ಅಜ್ಜಮಾಡ, ಬೇಪಾಡಿಯಂಡ, ಬೇರೆರ ತಂಡಗಳಿಗೆ ಗೆಲವು

ಗೋಣಿಕೊಪ್ಪಲು: ಇಲ್ಲಿನ ಸಮೀಪ ಬಾಳುಗೋಡುವಿನಲ್ಲಿ ನಡೆಯುತ್ತಿರುವ ಕೊಡವ ಕುಟುಂಬ ತಂಡಗಳ ನಡುವೆ ನಡೆಯುತ್ತಿರುವ 17ನೇ ವರ್ಷದ ಮಾದಂಡ ಹಾಕಿ ಕಪ್ ಪಂದ್ಯಾವಳಿಯಲ್ಲಿ ಶುಕ್ರವಾರ 12 ತಂಡಗಳು ಜಯಗಳಿಸಿ ಮುನ್ನಡೆದವು.
ಬೇರೆರ ತಂಡ ತಾಪಂಡ ತಂಡವನ್ನು ಟೈಬ್ರೇಕರ್ನಲ್ಲಿ 7- 3 ಗೋಲುಗಳ ಬೃಹತ್ ಅಂತರದಿಂದ ಸೋಲಿಸಿ ಮುನ್ನಡೆಯಿತು. ಬೇರೆರ ತಂಡದ ಪರ ನಿಗದಿತ ಅವಧಿಯಲ್ಲಿ ಬೋಜಣ್ಣ, ಪೊನ್ನಣ್ಣ ಹಾಗೂ ಬೆಳ್ಳಿಯಪ್ಪ ಗೋಲು ಹೊಡೆದರೆ, ತಾಪಂಡ ಪರ ವಿಜು ಕಾಳಪ್ಪ, ಪ್ರತೀಕ್ ಪೊನ್ನಣ್ಣ ಹಾಗೂ ಕಟ್ಟಿ ಕಾರ್ಯಪ್ಪ ಗೋಲು ಹೊಡೆದು ಪಂದ್ಯ ಸಮನಾಗಿಸಿದರು. ಟೈಬ್ರೇಕರ್ನಲ್ಲಿ ಬೇರೆರ ಪರ ಮಿಥನ್ ಬೆಳ್ಳಿಯಪ್ಪ, ಬೋಜಣ್ಣ, ಬಿಪಿನ್ ಬೋಪಣ್ಣ ಹಾಗೂ ಅಪ್ಪಯ್ಯ ಗೋಲು ಗಳಿಸಿದರೆ, ತಾಪಂಡ ಪರ ನಂಜುಂಡ ಅವರು ಮಾತ್ರ ಗೋಲು ಗಳಿಸಲು ಶಕ್ತರಾದರು.
ಅಜ್ಜಮಾಡ ತಂಡವು ಮಾಳೇಟಿರ(ಕುಕ್ಲೂರು) ತಂಡವನ್ನು 3- 1 ಗೋಲುಗಳ ಅಂತರದಿಂದ ಸೋಲಿಸಿ ಮುಂದಿನ ಹಂತ ಪ್ರವೇಶಿಸಿತು. ಅಜ್ಜಮಾಡ ಪರ ನಾಚಪ್ಪ ( 20ನೇ ನಿಮಿಷ), ಚಂಗಪ್ಪ (30) ಹಾಗೂ ತಮ್ಮಯ್ಯ (40) ಗೋಲು ಗಳಿಸಿದರೆ, ಮಾಳೇಟಿರ ಪರ ಸತೀಶ್ ಮಾತ್ರ ಗೋಲು ದಾಖಲಿಸಿದರು.ಮುನ್ನಡೆ: ಮತ್ತೊಂದು ಪಂದ್ಯದಲ್ಲಿ ಬೇಪಾಡಿಯಂಡ ತಂಡ ಕಾಣತಂಡ ತಂಡವನ್ನು 2- 1 ಗೋಲುಗಳಿಂದ ಸೋಲಿಸಿ ಮುನ್ನಡೆಯಿತು. ಬೇಪಾಡಿಯಂಡ ಶಾಂತು 8ನೇ ನಿಮಿಷ ಹಾಗೂ ಪೊನ್ನಣ್ಣ 11ನೇ ನಿಮಿಷ ಗೋಲು ಹೊಡೆದರೆ, ಕಾಣತಂಡ ಕರಣ್ 4ನೇ ನಿಮಿಷ ಗೋಲು ದಾಖಲಿಸಿದರು.
ಸೋಮೆಯಂಡ ತಂಡ ಪಟ್ರಪಂಡ ತಂಡವನ್ನು 5- 0 ಗೋಲುಗಳಿಂದ ಸೋಲಿಸಿತು. ಸೋಮೆಯಂಡ ಪರ ಅಪ್ಪಯ್ಯ ಹಾಗೂ ಸುಜು ಅಪ್ಪಯ್ಯ ತಲಾ 2 ಗೋಲು ದಾಖಲಿಸಿದರೆ, ರಾಜೇಶ್ 1 ಗೋಲು ಹೊಡೆದರು.
ಕೊಲ್ಲೀರ ಪೂಣಚ್ಚ ಅವರು 19 ಹಾಗೂ 33 ನೇ ನಿಮಿಷ ದಾಖಲಿಸಿದ ಗೋಲು ನೆರವಿನಿಂದ ಬೊಟ್ಟಂಗಡ ತಂಡವನ್ನು 2- 1 ಗೋಲು ಅಂತರದಿಂದ ಮಣಿಸಿತು. ಬೊಟ್ಟಂಗಡ ಪರ ಲೋಕೇಶ್ ಏಕೈಕ ಗೋಲು ಹೊಡೆದರು. ಮನೆಯಪಂಡ ತಂಡವನ್ನು ಬಾರಿಯಂಡ ತಂಡ 4- 2 ಗೋಲುಗಳಿಂದ ಸೋಲಿಸಿ ಮುನ್ನಡೆಯಿತು. ಬಾರಿಯಂಡ ತಂಡದ ಮಧು 14 ಹಾಗೂ 17 ನೇ ನಿಮಿಷ, ರೇಗನ್ 42 ಹಾಗೂ ಕಿಷನ್ 44 ನೇ ನಿಮಿಷ ಗೋಲು ಗಳಿಸಿದರು. ಮನೆಯಪಂಡ ತಂಡದ ಅಯ್ಯಪ್ಪ, ಭವಿಷ್ ಗೋಲು ಹೊಡೆದು ಅಂತರ ತಗ್ಗಿಸಿದರು.
ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಪರದಂಡ ತಂಡ ನಾಟೋಳಂಡ ತಂಡವನ್ನು 5-0 ಗೋಲುಗಳ ಅಂತರದಿಂದ ಸೋಲಿಸಿತು. ಪರದಂಡ ಅಯ್ಯಪ್ಪ 18,25,34 ನೇ ನಿಮಿಷದಲ್ಲಿ ಮೂರು ಗೋಲು ಹೊಡೆದರೆ, 15ನೇ ನಿಮಿಷದಲ್ಲಿ ಧೀರಜ್ ಮತ್ತಣ್ಣ ಹಾಗೂ ರಾಕೇಶ್ 33 ನೇ ನಿಮಿಷದಲ್ಲಿ ಗೋಲು ಹೊಡೆದು ಜಯಕ್ಕೆ ಕಾರಣರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


