ನೆಹ್ವಾಲ್ ಗೆಲ್ಲುವ ವಿಶ್ವಾಸವಿದೆ: ಗೋಪಿಚಂದ್
ನವದೆಹಲಿ: ಇಂಡಿಯಾ ಓಪನ್ ಪಂದ್ಯಾವಳಿಗಾಗಿ ತಮ್ಮ ಶಿಷ್ಯೆಯ ತಯಾರಿ ಬಗ್ಗೆ ಮಾತನಾಡಿದ ತರಬೇತುದಾರ ಪುಲ್ಲೇಲ ಗೋಪಿಚಂದ್. 'ಪಂದ್ಯಾವಳಿಗಾಗಿ ಕಠಿಣ ಅಭ್ಯಾಸದಲ್ಲಿ ಸೈನಾ ತೊಡಗಿದ್ದಾರೆ. ಯೋಜಿತ ರೀತಿಯಲ್ಲೇ ಕರಾರುವಾಕ್ ಆಗಿ ಅಭ್ಯಾಸ ನಡೆಯುತ್ತಿದೆ. ಇತ್ತೀಚೆಗೆ ನಡೆದ ಆಲ್-ಇಂಗ್ಲೆಂಡ್ ಹಾಗೂ ಸ್ವಿಸ್ ಓಪನ್ ಪಂದ್ಯಾವಳಿಗಳ ನಂತರ, ಇಂಡಿಯಾ ಓಪನ್ ಪಂದ್ಯಾವಳಿಗಾಗಿ ತಯಾರಿ ನಡೆಸಲು ಸಾಕಷ್ಟು ಸಮಯಾವಕಾಶ ಸಿಕ್ಕಿದೆ. ಏಷ್ಯನ್ ಚಾಂಪಿಯನ್ಷಿಪ್ ಕೂಡಾ ಹತ್ತಿರವೇ ಇರುವುದರಿಂದ, ಇಂಡಿಯಾ ಓಪನ್ ಹಾಗೂ ಏಷ್ಯನ್ ಚಾಂಪಿಯನ್ಷಿಪ್ - 2ಕ್ಕೂ ತಯಾರಿ ನಡೆಸಲಾಗುತ್ತಿದೆ' ಎಂದರು. 'ಈ ಪಂದ್ಯಾವಳಿಯಲ್ಲಿ ಸೈನಾ ಹಾಗೂ ನನ್ನ ಮತ್ತೊಬ್ಬ ಶಿಷ್ಯ ಪರುಪಳ್ಳಿ ಕಶ್ಯಪ್ ಇಬ್ಬರೂ ಭಾಗವಹಿಸುತ್ತಿದ್ದಾರೆ. ಇವರಲ್ಲದೇ, ನನ್ನಲ್ಲಿ ತರಬೇತಿ ಪಡೆಯುತ್ತಿರುವ ಇತರರೂ ಭಾಗವಹಿಸುತ್ತಿದ್ದಾರೆ. ಇತ್ತೀಚಿನ ಪಂದ್ಯಾವಳಿಗಳಲ್ಲಿ ನನ್ನ ಶಿಷ್ಯರು ಉತ್ತಮ ಪ್ರದರ್ಶನ ನೀಡಿದ್ದು, ಯಾರಾದರೊಬ್ಬರು ಪ್ರಶಸ್ತಿ ಗೆಲ್ಲುತ್ತಾರೆಂಬ ವಿಶ್ವಾಸವಿದೆ. ಮಿಶ್ರ ಡಬಲ್ಸ್ನಲ್ಲಿ ಜ್ವಾಲಾ ಗುಟ್ಟಾ- ಡಿಜು ಅಥವಾ ಅಶ್ವಿನಿ ಪೊನ್ನಪ್ಪ- ಪ್ರಧಾನ್ಯ ಭಾಗವಹಿಸಲಿದ್ದು, ಅವರ ಪ್ರದರ್ಶನವೂ ನನ್ನಲ್ಲಿ ಕುತೂಹಲ ಮೂಡಿಸಿದೆ' ಎಂದು ಗೋಪಿಚಂದ್ ಅಭಿಪ್ರಾಯಪಟ್ಟರು.
ಉತ್ತಮ ಅವಕಾಶ: 'ನನ್ನಲ್ಲಿ ತರಬೇತಿ ಪಡೆಯುತ್ತಿರುವ ಹಲವಾರು ಯುವ ಪ್ರತಿಭೆಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ಅವರೆಲ್ಲರಿಗೂ, ವಿಶ್ವದ ಉತ್ತಮ ಆಟಗಾರರನ್ನು ಎದುರಿಸುವ ಅವಕಾಶ ಲಭ್ಯವಾಗುತ್ತದೆ. ಇದು ಅವರ ಸಾಮರ್ಥ್ಯವನ್ನು ಅರಿಯಲು ನೆರವಾಗುತ್ತದೆ' ಎಂದು ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

