ಕಿಂಗ್ಸ್ಗೆ ಸೂಪರ್ ಸೋಲು
ಚೆನ್ನೈ: ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ತನ್ನ ತವರಿನ ಅಂಗಳದಲ್ಲಿ ಸೋಮವಾರ ನಡೆದ ಪುಣೆ ವಾರಿಯರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ 24 ರನ್ಗಳ ಪರಾಭವ ಅನುಭವಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಪುಣೆ, ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 135 ರನ್ ಮಾತ್ರ ಗಳಿಸಲು ಶಕ್ತವಾಯಿತು.
ಆರಂಭಿಕರಾಗಿ ಕಣಕ್ಕಿಳಿದ ಆ್ಯರನ್ ಫಿಂಚ್ ಹಾಗೂ ರಾಬಿನ್ ಉತ್ತಪ್ಪ, ತಂಡಕ್ಕೆ ಭರ್ಜರಿಯ ಆರಂಭವನ್ನೇ ಒದಗಿಸಿ ಕೊಟ್ಟರು.
ಫಿಂಚ್ (67) ಅವರ ಭರ್ಜರಿ ಬ್ಯಾಟಿಂಗ್ ಜೊತೆಗೆ, ಉತ್ತಪ್ಪ (26) ತಂಡ ಉತ್ತಮ ಮೊತ್ತದತ್ತ ದಾಪುಗಾಲಿಟ್ಟಿತು. ಇನ್ನಿಂಗ್ಸ್ನ ಅಂತಿಮ ಹಂತದಲ್ಲಿ, ಸ್ಟೀವ್ ಸ್ಮಿತ್ ಹಾಗೂ ಮನಿಷ್ ಪಾಂಡೆ - ಇಬ್ಬರ ಬಿರುಸಿನ ಆಟದ ಪರಿಣಾಮ, ಪುಣೆ ತಂಡ 159 ರನ್ ಗಳಿಸಿತು.
ಕೈ ಕೊಟ್ಟ ರೈನಾ, ಧೋನಿ: ಪುಣೆ ನೀಡಿದ್ದ 160 ರನ್ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ 20 ರನ್ಗಳಿಗೆ ಕೇವಲ 135 ರನ್ ಮಾತ್ರ ಗಳಿಸಲು ಶಕ್ತವಾಯಿತು. ಶೂನ್ಯಕ್ಕೇ ಆರಂಭಿಕ ಅನಿರುದ್ಧ್ ಅವರನ್ನು ಕಳೆದುಕೊಂಡ ತಂಡ, ಆನಂತರ ಸಿಡಿಲಬ್ಬರದ ಆಟಗಾರರಾದ ಸುರೇಶ್ ರೈನಾ (8) ಹಾಗೂ ಧೋನಿ (10) ಅವರನ್ನೂ ಬೇಗನೇ ಕಳೆದುಕೊಂಡಿತು. ಇನ್ನು, ಅಂತಿಮ ಕ್ರಮಾಂಕದ ಬ್ರಾವೋ, ಮೊರ್ಕೆಲ್ ಸಹ ಇನಿಂಗ್ಸ್ಗೆ ಶಕ್ತಿ ತುಂಬುವಲ್ಲಿ ವಿಫಲರಾದರು.
ಆರಂಭಿಕ ಮುರಳಿ ವಿಜಯ್, ಮಧ್ಯಮ ಕ್ರಮಾಂಕದ ಬದ್ರೀನಾಥ್ ಹಾಗೂ ರವೀಂದ್ರ ಜಡೇಜಾ ಕೊಂಚ ಬಿರುಸಾಗಿ ಬ್ಯಾಟ್ ಬೀಸುತ್ತಾ ತಂಡವನ್ನು ಗೆಲುವಿನ ಹಾದಿಗೆ ತರಲು ಪ್ರಯತ್ನಿಸಿದರಾದರೂ ಅದು ಯಶಸ್ವಿಯಾಗಲಿಲ್ಲ.
