ಸಿಂಧುಗೆ ಸೋಲು
ತೈಪೇ: ರಾಷ್ಟ್ರೀಯ ಉದಯೋನ್ಮುಖ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಮಹಿಳೆಯರ ಸಿಂಗಲ್ಸ್ನಲ್ಲಿ ಸೋಲುವುದರೊಂದಿಗೆ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ಸಿಂಧು ತೀವ್ರ ಪೈಪೋಟಿಯಿಂದ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಜಪಾನ್ನ ಎರಿಕೋ ಹೀರೋಸ್ ವಿರುದ್ಧ 19-21, 21-16, 11-21 ಸೆಟ್ಗಳ ಅಂತರದಿಂದ ಸೋಲುವ ಮುನ್ನ ಬಲಿಷ್ಠ ಹೋರಾಟ ನೀಡಿದರು.
ಗುರುವಾರ ನಡೆದ 3ನೇ ಸುತ್ತಿನ ಪಂದ್ಯದಲ್ಲಿ ಮಾಜಿ ನಂ.1 ಆಟಗಾರ್ತಿ ಶಿಶಿಯಾನ್ ವಾಂಗ್ ಸೋಲಿಸಿದ್ದ ಸಿಂಧು, ಪಂದ್ಯದ ಮೊದಲೆರಡು ಸೆಟ್ಗಳಲ್ಲಿ ಗೆಲ್ಲುವ ಫೇವರಿಟ್ ಎನಿಸಿದ್ದರು. ಆದರೆ, 3ನೇ ಸೆಟ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದು ಸೋಲಿಗೆ ಕಾರಣವಾಯಿತು.
17 ವರ್ಷದ ಸಿಂಧು ಪಂದ್ಯದ ಮೊದಲ ಸೆಟ್ನಲ್ಲಿ ವಿಶ್ವದ ನಂ.12 ಆಟಗಾರ್ತಿ ವಿರುದ್ಧ ಸಮರ್ಥವಾದ ಹೋರಾಟವನ್ನೇ ನಡೆಸಿದ್ದರು. ಒಂದು ಹಂತದಲ್ಲಿ 10-10 ಅಂತರದಿಂದ ಇಬ್ಬರೂ ಸಮಬಲ ಸಾಧಿಸಿದ್ದರು. ಆಗ ಎರಿಕಾ 14-10 ಅಂತರದಿಂದ ಮುನ್ನಡೆ ಕಂಡುಕೊಂಡರು. ಆದರೆ, ಸತತ ನಾಲ್ಕು ಅಂಕಗಳನ್ನು ಪಡೆದ ಸಿಂಧು 14-14 ಅಂತರದಿಂದ ಸಮಬಲ ಸಾಧಿಸಿದರು. ನಂತರ ಎರಿಕಾ ಮುನ್ನಡೆ ಕಂಡುಕೊಂಡು ಗೇಮ್ ಪಾಯಿಂಟ್ ತಲುಪುವಲ್ಲಿ ಯಶಸ್ವಿಯಾದ ಎರಿಕಾ ಮೇಲುಗೈ ಸಾಧಿಸಿದರು.
ಇನ್ನು ಎರಡನೇ ಸೆಟ್ನ ಆರಂಭದಲ್ಲೇ ಎರಿಕಾ 8-4 ಅಂಕಗಳಿಂದ ಮುನ್ನಡೆ ಸಾಧಿಸಿದ್ದರು. ಆದರೆ, ಆಗ ಸಿಂಧು 14-14 ಅಂತರದಿಂದ ಸಮಬಲ ಸಾಧಿಸುವುದರೊಂದಿಗೆ 19-14 ಅಂತರದಿಂದ ಮುನ್ನಡೆ ಕಂಡುಕೊಳ್ಳುವುದರೊಂದಿಗೆ ಸೆಟ್ನಲ್ಲಿ ಮೇಲುಗೈ ಪೆಡದರು.
3ನೇ ಮತ್ತು ನಿರ್ಣಾಯಕ ಸೆಟ್ನಲ್ಲಿ ಸಿಂಧು ಆರಂಭದಲ್ಲಿ ಬಿರುಸಿನ ಹೋರಾಟಕ್ಕಿಳಿಯುವುದರೊಂದಿಗೆ 5-5 ಅಂಕಗಳಿಂದ ಸಮಬಲ ಸಾಧಿಸಿದ್ದರು. ಆದರೆ, ನಂತರ 6 ಪಾಯಿಂಟ್ಗಳನ್ನು ಮಾತ್ರ ಗಳಿಸಿದ ಸಿಂಧು 11-21ಅಂತರದಿಂದ ಕೈಚೆಲ್ಲಿದರು.
ಸಿಂಧು ಈಗ ಏಪ್ರಿಲ್ 23ರಿಂದ ರಾಜಧಾನಿ ನವದೆಹಲಿಯಲ್ಲಿ ಆರಂಭವಾಗಲಿರುವ ಇಂಡಿಯಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

