ಮಾದಂಡ ಕಪ್; ಮೂರನೇ ದಿನಕ್ಕೆ 29 ತಂಡ ಔಟ್
ಗೋಣಿಕೊಪ್ಪಲು: ವಿಧಾನಸಭಾ ಚುನಾವಣಾ ರಂಗು ಕಾವೇರುತ್ತಿರುವಂತೆ ಬಾಳುಗೋಡು ಮಾದಂಡ ಕಪ್ ಹಾಕಿ ಪಂದ್ಯಾಟವೂ ದಿನದಿಂದ ದಿನಕ್ಕೆ ಆಕರ್ಷಣೆ, ಕುತೂಹಲವನ್ನು ಹೆಚ್ಚಿಸುತ್ತಾ ಸಾಗಿದೆ. ಮೂರನೇ ದಿನದ ಆಟದ ಮುಕ್ತಾಯಕ್ಕೆ 29 ತಂಡಗಳು ಸೋತು ಟೂರ್ನಿಯಿಂದ ಹೊರಬಿದ್ದಿವೆ.
ಬಾಳುಗೋಡು ಕೊಡವ ಸಾಂಸ್ಕೃತಿಕ ಮತ್ತು ಕ್ರೀಡಾ ಕೇಂದ್ರದ ಮೈದಾನದಲ್ಲಿ ರಣಬಿಸಿಲಿನ ನಡುವೆಯೂ ಪ್ರತಿಷ್ಠಿತ ಮಾದಂಡ ಕಪ್ ಗೆಲ್ಲಲು ವಿವಿಧ ಕುಟುಂಬಗಳ ಹಾಕಿ ತಂಡಗಳು ವೀರಾವೇಶದಿಂದ ಕಾದಾಡುತ್ತಿವೆ. ಮೈದಾನ 1ರಲ್ಲಿ ಜರುಗಿದ ಮೊದಲ ಪಂದ್ಯದಲ್ಲಿ ಐಚಂಡ ತಂಡವು ಐತಿಚಂಡ ತಂಡವನ್ನು 3-0 ಗೋಲುಗಳಿಂದ ಸೋಲಿಸಿ ಮುನ್ನಡೆಯಿತು. ಐಚಂಡ ಪರ ನಿರನ್ ನಾಣಯ್ಯ ಪೆನಾಲ್ಟಿ ಕಾರ್ನರ್‌ನಲ್ಲಿ 29ನೇ ನಿಮಿಷ, ನಾಚಪ್ಪ 38ನೇ ನಿಮಿಷ ಪೆನಾಲ್ಟಿ ಕಾರ್ನರ್‌ನಲ್ಲಿ ಹಾಗೂ ಹರ್ಷಿತ್ 60ನೇ ನಿಮಿಷ ಫೀಲ್ಡ್ ಗೋಲು ಹೊಡೆಯುವ ಮೂಲಕ ಗೆಲವಿನ ರೂವಾರಿಯಾದರು.
ಪಂದ್ಯದ ಮೊದಲ ಗೋಲನ್ನು ಚಂಗಪ್ಪ 24ನೇ ನಿಮಿಷ ದೊರೆತ ಪೆನಾಲ್ಟಿ ಕಾರ್ನರ್‌ನಲ್ಲಿ ಗಳಿಸಿದರು. ಚೋಯಮಾಡಂಡವು 4-0 ಗೋಲುಗಳಿಂದ ಚೋಡುಮಾಡವನ್ನು ಸೋಲಿಸಿ ಮುನ್ನಡೆಯಿತು.
ದಿನದ ಮೂರನೇ ಪಂದ್ಯದಲ್ಲಿ ಅಪ್ಪಚ್ಚಿರ ತಂಡದ ಶರತ್ ಪೂಣಚ್ಚ ಪೆನಾಲ್ಟಿ ಕಾರ್ನರ್‌ನಲ್ಲಿ 29ನೇ ನಿಮಿಷ, ಆಶಿತ್ ಅಯ್ಯಪ್ಪ(30ನೇ ನಿಮಿಷ) ಹಾಗೂ ಶರೀನ್ ಸೋಮಣ್ಣ 46ನೇ ನಿಮಿಷದಲ್ಲಿ ಹೊಡೆದ ಫೀಲ್ಡ್ ಗೋಲು ನೆರವಿನಿಂದ ಕಟ್ಟೇರ ತಂಡದ ವಿರುದ್ಧ 3-1 ಅಂತರದ ಜಯ ದಾಖಲಿಸಿತು.
ಮಚ್ಚಾರಂಡ ತಂಡವು ದಾಸಂಡ ತಂಡದ ವಿರುದ್ಧ 3-0 ಅಂತರದ ಜಯದೊಂದಿಗೆ ಮುನ್ನಡೆ ಸಾಧಿಸಿತು. ಮಚ್ಚಾರಂಡ ಪರ ಅಯ್ಯಪ್ಪ-2 ಹಾಗೂ ಅಪ್ಪಣ್ಣ ಒಂದು ಗೋಲು ದಾಖಲಿಸಿದರು.
ಬೊಳ್ಳಚಂಡ ತಂಡವು ಪಾಲಂದಿರ ತಂಡವನ್ನು 4-1 ಗೋಲುಗಳಿಂದ ಮಣಿಸಿ ಮುನ್ನಡೆಯಿತು.
