ಪಂಜಾಬ್ ಕಿಂಗ್ಸ್ಗೆ ಸತ್ವ ಪರೀಕ್ಷೆ
ಮೊಹಾಲಿ: ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸತ್ವ ಪರೀಕ್ಷೆ ಎದುರಾಗಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ವಿರುದ್ಧ 48 ರನ್ಗಳ ಅಂತರದಿಂದ ಗೆಲ್ಲುವ ಮೂಲಕ, ಜಯದ ಹಳಿಗೆ ಮರಳಿರುವ ಬಲಿಷ್ಠ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಮನೆಯಂಗಣದಲ್ಲಿ ಪಂಜಾಬ್ ಯಾವ ರೀತಿಯ ಸವಾಲೊಡ್ಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಪುಣೆ ವಾರಿಯರ್ಸ್ ವಿರುದ್ಧ ಜಯ ಸಾಧಿಸುವ ಮೂಲಕ ಕಿಂಗ್ಸ್ ಇಲೆವೆನ್ ಪಂಜಾಬ್ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿತ್ತು. ಆದರೆ, ನಂತರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಗಳಲ್ಲಿ ಅದೇ ರೀತಿಯ ಪ್ರದರ್ಶನ ಮುಂದುವರಿಸುವಲ್ಲಿ ವಿಫಲವಾಯಿತು.
ಭಾನುವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಆಟಗಾರರು ನೀರಸವಾದ ಪ್ರದರ್ಶನ ನೀಡಿದ್ದರು. ಅಲ್ಲದೆ ಪಂದ್ಯದಲ್ಲಿ ರಾಜಸ್ಥಾನ 6 ವಿಕೆಟ್ಗಳ ಅಂತರದಿಂದ ಸುಲಭವಾಗಿ ಜಯ ಕಂಡುಕೊಂಡಿತ್ತು.
ಆ್ಯಡಂ ಗಿಲ್ಕ್ರಿಸ್ಟ್ ನಾಯಕತ್ವದ ತಂಡ ಕಳೆದ ಎರಡು ಪಂದ್ಯಗಳಲ್ಲಿ 20 ಓವರ್ಗಳು ಪೂರ್ಣಗೊಳ್ಳುವವರೆಗೂ ಬ್ಯಾಟಿಂಗ್ ನಡೆಸಲು ವೈಫಲ್ಯ ಕಾಣುತ್ತಿರುವುದು, ತಂಡದ ಮತ್ತೊಂದು ಪ್ರಮುಖ ವೈಫಲ್ಯವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಇನ್ನೂ ಒಂದು ಎಸೆತ ಬಾಕಿ ಇರುವಂತೆಯೇ ಆಲೌಟ್ ಆಗಿದ್ದ ಪಂಜಾಬ್, ನಂತರ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 19 ಓವರ್ಗಳು ಪೂರ್ಣಗೊಳ್ಳುವುದರೊಳಗೆ ಆಲೌಟ್ ಆಗಿತ್ತು.
ಪಂಜಾಬ್ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂನಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಕಿಂಗ್ಸ್ ಗೆಲ್ಲಬೇಕಾದರೆ, ತಂಡದ ಪ್ರಮುಖ ದಾಂಡಿಗರಾದ ಗಿಲ್ಕ್ರಿಸ್ಟ್, ಡೇವಿಡ್ ಹಸ್ಸಿ, ಮಂದೀಪ್ ಸಿಂಗ್, ಗುರುಕೀರತ್ ಸಿಂಗ್ ಹಾಗೂ ಆರ್. ಸತೀಶ್ ತಂಡಕ್ಕೆ ಬ್ಯಾಟಿಂಗ್ ವಿಭಾಗದಲ್ಲಿ ಆಶ್ರಯವಾಗಬೇಕಿದೆ.
