ಆರ್ಸಿಬಿಗೆ ಸ್ಪರ್ಧಾತ್ಮಕ ಸವಾಲು
ಬೆಂಗಳೂರು: ಪಂದ್ಯದ ಅಂತಿಮ ಓವರ್ಗಳಲ್ಲಿ ಕೇದಾರ್ ಜಾಧವ್ (29) ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಆರ್ಸಿಬಿಗೆ 153 ರನ್ಗಳ ಸ್ಪರ್ಧಾತ್ಮಕ ಸವಾಲೊಡ್ಡಿತು.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಡೆಲ್ಲಿ ತಂಡದ ಆರಂಭಿಕರಾದ ವೀರೇಂದ್ರ ಸೆಹ್ವಾಗ್ (25) ಮತ್ತು ಡೇವಿಡ್ ವಾರ್ನರ್ (15) ಭದ್ರ ಬುನಾದಿಯನ್ನೇ ಹಾಕಿದ್ದರು. ಆದರೆ, ನಂತರ ಮಧ್ಯಮ ಕ್ರಮಾಂಕದಲ್ಲಿ ಜಯವರ್ಧನೆ (28) ಹೊರತುಪಡಿಸಿದರೆ ಉಳಿದ ಬ್ಯಾಟ್ಸ್ಮನ್ಗಳು ವೈಫಲ್ಯ ಕಾಣುವ ಮೂಲಕ 5 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿತು.
ಆರ್ಸಿಬಿ ಪರ ಜಯದೇವ್ ಉನಾದ್ಕತ್ 2 ವಿಕೆಟ್ ಪಡೆದರೆ, ಆರ್. ವಿನಯ್ ಕುಮಾರ್ ಮತ್ತು ಮೆಕ್ಡೋನಾಲ್ಡ್ ತಲಾ ಒಂದು ವಿಕೆಟ್ ಕಬಳಿಸಿದರು. ಆದರೆ, ಆರ್.ಪಿ. ಸಿಂಗ್ ನಾಲ್ಕು ಓವರ್ಗಳಲ್ಲಿ 48 ರನ್ ನೀಡಿ ದುಬಾರಿ ಎನಿಸಿದರು.
ಟಾಸ್ ಗೆದ್ದರೂ ಫೀಲ್ಡಿಂಗ್ ಆಯ್ದುಕೊಂಡ ಆರ್ಸಿಬಿ ಪರ ಹುಮ್ಮಸ್ಸಿನಿಂದ ಬೌಲಿಂಗ್ ಆರಂಭಿಸಿದ ರವಿ ರಾಮ್ಪಾಲ್ ಮೊದಲ ಓವರ್ನಲ್ಲಿ ಕೇವಲ 1 ರನ್ ನೀಡುವ ಮೂಲಕ ಶುಭಾರಂಭ ಮಾಡಿದರು. ಆದರೆ, ನಂತರ ಬಂದ ಆರ್.ಪಿ. ಸಿಂಗ್ 2ನೇ ಓವರ್ನ ಮೊದಲ ಎಸೆತದಲ್ಲೇ ವೈಡ್ ಎಸೆಯುವುದರೊಂದಿಗೆ 3 ಬೌಂಡರಿ ಸೇರಿದಂತೆ ಒಟ್ಟು 15 ರನ್ ನೀಡಿ ದುಬಾರಿ ಎನಿಸಿದರು. ಆಗ ನಾಯಕ ವಿರಾಟ್ ಕೊಹ್ಲಿ ಜಯದೇವ್ ಉನಾದ್ಕತ್ಗೆ ಬೌಲಿಂಗ್ ನೀಡಿದರು. ಉನಾದ್ಕತ್ ಸಹ 4ನೇ ಓವರ್ನಲ್ಲಿ 13 ರನ್ ನೀಡಿದರು.
ಆಗ ಕೊಹ್ಲಿ, ವಿನಯ್ ಕುಮಾರ್ ಕೈಗೆ ಚೆಂಡು ನೀಡಿದರು. 6ನೇ ಓವರ್ನಲ್ಲಿ ಕೇವಲ 1 ರನ್ ನೀಡಿ ತಾವೇ ಎಸೆದ ಎಸೆತದಲ್ಲಿ ಡೇವಿಡ್ ವಾರ್ನರ್ ಕ್ಯಾಚ್ ಪಡೆಯುವ ಮೂಲಕ ವಿಕೆಟ್ ಖಾತೆ ತೆರೆದರು.
ನಂತರ ಬಂದ ಮೆಕ್ ಡೋನಾಲ್ಡ್ ಸಹ ಇನ್ನೊಬ್ಬ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ವಿಕೆಟ್ ಪಡೆಯುವ ಮೂಲಕ ಡೆಲ್ಲಿ ಆರಂಭಿಕ ಜೋಡಿಯ ಹೋರಾಟವನ್ನು ಮುಕ್ತಾಯಗೊಳಿಸಿದಳರು.
