ಮಿಂಚು ಹರಿಸಿದ ಫಿಂಚ್
ಚೆನ್ನೈ: ಸೋಲಿನ ಸರಪಳಿಯಿಂದ ಹೊರ ಬರಲು ಪ್ರಯತ್ನಿಸುತ್ತಿರುವ ಪುಣೆ ವಾರಿಯರ್ಸ್ ತಂಡ ಸೋಮವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 159 ರನ್ಗಳ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಪುಣೆ ವಾರಿಯರ್ಸ್ ಆರಂಭದಲ್ಲಿ ಭರ್ಜರಿಯ ಬ್ಯಾಟಿಂಗ್ ನಡೆಸಿದರೂ, ಇನಿಂಗ್ಸ್ನ ಅಂತಿಮ ಓವರ್ಗಳಲ್ಲಿ ನಿರಂತರ ವಿಕೆಟ್ ಕಳೆದುಕೊಂಡ ಹಿನ್ನಲೆಯಲ್ಲಿ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 159 ರನ್ ಕಲೆ ಹಾಕಿತು.
ಆರಂಭಿಕರಾಗಿ ಕಣಕ್ಕಿಳಿದ ಆ್ಯರನ್ ಫಿಂಚ್ ಹಾಗೂ ರಾಬಿನ್ ಉತ್ತಪ್ಪ, ತಂಡಕ್ಕೆ ಭರ್ಜರಿಯ ಆರಂಭವನ್ನೇ ಒದಗಿಸಿ ಕೊಟ್ಟರು.
ಮೊದಲ ವಿಕೆಟ್ಗೆ 96 ರನ್ಗಳ ಜತೆಯಾಟ ನೀಡಿದ ಈ ಜೋಡಿ 12.3 ನೇ ಓವರ್ನಲ್ಲಿ ಜಡೇಜಾ ಎಸೆತದಲ್ಲಿ ಫಿಂಚ್ (67) ಸ್ಟಂಪ್ ಆಗುವ ಮೂಲಕ ಬೇರ್ಪಟ್ಟಿತು. ಇದಾದ ಕೆಲವೇ ಹೊತ್ತಿನಲ್ಲೇ ಉತ್ತಪ್ಪ (26) ಮೊರಿಸ್ ಎಸೆತದಲ್ಲಿ ಜಡೇಜಾಗೆ ಕ್ಯಾಚ್ ನೀಡಿದರು.
ನಂತರ ಬಂದ ಟೇಲರ್ ಹಾಗೂ ಮಿಚ್ಚೆಲ್ ಮಾರ್ಷ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಕೇವಲ 8 ರನ್ಗಳಿಸಿದ್ದ ಟೇಲರ್ ಮೊರಿಸ್ ಎಸೆತದಲ್ಲಿ ಜಡೇಜಾಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರೆ, ಕೇವಲ 2 ರನ್ಗಳಿಸಿದ್ದ ಮಾರ್ಷ್ ಬ್ರಾವೊ ಎಸೆತದಲ್ಲಿ ಮಾರ್ಕೆಲ್ಗೆ ಕ್ಯಾಚ್ ನೀಡಿ ಹೊರ ನಡೆದರು.
ನಂತರ ಜತೆಯಾದ ಸ್ಟೀವ್ ಸ್ಮಿತ್ ಹಾಗೂ ಮನಿಷ್ ಪಾಂಡೆ ಅಂತಿಮ ಓವರ್ನಲ್ಲಿ ಬಿರುಸಿನ ಆಟಕ್ಕೆ ಮುಂದಾದರು. ಅಂತಿಮ 16 ಎಸೆತಗಳನ್ನು ಎದುರಿಸಿದ ಈ ಜೋಡಿ 31 ರನ್ಗಳಿಸಿತು. ಈ ಜತೆಯಾಟದ ಮೂಲಕ ಪುಣೆ ತಂಡ 159 ರನ್ಗಳ ಸ್ಫರ್ಧಾತ್ಮಕ ಮೊತ್ತವನ್ನು ಪೇರಿಸಲು ಸಹಾಯ ಮಾಡಿದರು.
ಸ್ಕೋರ್ ಬೋರ್ಡ್
ಪುಣೆ ವಾರಿಯರ್ಸ್ 159/5 (20 ಓವರ್)
ಉತ್ತಪ್ಪ ಸಿ ಜಡೇಜಾ ಬಿ ಮೊರಿಸ್ 26 (33), ಆ್ಯರೋನ್ ಫಿಂಚ್ ಸ್ಟಂಪ್ ಧೋನಿ ಬಿ ಜಡೇಜಾ 67 (45), ರಾಸ್ ಟೇಲರ್ ಸಿ ಜಡೇಜಾ ಬಿ ಮೊರಿಸ್ 8 (13), ಸ್ಟೀವನ್ ಸ್ಮಿತ್ ಅಜೇಯ 39 (16), ಮಾರ್ಷ್ ಸಿ ಮಾರ್ಕೆಲ್ ಬಿ ಬ್ರಾವೋ 2 (4), ಪಾಂಡೆ ಬಿ ಬ್ರಾವೋ 9 (8), ನಾಯರ್ ಅಜೇಯ 0 (1), ಇತರೆ 8.
ವಿಕೆಟ್ ಪತನ: 1-96, 2-101, 3-118, 4-128, 5-159.ಬೌಲಿಂಗ್: ಡರ್ಕ್ ನ್ಯಾನಿಸ್ 4-0-42-0, ಜಡೇಜಾ 4-0-27-1, ಅಶ್ವಿನ್ 4-0-24-0, ಮೊರಿಸ್ 4-0-25-2, ಬ್ರಾವೋ 4-0-35-2.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

