ಕ್ರೀಡೆ

ರಾಜಸ್ಥಾನಕ್ಕೆ ಸಾಧಾರಣ ಸವಾಲು

Published On :

ಜೈಪುರ: ಡೇವಿಡ್ ಹಸ್ಸಿ (41) ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಕಂಡ ಹಿನ್ನೆಲೆಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ರಾಜಸ್ಥಾನ ರಾಯಲ್ಸ್ ತಂಡಕ್ಕೆ 124 ರನ್‌ಗಳ ಸಧಾರಣ ಮೊತ್ತದ ಸವಾಲೊಡ್ಡಿದೆ.
ಟಾಸ್ ಗೆದ್ದರೂ ಫೀಲ್ಡಿಂಗ್ ಆಯ್ದುಕೊಂಡ ರಾಜಸ್ಥಾನ ತಂಡದ ಬೌಲರ್‌ಗಳು, ಪಂಜಾಬ್ ತಂಡದ ಬ್ಯಾಟ್ಸ್‌ಮನ್‌ಗಳನ್ನು 18.5 ಓವರ್‌ಗಳಲ್ಲೇ ಆಲೌಟ್ ಮಾಡಿದರು. ಈ ಮೂಲಕ ತಮ್ಮ ನಾಯಕ ತೆಗೆದುಕೊಂಡ ತೀರ್ಮಾನವನ್ನು ಸಮರ್ಥಿಸಿಕೊಂಡರು.
ಆರಂಭದಲ್ಲಿ ಮಂದೀಪ್ ಸಿಂಗ್ (2) ಮತ್ತು ಆ್ಯಡಂ ಗಿಲ್‌ಕ್ರಿಸ್ಟ್ (0) ಲಗುಬಗನೆ ಪೆವಿಲಿಯನ್ ಸೇರುವ ಮೂಲಕ ಪಂಜಾಬ್ ಆರಂಭಿಕ ಆಘಾತ ಅನುಭವಿಸಿತು. ನಂತರ ಬಂದ ಮನನ್ ವೋಹ್ರಾ (3) ಸಹ ಅರಂಭಿಕರ ಹಾದಿಯನ್ನೇ ಹಿಡಿದರು.
ಆದರೆ, ಡೇವಿಡ್ ಹಸ್ಸಿ ಮಾತ್ರ ರಾಜಸ್ಥಾನ ಬೌಲರ್‌ಗಳಿಗೆ ಕೊಂಚ ಪ್ರತಿರೋಧ ಒಡ್ಡಿದರು. 31 ಎಸೆತಗಳನ್ನು ಎದುರಿಸಿದ ಹಸ್ಸಿ ಮೊತ್ತದಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿಗಳು ಸೇರಿದ್ದವು. ಆದರೆ, ಸಿದ್ಧಾರ್ಥ್ ತ್ರಿವೇದಿ ಬೌಲಿಂಗ್‌ನಲ್ಲಿ ರಾಹುಲ್ ದ್ರಾವಿಡ್‌ಗೆ ಕ್ಯಾಚ್ ನೀಡಿದ ಹಸ್ಸಿ ನಿರಾಸೆ ಮೂಡಿಸಿದರು.
ಹಸ್ಸಿ ನಂತರ ಗುರುಕೀರತ ಸಿಂಗ್ (10) ಮತ್ತು ಆರ್. ಸತೀಶ್ (11) ಸಹ ರಾಜಸ್ಥಾನ ಬೌಲರ್‌ಗಳನ್ನು ಎದುರಿಸಲಾಗಲಿಲ್ಲ. ನಂತರ ಬಂದ ಅಜರ್ ಮೆಹ್ಮೂದ್ (23) ಕೊಂಚ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಂತೆಯೇ ಕೆ. ಕೂಪರ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಅಂತ್ಯದಲ್ಲಿ 7 ಎಸೆತಗಳಲ್ಲಿ 15 ರನ್ ಸಿಡಿಸಿದ ಪ್ರವೀಣ್ ಕುಮಾರ್ ತಂಡದ ಮೊತ್ತವನ್ನು 120ರ ಗಡಿ ದಾಟಿಸುವುದರೊಂದಿಗೆ ಭರವಸೆ ಮೂಡಿಸಿದ್ದರು. ಆದರೆ, ರನೌಟ್ ಆಗುವ ಮೂಲಕ ನಿರಾಸೆ ಮೂಡಿಸಿದರು.
ರಾಜಸ್ಥಾನ ರಾಯಲ್ಸ್ ತಂಡದ ಪರ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ಶ್ರೀಶಾಂತ್, ಕೆ. ಕೂಪರ್, ಫಾಕ್ನರ್ ಹಾಗೂ ಸಿದ್ಧಾರ್ಥ ತ್ರಿವೇದಿ ತಲಾ ಎರಡು ವಿಕೆಟ್ ಕಬಳಿಸಿದರು.
ಸ್ಕೋರ್ ಬೋರ್ಡ್ (ಅಪೂರ್ಣ)
ಕಿಂಗ್ಸ್ ಇಲೆವೆನ್ ಪಂಜಾಬ್: 124 (18.5 ಓವರ್)
ಮನದೀಪ್ ಸಿಂಗ್ ಸಿ ಬಿನ್ನಿ ಬಿ ಶ್ರೀಶಾಂತ್ 2 (8), ಗಿಲ್ ಕ್ರಿಸ್ಟ್ ಸಿ ತ್ರಿವೇದಿ ಬಿ ಶ್ರೀಶಾಂತ್ 0 (2), ಮನನ್ ವೊಹ್ರಾ ರನೌಟ್ (ಫಾಕ್ನರ್) 3 (6), ಡೇವಿಡ್ ಹಸ್ಸಿ ಸಿ ದ್ರಾವಿಡ್ ಬಿ ತ್ರಿವೇದಿ 41 (31), ಗುರ್‌ಕೀರತ್ ಸಿಂಗ್ ಸಿ ಸ್ಯಾಮ್ಸನ್ ಬಿ ತ್ರಿವೇದಿ 10 (15), ಸತೀಶ್ ಸಿ ಸ್ಯಾಮ್ಸನ್ ಬಿ ಫಾಕ್ನರ್ 11 (12), ಅಜರ್ ಮೆಹಮೂದ್ ಬಿ ಕೂಪರ್ 23 (20),  ಫಿಯೂಶ್ ಚಾವ್ಲಾ ಸಿ ರಹಾನೆ ಬಿ ಕೂಪರ್ 7 (9), ರಿಯಾನ್ ಹ್ಯಾರಿಸ್ ಅಜೇಯ 2 (3), ಪ್ರವೀಣ್ ಕುಮಾರ್ ರನೌಟ್ (ಸ್ಯಾಮ್ಸನ್) 15 (7), ಪರ್ವಿಂದರ್ ಆವಾನಾ ಸಿ ಸ್ಯಾಮ್ಸನ್ ಬಿ ಫಾಕ್ನರ್ 0 (1),
ವಿಕೆಟ್ ಪತನ: 1-5, 2-8, 3-10, 4-45, 5-67, 6-75, 7-92, 8-104, 9-124, 10-124.
ಬೌಲಿಂಗ್: ಚಾಂಡಿಲಾ 3-0-14-0, ಶ್ರೀಶಾಂತ್ 4-1-20-2, ಕೂಪರ್ 3-0-33-2, ಫಾಕ್ನರ್ 3.5-0-30-2, ತ್ರಿವೇದಿ 4-0-21-2, ಸ್ಟುವರ್ಟ್ ಬಿನ್ನಿ 1-0-4-0.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.