ಆರಂಭದಲ್ಲಿ ಸೆಹ್ವಾಗ್ ಮತ್ತು ವಾರ್ನ್ ಸೇರಿ ಮೊದಲ ವಿಕೆಟ್ಗೆ 6 ಓವರ್ಗಳಲ್ಲಿ 43 ರನ್ ಕಲೆ ಹಾಕುವ ಮೂಲಕ ಡೇರ್ಡೆವಿಲ್ಸ್ ರನ್ ಗತಿ ಉತ್ತಮವಾಗಿತ್ತು. ಆದರೆ, ನಂತರ ಬಂದ ಬ್ಯಾಟ್ಸ್ಮನ್ಗಳು ವೇಗವಾಗಿ ರನ್ ಪೇರಿಸುವಲ್ಲಿ ವಿಫಲವಾಗಿದ್ದು ತಂಡದ ಮೊತ್ತ ಕುಂಠಿತಗೊಂಡಿತು.
ಅಪೀಲ್ ಮಾಡದ ಆರ್ಸಿಬಿ: ಪಂದ್ಯದ 15 ಓವರ್ನ 5ನೇ ಎಸೆತದಲ್ಲಿ ಪೆವಿಲಿಯನ್ ವಿರುದ್ಧದ ತುದಿಯಲ್ಲಿ ಕೇದಾರ್ ಜಾಧವ್ ಅವರನ್ನು ರನೌಟ್ ಮಾಡುವ ಅವಕಾಶವಿತ್ತು. ಆದರೆ, ಆರ್ಸಿಬಿ ಅಪೀಲ್ ಮಾಡದೇ ಇರುವುದಕ್ಕೆ ಅಂಪೈರ್ ಔಟ್ ನೀಡಲಿಲ್ಲ. ಈ ಕುರಿತು ಆರ್ಸಿಬಿ ನಾಯಕ ಕೊಹ್ಲಿ ಅಂಪೈರ್ ಅನ್ನು ಪ್ರಶ್ನಿಸಿದರು. ಆಗ ಅಂಪೈರ್ ನೀವು ಅಪೀಲ್ ಮಾಡಲಿಲ್ಲ. ಹಾಗಾಗಿ ನಾವು ಔಟ್ ನೀಡಲಿಲ್ಲ ಎಂಬ ಉತ್ತರ ನೀಡಿದರು. ಜಯದೇವ್ ಉನಾದ್ಕತ್ ಬೌಲಿಂಗ್ನಲ್ಲಿ ಆರ್.ಪಿ ಸಿಂಗ್ ಥ್ರೋ ಎಸೆದು ರನೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಮಾಡದೇ ಇರುವುದು ಆರ್ಸಿಬಿಗೆ ಮುಳುವಾಯಿತು.
ಆರ್ಸಿಬಿಯಲ್ಲಿ ಮೂರು ಬದಲಾವಣೆ: ಆರ್ಸಿಬಿ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿತ್ತು. ಗಾಯಾಳು ಮಾಯಾಂಕ್ ಅಗರ್ವಾಲ್, ಡೇನಿಯಲ್ ಕ್ರಿಶ್ಚಿಯಾನ್ ಹಾಗೂ ಮುರಳಿ ಕಾರ್ತಿಕ್ ಬದಲಾಗಿ ಕೆ.ಎಲ್ ರಾಹುಲ್, ಆ್ಯಂಡ್ರೂ ಮೆಕ್ಡೋನಾಲ್ಡ್ ಹಾಗೂ ಜಯದೇವ್ ಉನಾದ್ಕತ್ ಅವರಿಗೆ ಸ್ಥಾನ ನೀಡಲಾಗಿತ್ತು. ಇನ್ನು ಡೆಲ್ಲಿ ತಂಡದಲ್ಲಿ ಫಾರ್ಮ್ ಕಳೆದುಕೊಂಡಿರುವ ಜಾನ್ ಬೋಥಾ ಬದಲಾಗಿ ರೋಹ್ರರ್ಗೆ ಸ್ಥಾನ ನೀಡಲಾಯಿತು.
ಡೆಲ್ಲಿ ಡೇರ್ಡೆವಿಲ್ಸ್ 152/5 (20 ಓವರ್)
ವಾರ್ನರ್ ಸಿ ಮತ್ತು ಬಿ ವಿನಯ್ ಕುಮಾರ್ 15 (13), ಸೆಹ್ವಾಗ್ ಸಿ ಕೊಹ್ಲಿ ಬಿ ಮೆಕ್ಡೊನಾಲ್ಡ್ 25 (23), ಜುನೇಜಾ ಸಿ ವಿನಯ್ ಬಿ ಉನಾದ್ಕತ್ 17 (16), ಜಯವರ್ಧನೆ ರನೌಟ್ (ವಿನಯ್) 28 (31), ರೊಹ್ರೆರ್ ಸಿ ಕೊಹ್ಲಿ ಬಿ ಉನಾದ್ಕತ್ 14 (14), ಜಾಧವ್ ಅಜೇಯ 29 (16), ಪಠಾಣ್ ಅಜೇಯ 19 (8), ಇತರೆ 5.
ವಿಕೆಟ್ ಪತನ: 1-43, 2-43, 3-73, 4-91, 5-122
ಬೌಲಿಂಗ್: ರಾಮ್ಪಾಲ್ 4-1-28-0, ಆರ್ಪಿ ಸಿಂಗ್ 4-0-48-0, ಉನಾದ್ಕತ್ 4-0-24-2, ವಿನಯ್ 4-0-24-2, ಮೆಕ್ಡೊನಾಲ್ಡ್ 2-0-17-1, ಮಹಮದ್ 2-0-13-0
-- ಮಲ್ಲಿಕಾರ್ಜುನ ಕರಿಯಪ್ಪನವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

