ಸನ್ರೈಸರ್ಸ್ಗೆ ಸಾಧಾರಣ ಸವಾಲು
ಹೈದರಾಬಾದ್: ಬ್ಯಾಟ್ಸ್ಮನ್ಗಳ ನಿರಂತರ ವೈಫಲ್ಯದಿಂದಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಕೇವಲ 124 ರನ್ಗಳ ಸಾಧಾರಣ ಮೊತ್ತದ ಗುರಿಯನ್ನು ನೀಡಿತು.
ಪತ್ರಿಕೆ ಮುದ್ರಣಕ್ಕೆ ಹೋಗುವ ಹೊತ್ತಿಗೆ ಸನ್ರೈಸರ್ಸ್ ಇನಿಂಗ್ಸ್ ಆರಂಭವಾಗಿರಲಿಲ್ಲ.
ಆರಂಭಿಕರಾಗಿ ಅಂಗಣಕ್ಕಿಳಿದ ಮಂದೀಪ್ ಸಿಂಗ್ (10) ಮತ್ತು ಆ್ಯಡಂ ಗಿಲ್ಕ್ರಿಸ್ಟ್ (26) ಜೋಡಿ ತಂಡಕ್ಕೆ ಭದ್ರ ಬುನಾದಿ ಹಾಕುವಲ್ಲಿ ವಿಫಲವಾಯಿತು. ಪಂಜಾಬ್ ಕಡಿಮೆ ಮೊತ್ತ ಕಲೆ ಹಾಕಲು ಇದು ಪ್ರಮುಖ ಕಾರಣವಾಯಿತು.
ಮಂದೀಪ್ ಸಿಂಗ್, ಇಶಾಂತ್ ಶರ್ಮಾ ಎಸೆತದಲ್ಲಿ ವಿಕೆಟ್ ಕೀಪರ್ ಡಿ ಕಾಕ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಆಗ ಅಂಗಣಕ್ಕಿಳಿದ ಪಾಲ್ ವಾಲ್ತಾಟಿ (6) ಜತೆ ಹೊಂದಿಕೊಂಡು ಆಡುವಷ್ಟರಲ್ಲೇ ಗಿಲ್ಕ್ರಿಸ್ಟ್, ಕರಣ್ ಶರ್ಮಾ ಬೌಲಿಂಗ್ನಲ್ಲಿ ಇಶಾಂತ್ ಶರ್ಮಾಗೆ ಕ್ಯಾಚ್ ನೀಡಿ ಪೆವಿಲಿಯನ್ಗೆ ಹೆಜ್ಜೆ ಹಾಕಿದರು.
ಆದರೆ, ವಾಲ್ತಾಟಿ 17 ಎಸೆತಗಳನ್ನು ಎದುರಿಸಿ ಕೇವಲ 6 ರನ್ ಗಳಿಸುವ ಮೂಲಕ ತಂಡಕ್ಕೆ ದುಬಾರಿ ಬ್ಯಾಟ್ಸ್ಮನ್ ಎನಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ಹಸ್ಸಿ (22) ಮತ್ತು ಫಿಯೂಶ್ ಚಾವ್ಲಾ (23) ತಂಡಕ್ಕೆ ಆಶ್ರಯವಾಗಲು ಪ್ರಯತ್ನಿಸಿದರು.
ಆದರೆ, 15 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸಿ ಅಬ್ಬರಿಸುತ್ತಿದ್ದ ಚಾವ್ಲಾ ರನೌಟ್ ಆಗಿದ್ದು, ಕಿಂಗ್ಸ್ ಇಲೆವೆನ್ ತಂಡಕ್ಕೆ ನಿರಾಸೆ ತಂದಿತು.
ಇನ್ನೊಂದು ಬದಿಯಲ್ಲಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ಹಸ್ಸಿ ಅವರು ಇಶಾಂತ್ ಶರ್ಮಾ ಬೌಲಿಂಗ್ನಲ್ಲಿ ಆಶಿಶ್ ರೆಡ್ಡಿಗೆ ಕ್ಯಾಚ್ ನೀಡಿದರು.
ನಂತರ ಬಂದ ಬ್ಯಾಟ್ಸ್ಮನ್ಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಹೀಗಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 123 ರನ್ ಕಲೆ ಹಾಕಿತು.
ಸ್ಕೋರ್ ಬೋರ್ಡ್ (ಅಪೂರ , )
ಪಂಜಾಬ್ 123/9 (20 ಓವರ್)
ಮನ್ದೀಪ್ ಸಿ ಕಾಕ್ ಬಿ ಇಶಾಂತ್ 10 (11), ಗಿಲ್ಕ್ರಿಸ್ಟ್ ಸಿ ಇಶಾಂತ್ ಬಿ ಕರಣ್ 26 (25), ವಾಲ್ತಾಟಿ ಸಿ ಪೆರೇರಾ ಬಿ ಕರಣ್ 6 (17), ಡೇವಿಡ್ ಹಸ್ಸಿ ಸಿ ರೆಡ್ಡಿ ಬಿ ಇಶಾಂತ್ 22 (24), ಚಾವ್ಲಾ ರನೌಟ್ (ರೆಡ್ಡಿ/ಪೆರೇರಾ) 23 (15), ಗುರುಕೀರ್ತ್ ಬಿ ಸ್ಟೇಯ್ನ್ 17 (12), ಅಜರ್ ಸಿ ಆಶಿಶ್ ಬಿ ಮಿಶ್ರಾ 4 (4), ಗೋನಿ ರನೌಟ್ (ಇಶಾಂತ್/ಕಾಕ್) 0 (0), ವೊಹ್ರಾ ಸಿ ಇಶಾಂತ್ ಬಿ ಮಿಶ್ರಾ 0 (1), ಮಸ್ಕರೇನಸ್ ಅಜೇಯ 5 (5), ಪ್ರವೀಣ್ ಅಜೇಯ 3 (6), ಇತರೆ 7.
ವಿಕೆಟ್ ಪತನ: 1-15, 2-47, 3-48, 4-88, 5-104, 6-114, 7-115, 8-115, 9-115
ಬೌಲಿಂಗ್: ವಿಹಾರಿ 1-0-2-0, ಸ್ಟೇಯ್ನ್ 4-0-14-1, ಇಶಾಂತ್ 4-0-29-2, ಪೆರೇರಾ 4-0-25-0, ಕರಣ್ 3-0-19-2, ಮಿಶ್ರಾ 4-0-29-2
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

