ಇಂದಿನಿಂದ ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್: ಅಮಿತ್ ಕುಮಾರ್ ಗೆಲ್ಲುವ ಕುದುರೆ
ನವದೆಹಲಿ: ದೇಶದ ಹಿರಿಯ ಸ್ಟಾರ್ ಕುಸ್ತಿಪಟುಗಳಾದ ಸುಶೀಲ್ ಕುಮಾರ್ ಮತ್ತು ಯೋಗೇಶ್ವರ ದತ್ ಗಾಯದ ಕಾರಣ ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ನಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ, ಯುವ ಕುಸ್ತಿಪಟುಗಳು ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಕಾತರದಲ್ಲಿದ್ದಾರೆ. ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಸುಶೀಲ್ ಮತ್ತು ಯೋಗೇಶ್ವರ, ದೇಶದಲ್ಲೆ ಕುಸ್ತಿಗೆ ಹೊಸ ಮೆರಗು ತಂದಿದ್ದರು. ಅವರ ಅನುಪಸ್ಥಿತಿಯಲ್ಲಿ ನರ್ಸಿಂಗ್ ಯಾದವ್ ನೇತೃತ್ವದ ಭಾರತ ತಂಡ ಏಷ್ಯನ್ ಚಾಂಪಿಯನ್ಷಿಪ್ಗೆ ತೆರಳಿದೆ. ಏಪ್ರಿಲ್ 18ರಿಂದ 22ರ ವರೆಗೆ ನಡೆಯಲಿರುವ ಪಂದ್ಯಾವಳಿಯಲ್ಲಿ ಭಾರತದ ಯುವ ಕುಸ್ತಿಪಟುಗಳು ಹೆಚ್ಚಿನ ಪದಕಗಳನ್ನು ಗೆಲ್ಲಲು ಎದುರು ನೋಡುತ್ತಿದ್ದಾರೆ. ಕಳೆದ ಬಾರಿ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗೆದ್ದಿದ್ದ ಅಮಿತ್ ಕುಮಾರ್ (54ಕೆಜಿ) ಈ ಬಾರಿಯೂ ಭರವಸೆ ಮೂಡಿಸಿದ್ದಾರೆ. ಅಮಿತ್ ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದರು. ಭವಿಷ್ಯದಲ್ಲಿ ಭಾರತದ ಶ್ರೇಷ್ಠ ಭರವಸೆಯ ತಾರೆ ಎಂದು ಸಹ ಗುರುತಿಸಿಕೊಂಡಿದ್ದಾರೆ.
ಕಳೆದ ಆವೃತ್ತಿಯಲ್ಲಿ ಭಾರತ ಒಂದು ಚಿನ್ನ ಮತ್ತು ನಾಲ್ಕು ಕಂಚಿನ ಪದಕಗಳನ್ನು ಗೆದ್ದುಕೊಂಡಿತ್ತು. ಮೊಣಕಾಲು ನೋವಿನಿಂದ ಪಂದ್ಯಾವಳಿಯಿಂದ ದೂರ ಉಳಿದಿರುವ ಯೋಗೇಶ್ವರ ದತ್ ಚಿನ್ನದ ಪದಕ ಗೆದ್ದಿದ್ದರು. ಯೋಗೇಶ್ವರ ದತ್ ಸ್ಥಾನದಲ್ಲಿ ಬಜ್ರಂಗ್ ಭಾರತವನ್ನು ಪ್ರತಿನಧಿಸಲಿದ್ದು, ಭುಜದ ನೋವಿನಿಂದ ಹೊರಗುಳಿದಿರುವ ಸುಶೀಲ್ ಕುಮಾರ್ ಬದಲಾಗಿ (66ಕೆಜಿ) ಫ್ರೀಸ್ಟೈಲ್ ವಿಭಾಗದಲ್ಲಿ ಅಮಿತ್ ಧಂಕರ್ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

