ಮುಂದುವರಿದ ಧೋನಿ ಜೋಕ್
ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ತಂಡದ ನಾಯಕ ಮಹೇದ್ರ ಸಿಂಗ್ ಧೋನಿ, ತಮ್ಮ ತಂಡದ ಸಹ ಆಟಗಾರ 'ಸರ್' ರವೀಂದ್ರ ಜಡೇಜಾ ಬಗ್ಗೆ ಮತ್ತೆ ಜೋಕ್ಗಳನ್ನು ಟ್ವೀಟ್ ಮಾಡಿದ್ದಾರೆ. 'ಒಂದು ವೇಳೆ ಸರ್ ಜಡೇಜಾ ಬೌಲಿಂಗ್ ಅನ್ನು ರಜನಿ ಸರ್ ಎದುರಿಸಿದರೆ, ಅದನ್ನು 'ಕ್ಲಾಷ್ ಆಫ್ ದಿ ಟೈಟಾನ್ಸ್' ಎಂದು ಕರೆಯಬಹುದು' ಎಂದು ಧೋನಿ ಟ್ವೀಟ್ ಮಾಡಿದ್ದಾರೆ. '17.4.2013ರಂದು ದೆಹಲಿಯ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 7.30ರಿಂದ 8.30ರವರೆಗೆ ವಿಮಾನಗಳು ಲ್ಯಾಂಡ್ ಆಗಲೇ ಇಲ್ಲ. ಕಾರಣ ಸರ್ ಜಡೇಜಾ ಹತ್ತಿರದ ಫಾರ್ಮ್ಹೌಸ್ ಒಂದರಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದರು' ಎಂದಿದ್ದಾರೆ. ಜಡೇಜಾ ಬಗ್ಗೆ ಧೋನಿ ಟ್ವೀಟರ್ನಲ್ಲಿ ಜೋಕ್ ಮಾಡುತ್ತಿರುವುದು ಇದು 3ನೇ ಬಾರಿಯಾಗಿದೆ.
ಸಚಿನ್ ಬರ್ತಡೇಗೆ ಸಡಗರದ ಸಿದ್ಧತೆ
ಕೋಲ್ಕತಾ: ಭಾರತ ಕ್ರಿಕೆಟ್ನ ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಇದೇ ತಿಂಗಳ 24ರಂದು 40ನೇ ವಸಂತಕ್ಕೆ ಕಾಲಿಡುತ್ತಿದ್ದು, ಏ.24 ಕೆಕೆಆರ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ನಡೆಯಲಿದ್ದು ಈ ವೇಳೆ ಸಚಿನ್ ತೆಂಡೂಲ್ಕರ್ ಅವರ ಹುಟ್ಟುಹಬ್ಬವನ್ನು ಆಚರಿಸಲು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ (ಸಿಬಿಎ) ಸಿದ್ಧತೆ ನಡೆಸಿದೆ. ಸಚಿನ್ ಹುಟ್ಟುಹಬ್ಬದ ಹಿನ್ನಲೆಯಲ್ಲಿ 40 ಪೌಂಡ್ ಕೇಕ್ ಅನ್ನು ತರಿಸಲು ಸಿಬಿಎ ನಿರ್ಧರಿಸಿದೆ. ಸಚಿನ್ ಅವರ 40 ವರ್ಷದ ಹುಟ್ಟುಹಬ್ಬಕ್ಕಾಗಿ ಈ ಕೇಕ್ ತಯಾರಿಸಲು ನಿರ್ಧರಿಸಿದ್ದು, ಈ ಕೇಕ್ನ ನಿರ್ಮಾಣಕ್ಕೆ ಹೈದರಾಬಾದ್ ಮೂಲದ ಅಡುಗೆಯವರನ್ನು ನೇಮಿಸಲಾಗಿದೆ ಎಂದು ಸಿಎಬಿ ಕಾರ್ಯದರ್ಶಿ ಸುಜನ್ ಮುಖರ್ಜಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