ಪಂಜಾಬ್ ತಂಡದಲ್ಲಿ ಇದುವರೆಗೂ ಡೇವಿಡ್ ಹಸ್ಸಿ ಮಾತ್ರ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಅಲ್ಲದೆ, ಹಸ್ಸಿ ಬ್ಯಾಟಿಂಗ್ ಸ್ಥಿರತೆ ಕಾಪಾಡಿಕೊಳ್ಳುವುದು ತಂಡಕ್ಕೆ ಅಗತ್ಯವಾಗಿದೆ.
ಬೌಲಿಂಗ್ ವಿಭಾಗದಲ್ಲಿ ವೇಗಿ ಪ್ರವೀಣ್ ಕುಮಾರ್ ನಾಯಕತ್ವದ ರೆಯಾನ್ ಹ್ಯಾರೀಸ್, ಅಜರ್ ಮೆಹಮೂದ್ ಹಾಗೂ ಪರ್ವಿಂದರ್ ಅವಾನಾ ತಂಡಕ್ಕೆ ನೆರವಾಗುತ್ತಿದ್ದಾರೆ. ಆದರೆ, ಸ್ಪಿನ್ನರ್ ಪಿಯುಶ್ ಚಾವ್ಲಾ ಇನ್ನೂ ದಿಟ್ಟ ಪ್ರದರ್ಶನ ತೋರಬೇಕಾಗಿದೆ. ಕೆಕೆಆರ್ ತಂಡವನ್ನು ನಿಯಂತ್ರಿಸಬೇಕಾದರೆ, ಅತಿಥೇಯ ತಂಡದ ಬೌಲರ್ಗಳು ಒಟ್ಟಾಗಿ ಹೋರಾಟ ನಡೆಸಬೇಕಾಗಿದೆ ಅಗತ್ಯವಿದೆ.
ಇನ್ನೊಂದೆಡೆ, ದುರ್ಬಲ ಎದುರಾಳಿ ವಿರುದ್ಧ ದೊರಕುವ ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಕೋಲ್ಕತಾ ನೈಟ್ ರೈಡರ್ಸ್ ಎದುರು ನೋಡುತ್ತಿದೆ.
ಭಾನುವಾರ ಸನ್ರೈಸರ್ಸ್ ವಿರುದ್ಧ ನೀಡಿದ ಪ್ರದರ್ಶನವನ್ನೇ ಪಂಜಾಬ್ ವಿರುದ್ಧ ಮರುಕಳಿಸಲು ನೋಡುತ್ತಿದೆ ಕೋಲ್ಕತಾ ನೈಟ್ ರೈಡರ್ಸ್.
ನಾಯಕ ಗೌತಮ್ ಗಂಭೀರ್ (53), ಇಯಾನ್ ಮಾರ್ಗನ್ (47) ಹಾಗೂ ಜಾಕ್ ಕಾಲಿಸ್ (41) ಈ ಮೂವರು ಬ್ಯಾಟ್ಸ್ಮನ್ಗಳು ಹೈದರಾಬಾದ್ ವಿರುದ್ಧ ಬ್ಯಾಟಿಂಗ್ ವಿಭಾಗದಲ್ಲಿ ತಂಡಕ್ಕೆ ಮಹತ್ವದ ಕೊಡುಗೆ ನೀಡಿದ್ದರು. ಹೀಗಾಗಿ ಕೋಲ್ಕತಾ ಪಂದ್ಯದಲ್ಲಿ 180 ರನ್ಗಳ ಬೃಹತ್ ಕಲೆ ಹಾಕಲು ಕಾರಣವಾಗಿತ್ತು.
