ಕ್ರೀಡೆ

ವಿಶ್ವಕಪ್ ಟಿಕೆಟ್ ನೀಡಲು ಟಿಕೆಟ್‌ಟೆಕ್

Published On :

ನವದೆಹಲಿ: 2015 ಐಸಿಸಿ ವಿಶ್ವಕಪ್‌ಗೆ ಟಿಕೆಟ್ ನೀಡಲು ಪಂದ್ಯಾವಳಿಯ ಸಂಘಟಕರು ಟಿಕೆಟ್‌ಟೆಕ್‌ಗೆ ಪಾಲುದಾರಿಕೆ ನೀಡಿದ್ದಾರೆ. ಪ್ರತಿಷ್ಠಿತ ಪಂದ್ಯಾವಳಿಯ ಆತಿಥ್ಯವನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿಯಾಗಿ ವಹಿಸಿಕೊಂಡಿವೆ. 'ಆತಿಥೇಯ ರಾಷ್ಟ್ರಗಳ ಮತ್ತು ವಿಶ್ವದಾದ್ಯಂತ ಅಭಿಮಾನಿಗಳಿಗೆ ಟಿಕೆಟ್ ಪೂರೈಸಲು ಟಿಕೆಟ್‌ಟೆಕ್ ನಮಗೆ ನೆರವಾಗಲಿದೆ' ಎಂದು 2015ರ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾನ್ ಹಾರ್ಡೆನ್ ತಿಳಿಸಿದರು. ಪಂದ್ಯಾಳಿಗೆ ಟಿಕೆಟ್ ಸೇವೆ ಸಲ್ಲಿಸಲು ನಮ್ಮ ಕಂಪನಿ ಹೆಮ್ಮೆ ಪಡುತ್ತದೆ ಎಂದು ಟಿಕೆಟ್‌ಟೆಕ್ ಸಿಇಓ ಜೆಫ್ ಜೋನ್ಸ್ ತಿಳಿಸಿದ್ದಾರೆ. 'ಟಿಕೆಟ್‌ಟೆಕ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಲ್ಲಿ ನಡೆಯುವ ಪ್ರಮುಖ ಕ್ರೀಡಾಕೂಟಗಳಿಗೆ ಟಿಕೆಟ್ ಒದಗಿಸುವ ಪ್ರಮುಖ ಕಂಪನಿಯಾಗಿದೆ. ವಿಶ್ವಕಪ್ ಅಭಿಮಾನಿಗಳಿಗೆ ಸರಳವಾದ ರೀತಿಯಲ್ಲಿ ಟಿಕೆಟ್ ನೀಡಲು ನಾವು ಎಲ್ಲ ರೀತಿ ಆಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ' ಎಂದು ಜೋನ್ಸ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.