ದಿನದ ಅಂತಿಮ ಪಂದ್ಯದಲ್ಲಿ ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯದಲ್ಲಿ ಮಾರ್ಚಂಡ ತಂಡವು ಕಡೇಮಾಡ ತಂಡವನ್ನು 4-3 ಗೋಲುಗಳ ಅಂತರದಿಂದ ಪ್ರಯಾಸಕರವಾಗಿ ಸೋಲಿಸಿತು. ಮಾರ್ಚಂಡ ಪರ ಪೂಣಚ್ಚ( 14), ಕಾರ್ಯಪ್ಪ( 20), ಬೋಪಣ್ಣ( 38ನೇ ನಿಮಿಷ) ಹಾಗೂ 50ನೇ ಕೊನೆಯ ನಿಮಿಷದಲ್ಲಿ ಪೂವಣ್ಣ ಗೆಲುವಿನ ಗೋಲು ದಾಖಲಿಸಿದರು. ಕಡೇಮಾಡ ಪರ ಚರ್ಮಣ-2 ಹಾಗೂ ಕುಶಾಲಪ್ಪ 1 ಗೋಲು ಹೊಡೆದರು.
ಕಾವೇರಪ್ಪ ಹ್ಯಾಟ್ರಿಕ್ ಸಾಧನೆ: ಮೈದಾನ 2 ರಲ್ಲಿ ನಡೆದ ಪಂದ್ಯದಲ್ಲಿ 56 ವಯಸ್ಸಿನ ಮಂಡೇಡ ಕಾವೇರಪ್ಪ ಹ್ಯಾಟ್ರಿಕ್ ಒಳಗೊಂಡಂತೆ ಸತತ 4 ಗೋಲು ಹೊಡೆದು ಬಾಚಮಂಡ ತಂಡವನ್ನು ಸೋಲಿಸಿದ್ದು ವಿಶೇಷವಾಗಿತ್ತು. 4, 8, 14, 44ನೇ ನಿಮಿಷದಲ್ಲಿ ಕಾವೇರಪ್ಪ ಗೋಲು ದಾಖಲಿಸಿ 4-0 ಅಂತರದ ಜಯ ತಂದಿತ್ತರು.
ಚಂದುರ ತಂಡವು ಮೇರಿಯಂಡ ತಂಡವನ್ನು 5-2 ಗೋಲುಗಳಿಂದ ಮಣಿಸಿ ಮುನ್ನಡೆಯಿತು. ಚಂದುರ ಪರ ಪಪ್ಪು 4, 30, 34ನೇ ನಿಮಿಷ ಗೋಲು ದಾಖಲಿಸಿದರೆ, ಪೊನ್ನಣ್ಣ 22 ಹಾಗೂ ಸುರೇಶ್ 33ನೇ ನಿಮಿಷ ಗೋಲು ಹೊಡೆದರು. ಮೇರಿಯಂಡ ಪರ ರಾಯಲ್ ಅಯ್ಯಣ್ಣ ಹಾಗೂ ತಮ್ಮಯ್ಯ ಗೋಲುಗಳಿಸಿದರು.
ಪೊನ್ನೋಲತಂಡ ತಂಡ ಟ್ರೈಬ್ರೇಕರ್‌ನಲ್ಲಿ ಕಳ್ಳಂಗಡ ತಂಡವನ್ನು 5-4 ಅಂತರದಿಂದ ಸೋಲಿಸಿ ಮುನ್ನಡೆಯಿತು. ನಿಗದಿತ ಅವಧಿಯಲ್ಲಿ ಪೊನ್ನೋಲ ತಂಡದ ಶರತ್ ಸೋಮಯ್ಯ, ಶಿವಾಜಿ ಗೋಲು ಗಳಿಸಿದರೆ, ಕಳ್ಳಂಗಡ ಪರ ಗಣಪತಿ, ಅಕ್ಷಯ್ ಗೋಲು ಗಳಿಸಿ ಸಮನಾಗಿಸಿದರು. ಟೈಬ್ರೇಕರ್‌ನಲ್ಲಿ ಪೊನ್ನೋಲ ತಂಡದ ಕಾರ್ಯಪ್ಪ, ಅಕ್ಷಯ್, ಶಿವಾಜಿ ಗೋಲು ಹೊಡೆದರೆ, ಕಳ್ಳಂಗಡ ಪರ ನಿಶಾಂತ್ ಮತ್ತು ಅಪ್ಪಣ್ಣ ಮಾತ್ರಾ ಗೋಲು ದಾಖಲಿಸಿದರು.
ಬಾಳೆಯಡ ತಂಡ ಸುನಿಲ್ ಬೋಪಯ್ಯ( 2), ನವೀನ್ ನಂಜಪ್ಪ ಹಾಗೂ ರತನ್ ಕುಶಾಲಪ್ಪ ಗೋಲಿನೊಂದಿಗೆ ಅಲ್ಲಾರಂಡ ತಂಡವನ್ನು 4-0 ಗೋಲುಗಳಿಂದ ಸೋಲಿಸಿತು.
ತಂಬುಕುತ್ತೀರ ತಂಡವು ಪೋರಂಗಡ ತಂಡವನ್ನು 4-0 ಗೋಲುಗಳಿಂದ ಸೋಲಿಸಿತು. ತಂಬುಕುತ್ತೀರ ಪರ ಪ್ರಕಾಶ್ ಬೋಪಣ್ಣ, ರಘು ಕಾರ್ಯಪ್ಪ, ಉದಯ್ ಉತ್ತಯ್ಯ ಹಾಗೂ ಲವ ನಾಣಯ್ಯ ಗೋಲು ದಾಖಲಿಸಿದರು. ದಿನದ ಅಂತಿಮ ಪಂದ್ಯದಲ್ಲಿ ಚಿಂಡಮಾಡ ತಂಡವು ಪುತ್ತರೀರ ತಂಡವನ್ನು 3- 0 ಗೋಲುಗಳಿಂದ ಸೋಲಿಸಿತು. ಚಿಂಡಮಾಡ ತೀರ್ಥನ್, ಶರೀನ್ ಹಾಗೂ ನಿತಿನ್‌ಗೋಲು ಹೊಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

