ಕಿಂಗ್ಸ್ ಮಣಿಸಿದ ಸನ್ರೈಸರ್ಸ್
ಹೈದರಾಬಾದ್: ಬ್ಯಾಟ್ಸ್ಮನ್ಗಳ ನೀರಸ ಪ್ರದರ್ಶನದಿಂದಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 5 ವಿಕೆಟ್ಗಳ ಪರಾಭವಗೊಂಡಿದ್ದು, ತಮ್ಮ ಸೋಲಿನ ಅಭಿಯಾನವನ್ನು ಮುಂದುವರಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಪಂಜಾಬ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಮಂದೀಪ್ ಸಿಂಗ್ (10) ಮತ್ತು ಆ್ಯಡಂ ಗಿಲ್ಕ್ರಿಸ್ಟ್ (26) ಜೋಡಿ ತಂಡಕ್ಕೆ 15 ರನ್ ಕಾಣಿಕೆ ನೀಡಿತು.
ಮಂದೀಪ್ ಸಿಂಗ್ ಇಶಾಂತ್ ಶರ್ಮಾ ಎಸೆತದಲ್ಲಿ ವಿಕೆಟ್ ಕೀಪರ್ ಡಿ ಕಾಕ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಆಗ ಅಂಗಣಕ್ಕಿಳಿದ ಪಾಲ್ ವಾಲ್ತಾಟಿ (6) ಜತೆ ಹೊಂದಿಕೊಂಡು ಆಡುವಷ್ಟರಲ್ಲೇ ನಾಯಕ ಗಿಲ್ಕ್ರಿಸ್ಟ್, ಕರಣ್ ಶರ್ಮಾ ಬೌಲಿಂಗ್ನಲ್ಲಿ ಇಶಾಂತ್ ಶರ್ಮಾಗೆ ಕ್ಯಾಚ್ ನೀಡಿ ಪೆವಿಲಿಯನ್ಗೆ ಹೆಜ್ಜೆ ಹಾಕಿದರು. ನಂತರ ವಾಲ್ತಾಟಿ 17 ಎಸೆತಗಳನ್ನು ಎದುರಿಸಿ ಕೇವಲ 6 ರನ್ ಗಳಿಸುವ ಮೂಲಕ ತಂಡಕ್ಕೆ ದುಬಾರಿ ಬ್ಯಾಟ್ಸ್ಮನ್ ಎನಿಸಿದರು. ನಂತರ ಬಂದ ಡೇವಿಡ್ ಹಸ್ಸಿ (22), ಪಿಯೂಶ್ ಚಾವ್ಲಾ (23), ಗುರುಕೀರ್ತ್ (17) ರನ್ಗಳಿಸಿದರು. ಆಮೇಲೆ ಬಂದ ಬ್ಯಾಟ್ಸ್ಮನ್ಗಳು ಎರಡಂಕ್ಕಿ ದಾಟಲಿಲ್ಲ. ಅಂತಿಮವಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 123 ರನ್ ಕಲೆ ಹಾಕಿತು.
ಸುಲಭ ಜಯ: ಈ ಮೊತ್ತವನ್ನು ಬೆನ್ನಟ್ಟಿದ ಸನ್ರೈಸರ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ ತಂಡ ರನ್ ಖಾತೆ ತೆರೆಯುವ ಮುನ್ನವೇ ಆರಂಭಿಕ ಕಾಕ್ ಅವರ ವಿಕೆಟ್ ಕಳೆದುಕೊಂಡಿತು.
ನಂತರ ಜತೆಯಾದ ಅಕ್ಷತ್ ಹಾಗೂ ವಿಹಾರಿ ತಂಡಕ್ಕೆ 48 ರನ್ಗಳ ಜತೆಯಾಟ ನೀಡಿದರು. ಈ ವೇಳೆ ಅಕ್ಷತ್ ಗೋನಿಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ನಂತರ ಸಮಯೋಜಿತ ಆಟ ಪ್ರದರ್ಶಿಸಿದ ವಿಹಾರಿ 46 ರನ್ಗಳಿಸಿ ಔಟಾದರು. ಈ ವೇಳೆ ಸತತವಾಗಿ ಮೂರು ವಿಕೆಟ್ ಕಳೆದುಕೊಂಡ ಹೈದರಾಬಾದ್ ವಿಚಲಿತರಾದಂತೆ ಕಂಡುಬಂತು. ಈ ವೇಳೆ ಕ್ರೀಸ್ಗೆ ಬಂದ ಪೆರೇರಾ 3 ಭರ್ಜರಿ ಸಿಕ್ಸರ್ ಬಾರಿಸಿ 11 ಎಸೆತದಲ್ಲಿ 23 ರನ್ಗಳಿಸಿ ಅಜೇಯರಾಗುವುದರ ಜತೆಗೆ ತಂಡವನ್ನು ಜಯದ ದಡಕ್ಕೆ ಸೇರಿಸಿದರು.
