ಎಐಎಫ್‌ಎಫ್‌ಗೆ ಫೀಫಾ ಮಾರ್ಗದರ್ಶನ
ನವದೆಹಲಿ: 2017ರ ಕಿರಿಯರ ವಿಶ್ವಕಪ್ ಆತಿಥ್ಯವಹಿಸಲು ಉತ್ಸುಕರಾಗಿರುವ ಅಖಿಲ ಭಾರತ ಫುಟ್ಬಾಲ್ ಸಂಸ್ಥೆಗೆ ತರಬೇತಿ ನೀಡಲು ಫೀಫಾ ಸಿದ್ಧವಾಗಿದೆ. ಪಂದ್ಯಾವಳಿಯ ಆಯೋಜನೆಗೆ ಮೂಲಭೂತ ವಸ್ತು ಸ್ಥಿತಿಯ ಬಗ್ಗೆ ಎಐಎಫ್‌ಎಫ್‌ನ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲು ಫೀಫಾ ಮುಂದೆ ಬಂದಿದೆ. 2013ರ ಕಿರಿಯರ ವಿಶ್ವಕಪ್ ಅನ್ನು ಯುನೈಟೆಡ್ ಎಮಿರೆಟ್ಸ್ ಎಫ್‌ಎ ಆಯೋಜಿಸುತ್ತಿದ್ದು, ಇತ್ತೀಚೆಗೆ ಈ ಪಂದ್ಯಾವಳಿಯ ಆಯೋಜನಾ ಸಮಿತಿಗೆ ತಮ್ಮ ಅಧಿಕಾರಿಗಳನ್ನು ಕಳುಹಿಸಿಕೊಡಲು ಎಐಎಫ್‌ಎಫ್‌ಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಇದರಿಂದ ಫುಟ್ಬಾಲ್‌ನ ಪ್ರಮುಖ ಪಂದ್ಯಾವಳಿಗಳನ್ನು ಆಯೋಜಿಸುವಾಗ ತಮ್ಮ ಮೊದಲ ಅನುಭವವನ್ನು ಪಡೆಯಲು ಅಧಿಕಾರಿಗಳಿಗೆ ಸಹಾಯವಾಗಲಿದೆ. ಎಐಎಫ್‌ಎಫ್‌ನ ಅಧ್ಯಕ್ಷ ಪ್ರಫುಲ್ ಪಟೇಲ್ 2017ರ 17 ವರ್ಷದೊಳಗಿನವರ ಕಿರಿಯರ ಫುಟ್ಬಾಲ್ ವಿಶ್ವಕಪ್ ಆತಿಥ್ಯಕ್ಕೆ ಬಿಡ್ ಮಾಡಲು ನಿರ್ಧರಿಸುವುದಾಗಿ ತಿಳಿಸಿದಾಗ, ವಿಶ್ವಕಪ್‌ನ ಆಯೋಜನಾ ಮಂಡಳಿಯಲ್ಲಿ ಎಐಎಫ್‌ಎಫ್‌ಗೆ ತನ್ನ ಅಧಿಕಾರಿಗಳನ್ನು ಕಳುಹಿಸಿಕೊಡಲು ಆಹ್ವಾನ ನೀಡಿದೆ ಎಂದು ಐ ಲೀಗ್‌ನ ಸಿಇಒ ಸುನಂದೊ ಧಾರ್ ತಿಳಿಸಿದ್ದಾರೆ. ಈ ಒಂದು ಪ್ರಯತ್ನವು ದೊಡ್ಡ ಪಂದ್ಯಾವಳಿಯನ್ನು ಹೇಗೆ ಆಯೋಜಿಸಬೇಕು ಎಂದು ತಿಳಿಯಲು ಅವಕಾಶ ಕಲ್ಪಿಸಿಕೊಡಲಿದೆ. ಅಲ್ಲದೆ ಪಂದ್ಯಾವಳಿಯನ್ನು ಸುಸೂತ್ರವಾಗಿ ಆಯೋಜಿಸಲು ಸಹಾಯವಾಗುತ್ತದೆ. ಅಲ್ಲದೆ ಪ್ರಮುಖ ಪಂದ್ಯಾವಳಿಯ ಆಯೋಜನಾ ಸಮಿತಿಯಲ್ಲಿ ಭಾಗವಾಗಿ ಕಾರ್ಯ ನಿರ್ವಹಿಸುವುದರಿಂದ ಪಂದ್ಯಾವಳಿಯ ಆಯೋಜನೆಯ ಕಲೆಯನ್ನು ಕರಗತ ಮಾಡಿಕೊಳ್ಳಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