ಇಡೀ ತಂಡ ಒಗ್ಗಟ್ಟಾಗಿ ಪ್ರದರ್ಶನ ನೀಡಿದರೆ ಮಾತ್ರ ಜಯ ಕಾಣಲು ಸಾಧ್ಯ. ಹೀಗಾಗಿ ಪಂಜಾಬ್ ವಿರುದ್ಧ ಸಹ ನೈಟ್ ರೈಡರ್ಸ್ ಒಗ್ಗಟ್ಟಾಗಿ ಪ್ರದರ್ಶನ ನೀಡುವ ಅಗತ್ಯವಿದೆ. ಬ್ರೆಟ್ ಲೀ ಮತ್ತು ಲಕ್ಷ್ಮೀಪತಿ ಬಾಲಾಜಿ ಮೊಹಾಲಿಯ ವೇಗದ, ಬೌನ್ಸಿ ಪಿಚ್ನಲ್ಲಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಪಂಜಾಬ್
ಆ್ಯಡಮ್ ಗಿಲ್ಕ್ರಿಸ್ಟ್, ಶಾನ್ ಮಾರ್ಷ್, ಡೇವಿಡ್ ಹಸ್ಸಿ, ಡೇವಿಡ್ ಆ್ಯಂಡ್ರೂ ಮಿಲ್ಲರ್, ರೆಯಾನ್ ಹ್ಯಾರಿಸ್, ಡಿಮಿಟ್ರಿ ಮಸ್ಕೆರೆನ್ಹ್ಯಾಸ್, ಅಜರ್ ಮೆಹಮೂದ್, ಪಿಯೂಶ್ ಚಾವ್ಲಾ, ಪ್ರವೀಣ್ ಕುಮಾರ್, ಮನದೀಪ್ ಸಿಂಗ್, ಸಿದ್ದಾರ್ಥ್ ಚಿಂಟಿಸ್, ನಿತಿನ್ ಸೈನಿ, ಸನ್ನಿ ಸಿಂಗ್, ಭಾರ್ಗವ್ ಭಟ್, ಬಿಪುಲ್ ಶರ್ಮಾ, ಪಾಲ್ ಚಂದ್ರಶೇಖರ್ ವಾಲ್ತಾಟಿ, ಲ್ಯೂಕ್ ಪ್ಯುಮರ್ಬ್ಯಾಚ್, ಮನ್ಪ್ರೀತ್ ಸಿಂಗ್ ಗೋನಿ, ಗುರ್ಕೀರತ್ ರೂಪಿಂದರ್ ಸಿಂಗ್, ಪರ್ವಿಂದರ್ ಆವಾನಾ, ರಾಜಗೋಪಾಲ್ ಸತೀಶ್.
ನೈಟ್ ರೈಡರ್ಸ್
ಗೌತಮ್ ಗಂಭೀರ್ (ನಾಯಕ), ಇಯಾನ್ ಮಾರ್ಗನ್, ಮನೋಜ್ ತಿವಾರಿ, ದೇಬಬ್ರತಾ ದಾಸ್, ಬ್ರಾಡ್ ಹ್ಯಾಡಿನ್, ಮನ್ವಿಂದರ್ ಬಿಸ್ಲಾ, ಬ್ರೆಂಡನ್ ಮೆಕಲಂ, ಶಕೀಬ್ ಅಲ್ ಹಸನ್, ರಿಯಾನ್ ಟೆನ್ ಡಸ್ಕೇಟ್, ಜಾಕ್ ಕಾಲಿಸ್, ಯೂಸುಫ್ ಪಠಾಣ್, ಲಕ್ಷ್ಮೀ ರತನ್ ಶುಕ್ಲಾ, ರಜತ್ ಭಾಟಿಯಾ, ರಿಯಾನ್ ಮೆಕ್ಲಾರೆನ್, ಬ್ರೆಟ್ ಲೀ, ಲಕ್ಷ್ಮೀಪತಿ ಬಾಲಾಜಿ, ಇಕ್ಬಾಲ್ ಅಬ್ದುಲ್ಲಾ, ಮಹಮ್ಮದ್ ಶಮಿ, ಪ್ರದೀಪ್ ಸಾಂಗ್ವಾನ್, ಸರಬ್ಜೀತ್ ಲಡ್ಡಾ, ಸುನಿಲ್ ನಾರಾಯಣ್, ಸಚಿತ್ರಾ ಸೇನಾನಾಯಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