ಪುಣೆ ತಂಡದ ಸ್ಮಿತ್ ಪಂದ್ಯಶ್ರೇಷ್ಠ ಗೌರವ ಪಡೆದರು.
ಸ್ಕೋರ್ ಬೋರ್ಡ್
ಪುಣೆ ವಾರಿಯರ್ಸ್ 159/5 (20 ಓವರ್); ಉತ್ತಪ್ಪ ಸಿ ಜಡೇಜಾ ಬಿ ಮೊರಿಸ್ 26 (33), ಆ್ಯರೋನ್ ಫಿಂಚ್ ಸ್ಟಂಪ್ ಧೋನಿ ಬಿ ಜಡೇಜಾ 67 (45), ರಾಸ್ ಟೇಲರ್ ಸಿ ಜಡೇಜಾ ಬಿ ಮೊರಿಸ್ 8 (13), ಸ್ಟೀವನ್ ಸ್ಮಿತ್ ಅಜೇಯ 39 (16), ಮಾರ್ಷ್ ಸಿ ಮಾರ್ಕೆಲ್ ಬಿ ಬ್ರಾವೋ 2 (4), ಪಾಂಡೆ ಬಿ ಬ್ರಾವೋ 9 (8), ನಾಯರ್ ಅಜೇಯ 0 (1), ಇತರೆ 8; ವಿಕೆಟ್ ಪತನ: 1-96, 2-101, 3-118, 4-128, 5-159.ಬೌಲಿಂಗ್: ಡರ್ಕ್ ನ್ಯಾನಿಸ್ 4-0-42-0, ಜಡೇಜಾ 4-0-27-1, ಅಶ್ವಿನ್ 4-0-24-0, ಮೊರಿಸ್ 4-0-25-2, ಬ್ರಾವೋ 4-0-35-2.
ಸಿಎಸ್ಕೆ: 135/8 (20 ಓವರ್); ಅನಿರುದ್ಧ ಎಲ್ಬಿಡಬ್ಲ್ಯೂ ಬಿ ಕುಮಾರ್ 0 (2), ಮುರಳಿ ವಿಜಯ್ ಸಿ ಟೇಲರ್ ಬಿ ಕುಮಾರ್ 24 (22), ಸುರೇಶ್ ರೈನಾ ಸಿ ಸುಮನ್ ಬಿ ಕುಮಾರ್ 8 (10), ಬದ್ರೀನಾಥ್ ಸಿ ಸ್ಮಿತ್ ಬಿ ಮಾರ್ಷ್ 34 (26), ರವೀಂದ್ರ ಜಡೇಜಾ ಸಿ ದಿಂಡಾ ಬಿ ಮಾರ್ಷ್ 27 (22), ಧೋನಿ ಸಿ ಸ್ಮಿತ್ ಬಿ ದಿಂಡಾ 10 (13), ಬ್ರಾವೋ ಸಿ ಸ್ಮಿತ್ ಬಿ ಶರ್ಮಾ 1 (4), ಮೊರ್ಕೆಲ್ ಸಿ ಫಿಂಚ್ ಬಿ ದಿಂಡಾ 13 (11), ಕ್ರಿಸ್ ಮೊರಿಸ್ ಅಜೇಯ 5 (5), ಅಶ್ವಿನ್ ಅಜೇಯ 11 (5). ಇತರೆ 2 ; ವಿಕೆಟ್ ಪತನ: 1-0, 2-23, 3-40, 4-86, 5-98, 6-104, 7-115, 8-124 ; ಬೌಲಿಂಗ್: ಭುವನೇಶ್ವರ್ ಕುಮಾರ್ 4-1-12-2, ಅಶೋಕ್ ದಿಂಡಾ 4-0-34-2, ಮಾರ್ಷ್ 4-0-35-2, ಅಭಿಷೇಕ್ ನಾಯರ್ 4-0-21-1, ಫಿಂಚ್ 3-0-21-1, ರಾಹುಲ್ ಶರ್ಮಾ 4-0-24-1.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

