ಅಮಿತ್ ಫೈನಲ್ಗೆ
ನವದೆಹಲಿ: ಭಾರತದ ಭರವಸೆಯ ಕುಸ್ತಿಪಟು ಅಮಿತ್ ಕುಮಾರ್ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಏಷ್ಯಾ ಕುಸ್ತಿ ಚಾಂಪಿಯನ್ಷಿಪ್ನ 55ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡರು. ಭಾರತ ಇತರ ಮೂವರು ಕುಸ್ತಿಪಟುಗಳು ಕಂಚಿನ ಪದಕ ಗೆದ್ದುಕೊಂಡರು. ಅಮಿತ್ ಈಗ ಫೈನಲ್ ಪಂದ್ಯದಲ್ಲಿ ಉತ್ತರ ಕೊರಿಯಾದ ಕ್ಯಾಂಗ್ ಯಾಂಗ್ ಅವರನ್ನು 1-0, 5-2 ಅಂಕಗಳಿಂದ ಜಯ ಸಾಧಿಸಿದರು. ಇನ್ನು ಮಹಿಳೆಯರ ವಿಭಾಗದ ಸೆಮಿಫೈನಲ್ನಲ್ಲಿ ಸೋತ ವಿನೇಶ್ ಮತ್ತು ಬಬಿತಾ ಕುಮಾರಿ ಕ್ರಮವಾಗಿ 51ಕೆಜಿ ಮತ್ತು 55ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಪುರುಷರ (60ಕೆಜಿ) ವಿಭಾಗದಲ್ಲಿ ಬಜ್ರಂಗ್ ಕಂಚಿನ ಪದಕ ಗೆದ್ದುಕೊಂಡರು.
ಅನಿತಾಗೆ ಕಂಚು
ನವದೆಹಲಿ: ಎದುರಾಳಿಗಳ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಆಂಗೋಮ್ ಅನಿತಾ ಚನು ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ ಏಷ್ಯನ್ ಜೂಡೊ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಕೋರಿಯಾ, ಉಜ್ಬೇಕಿಸ್ಥಾನ್ ಮತ್ತು ಕಜಕಸ್ಥಾನದ ಜೂಡೊ ಸ್ಪರ್ಧಿಗಳ ವಿರುದ್ಧ ಜಯಗಳಿಸಿದ ಅನಿತಾ ಸ್ಪರ್ಧೆಯ ಮೊದಲ ದಿನದಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಉಳಿದಂತೆ ಭಾರತದ ಎಲ್.ನಿರುಪ್ಲಮ್ ದೇವಿ 57 ಕೆ.ಜಿ ವಿಭಾಗದಲ್ಲಿ 5ನೇ ಸ್ಥಾನ ಪಡೆದರೆ, ನವಜೋತ್ ಚಾನ 60 ಕೆ.ಜಿ ಹಾಗೂ ರಜನಿ ಬಾಲ್ 48 ಕೆ.ಜಿ ವಿಭಾಗದಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