ಸ್ಕೋರ್ ಬೋರ್ಡ್
ಕಿಂಗ್ಸ್ ಇಲೆವೆನ್ ಪಂಜಾಬ್ 123/9 (20 ಓವರ್)
ಮನ್ದೀಪ್ ಸಿ ಕಾಕ್ ಬಿ ಇಶಾಂತ್ 10 (11), ಗಿಲ್ಕ್ರಿಸ್ಟ್ ಸಿ ಇಶಾಂತ್ ಬಿ ಕರಣ್ 26 (25), ವಾಲ್ತಾಟಿ ಸಿ ಪೆರೇರಾ ಬಿ ಕರಣ್ 6 (17), ಡೇವಿಡ್ ಹಸ್ಸಿ ಸಿ ರೆಡ್ಡಿ ಬಿ ಇಶಾಂತ್ 22 (24), ಚಾವ್ಲಾ ರನೌಟ್ (ರೆಡ್ಡಿ/ಪೆರೇರಾ) 23 (15), ಗುರುಕೀರ್ತ್ ಬಿ ಸ್ಟೇಯ್ನ್ 17 (12), ಅಜರ್ ಸಿ ಆಶಿಶ್ ಬಿ ಮಿಶ್ರಾ 4 (4), ಗೋನಿ ರನೌಟ್ (ಇಶಾಂತ್/ಕಾಕ್) 0 (0), ವೊಹ್ರಾ ಸಿ ಇಶಾಂತ್ ಬಿ ಮಿಶ್ರಾ 0 (1), ಮಸ್ಕರೇನಸ್ ಅಜೇಯ 5 (5), ಪ್ರವೀಣ್ ಅಜೇಯ 3 (6), ಇತರೆ 7.
ವಿಕೆಟ್ ಪತನ: 1-15, 2-47, 3-48, 4-88, 5-104, 6-114, 7-115, 8-115, 9-115
ಬೌಲಿಂಗ್: ವಿಹಾರಿ 1-0-2-0, ಸ್ಟೇಯ್ನ್ 4-0-14-1, ಇಶಾಂತ್ 4-0-29-2, ಪೆರೇರಾ 4-0-25-0, ಕರಣ್ 3-0-19-2, ಮಿಶ್ರಾ 4-0-29-2.
ಸನ್ರೈಸರ್ಸ್ ಹೈದರಾಬಾದ್ 127/5 (18.5 ಓವರ್)
ಕಾಕ್ ಬಿ ಪ್ರವೀಣ್ 0 (4), ಅಕ್ಷತ್ ಸಿ ಅಜರ್ ಬಿ ಗೋನಿ 19 (17), ವಿಹಾರಿ ಸಿ ಹಸ್ಸಿ ಬಿ ಚಾವ್ಲಾ 46 (39), ವೈಟ್ ಬಿ ಗೋನಿ 16 (23), ಸಮಂತ್ರೆ ಎಲ್ಬಿಡಬ್ಲ್ಯೂ ಬಿ ಅಜರ್ 10 (12), ಪೆರೇರಾ ಅಜೇಯ 23 (11), ಆಶಿಶ್ ಅಜೇಯ 7 (7), ಇತರೆ 6.
ವಿಕೆಟ್ ಪತನ: 1-0, 2-48, 3-70, 4-87, 5-97
ಬೌಲಿಂಗ್: ಪ್ರವಿಣ್ 3-1-12-1, ಮಸ್ಕರೇನಸ್ 4-0-25-0, ಅಜರ್ 3.5-0-36-1, ಚಾವ್ಲಾ 4-0-25-1, ಗೋನಿ 4-0-24-2
ಪಂದ್ಯಶ್ರೇಷ್ಠ: ಹನುಮ ವಿಹಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

