ್ಷ್ ಬಿ ಫಿಂಚ್ 44 (29), ಕಾರ್ತಿಕ್ ಎಲ್ಬಿಡಬ್ಲ್ಯೂ ಬಿ ಮಾರ್ಷ್ 41 (29), ರೋಹಿತ್ ಅಜೇಯ 62 (32), ಪೊಲಾರ್ಡ್ ಅಜೇಯ 19 (14) ಇತರೆ3.
ವಿಕೆಟ್ ಪತನ: 1-54, 2-60, 3-115
ಬೌಲಿಂಗ್: ಫಿಂಚ್ 2-0-11-1, ಭುವನೇಶ್ವರ್ 2-0-16-0, ದಿಂಡಾ 4-0-63-0, ಶರ್ಮಾ 4-0-27-0, ಮ್ಯಾಥ್ಯೂಸ್ 4-0-29-0, ಯುವರಾಜ್ 2-0-13-1, ಮಾರ್ಷ್ 2-0-24-1
ಪುಣೆ ವಾರಿಯರ್ಸ್ 142/8 (20 ಓವರ್)
ಫಿಂಚ್ ಬಿ ಜಾನ್ಸನ್ 0 (1), ಉತ್ತಪ್ಪ ಬಿ ಜಾನ್ಸನ್ 7 (9), ಟೇಲರ್ ರನೌಟ್ (ರಾಯುಡು/ಓಜಾ) 4 (5), ಯುವರಾಜ್ ಸಿ ರಿಶಿ ಧವನ್ ಬಿ ಪೊಲಾರ್ಡ್ 24 (16), ಸುಮನ್ ಸಿ ಪೊಲಾರ್ಡ್ ಹರ್ಭಜನ್ 23 (15), ಮ್ಯಾಥ್ಯೂಸ್ ಸಿ ಶರ್ಮಾ ಬಿ ಓಜಾ 19 (18), ಮಾರ್ಷ್ ಸಿ ರಿಶಿ ಧವನ್ ಬಿ ಜಾನ್ಸನ್ 38 (26), ನಾಯರ್ ಸಿ ಪೊಲಾರ್ಡ್ ಬಿ ಮಾಲಿಂಗಾ 6 (7), ಭುವನೇಶ್ವರ್ ಅಜೇಯ 6 (11), ರಾಹುಲ್ ಶರ್ಮಾ ಅಜೇಯ 10 (12), ಇತರೆ 5.
ವಿಕೆಟ್ ಪತನ: 1-0, 2-5, 3-13, 4-38, 5-71, 6-89, 7-120, 8-127
ಬೌಲಿಂಗ್: ಜಾನ್ಸನ್ 4-0-33-3, ಓಜಾ 2-0-20-1, ಹರ್ಭಜನ್ 3-0-20-1, ಮಾಲಿಂಗಾ 4-0-22-1, ರಿಶಿ ಧವನ್ 4-0-27-0, ಪೊಲಾರ್ಡ್ 3-0-19-1
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

