ಕ್ರೀಡೆ

ಬಾಸ್ಕೆಟ್‌ಬಾಲ್ ಪಿಪಿಸಿಗೆ ಜಯ

Published On :

ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 16 ವರ್ಷದೊಳಗಿನ ರಾಜ್ಯಮಟ್ಟದ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಭಾನುವಾರದ ಪಂದ್ಯದಲ್ಲಿ ಪಿಪಿಸಿ ತಂಡ ಸಿಜೆಸಿ ತಂಡವನ್ನು 28- 11 ಅಂಕಗಳಿಂದ ಸೋಲಿಸಿತು. ಇನ್ನು ಪ್ರೊಟೆಕ್ ಚಾಲೆಂಜರ್ಸ್ ಮೈಸೂರ್ ತಂಡ ರಾಜ್‌ಕುಮಾರ್ ಬಿಸಿ ತಂಡವನ್ನು 30- 12 ಅಂಕಗಳಿಂದ ಪರಾಭವಗೊಳಿಸಿತು. ಮೂರನೇ ಪಂದ್ಯದಲ್ಲಿ ಚಿತ್ರದುರ್ಗದ ದುರ್ಗನ್ಸ್ ತಂಡ ಬಾಗಲಕೋಟೆ ತಂಡವನ್ನು 40- 6 ಭಾರೀ ಅಂತರದಿಂದ ಸೋಲಿಸಿತು.
ನಾಲ್ಕನೇ ಪಂದ್ಯದಲ್ಲಿ ಅಪ್ಪಯ್ಯ ಕ್ಲಬ್, ಕನಕ ಕೋಲಾರ ತಂಡವನ್ನು 34- 25 ಅಂಕಗಳಿಂದ ಸೋಲಿಸಿತು. ಮತ್ತೊಂದು ಪಂದ್ಯದಲ್ಲಿ ಭರತ್ ತಂಡ ಎನ್‌ಜಿವಿ ಕ್ಲಬ್ ವಿರುದ್ಧ 37- 35 ಅಂಕಗಳಿಂದ ಜಯ ಸಾಧಿಸಿತು.ಆರನೇ ಪಂದ್ಯದಲ್ಲಿ ವಿವೇಕ್ಸ್ ಕ್ಲಬ್ ವಿಬಿಸಿ ಮಂಡ್ಯ ತಂಡವನ್ನು 31- 15 ಅಂಕಗಳಿಂದ ಪರಾಭವಗೊಳಿಸಿತು. ಬಾಲಕಿಯರ ವಿಭಾಗದಲ್ಲಿ ಹಲಸೂರು ತಂಡ ರಾಜ್‌ಕುಮಾರ್ ಕ್ಲಬ್ ಅನ್ನು 40- 04 ಅಂತರದಿಂದ ಹಿಮ್ಮೆಟ್ಟಿಸಿತು. ಎರಡನೇ ಪಂದ್ಯದಲ್ಲಿ ವಿದ್ಯಾನಗರದ ಎಸ್‌ಪಿ ಸ್ಕೂಲ್ ತಂಡ ರೋವರ್ಸ್ ಧಾರವಾಡ ತಂಡವನ್ನು 36- 16 ಅಂಕಗಳಿಂದ ಸೋಲಿಸಿತು.
ಮೂರನೇ ಪಂದ್ಯದಲ್ಲಿ ಶಿವಮೊಗ್ಗ ಯೂತ್ಸ್ ತಂಡ ವಿವೇಕ್ಸ್ ಕ್ಲಬ್ ವಿರುದ್ಧ 25- 14 ಅಂಕಗಳ ಅಂತರದಿಂದ ವಿಜಯ ಸಾಧಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.