ಗಿಲ್ಲಿ ಪಡೆಗೆ ಭರ್ಜರಿ ಜಯ

ಮೊಹಾಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ತಂಡದ ನಾಯಕತ್ವದಿಂದ ಹಿಡಿದು ಆಟಗಾರರ ಆಯ್ಕೆಯವರೆಗೂ ಪ್ರಮುಖ ಬದಲಾವಣೆ ಮಾಡಿದರೂ ಪುಣೆ ವಾರಿಯರ್ಸ್ ತಂಡಕ್ಕೆ ಪ್ರಯೋಜನವಾಗಲಿಲ್ಲ.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಪುಣೆ ವಾರಿಯರ್ಸ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 185 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡ ಮಂದೀಪ್ ಸಿಂಗ್ ಹಾಗೂ ಡೇವಿಡ್ ಮಿಲ್ಲರ್ ಅವರ ಮುರಿಯದ 128 ರನ್ಗಳ ಜತೆಯಾಟದಿಂದ 19.5 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 186 ರನ್ಗಳಿಸಿ ಗೆಲುವಿನ ಕೇಕೆ ಹಾಕಿತು.
ಪುಣೆ ಪರ ಆರಂಭಿಕರಾಗಿ ಅಂಗಣಕ್ಕಿಳಿದ ಏರಾನ್ ಫಿಂಚ್ ಮತ್ತು ರಾಬಿನ್ ಉತ್ತಪ್ಪ (37) ಮೊದಲ ವಿಕೆಟ್ಗೆ 83 ರನ್ ಗಳಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿಯನ್ನು ಹಾಕಿದರು.
ನಾಯಕನ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ 42 ಎಸೆತದಲ್ಲಿ 64ರನ್ಗಳಿಸಿದರು, ಇವರ ಮೊತ್ತದಲ್ಲಿ 2 ಸಿಕ್ಸರ್ ಮತ್ತು 8 ಬೌಂಡರಿಗಳು ಸೇರಿದ್ದವು. ಫಿಂಚ್ ಜತೆ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ರಾಬಿನ್ ಉತ್ತಪ್ಪ 11ನೇ ಓವರ್ನಲ್ಲಿ ಅವಾನಾ ಬೌಲಿಂಗ್ನಲ್ಲಿ ಗಿಲ್ಕ್ರಿಸ್ಟ್ಗೆ ಕ್ಯಾಚ್ ನೀಡಿದರು.
ನಂತರ ಬಂದ ಯುವರಾಜ್ ಸಿಂಗ್ 34, ಲೂಕ್ ರೈಟ್ ಸ್ಫೋಟಕ 34 ರನ್ಗಳು ತಂಡ 180 ರನ್ಗಳ ಗಡಿ ದಾಟಲು ನೆರವಾಯಿತು.
ಯಶಸ್ವಿ ಬೇಟೆ: ಪುಣೆ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್ಗೆ ಆರಂಭ ಉತ್ತಮವಾಗಿರಲಿಲ್ಲ. ತಂಡ 5 ರನ್ ಗಳಿಸುವಷ್ಟರಲ್ಲಿ ಗಿಲ್ಕ್ರಿಸ್ಟ್ ಹಾಗೂ ಅಜರ್ ಮಹಮದ್ ಅವರ ವಿಕೆಟ್ ಕಳೆದುಕೊಂಡಿತು. ನಂತರ ತಂಡದ ಮೊತ್ತ 58 ರನ್ ಆಗಿದ್ದಾಗ ವೊಹ್ರಾ ವಿಕೆಟ್ ಕಲೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಈ ವೇಳೆ ಜತೆಯಾದ ಮಂದೀಪ್ ಸಿಂಗ್ ಹಾಗೂ ಡೇವಿಡ್ ಮಿಲ್ಲರ್ ಅದ್ಭುತ ಬ್ಯಾಟಿಂಗ್ ನಡೆಸಿ ತಂಡವನ್ನು ಜಯದ ದಡೆ ಸೇರಿಸಿದರು. ಮಂದೀಪ್ ಸಿಂಗ್ 58 ಎಸೆತಗಳಲ್ಲಿ 77 ರನ್ಗಳಿಸಿದರೆ, ಡೇವಿಡ್ ಮಿಲ್ಲರ್ 41 ಎಸೆತಗಳಲ್ಲಿ 80 ರನ್ಗಳಿಸಿ ಅಜೇಯರಾಗುಳಿದರು.
ಸ್ಕೋರ್ ಬೋರ್ಡ್
ಪುಣೆ ವಾರಿಯರ್ಸ್: 185/4 (20 ಓವರ್)
ರಾಬಿನ್ ಉತ್ತಪ್ಪ ಸಿ ಗಿಲ್ಕ್ರಿಸ್ಟ್ ಬಿ ಆವಾನಾ 37 (33), ಏರಾನ್ ಫಿಂಚ್ 64 (42), ಯುವರಾಜ್ ಸಿಂಗ್ ಸಿ ಗುರ್ಕೀರತ್ ಸಿಂಗ್ ಬಿ ಅಜರ್ ಮಹಮೂದ್ 34 (24), ಸ್ಟೀವನ್ ಸ್ಮಿತ್ ಅಜೇಯ 6 (9), ಲೂಕ್ ರೈಟ್ ಸಿ ಡೇವಿಡ್ ಹಸ್ಸಿ ಬಿ ಅಜರ್ ಮಹಮೂದ್ 34 (10), ಅಭಿಷೇಕ್ ನಾಯರ್ ಅಜೇಯ 2 (2). ಇತರೆ 8.
ವಿಕೆಟ್ ಪತನ: 1-83, 2-124, 3-142, 4-180.
ಬೌಲಿಂಗ್: ಪ್ರವೀಣ್ ಕುಮಾರ್ 4-1-36-0, ಅಜರ್ ಮಹಮೂದ್ 4-0-42-2, ಪರ್ವಿಂದರ್ ಆವಾನಾ 4-0-38-1, ಮನ್ಪ್ರೀತ್ ಗೋನಿ 4-0-32-1, ಫಿಯೂಷ್ ಚಾವ್ಲಾ 4-0-33-0.
ಕಿಂಗ್ಸ್ ಇಲೆವೆನ್ ಪಂಜಾಬ್: 186/3 (19.5 ಓವರ್)
ಗಿಲ್ಕ್ರಿಸ್ಟ್ ಸಿ ಉತ್ತಪ್ಪ ಬಿ ಭುವನೇಶ್ವರ್ ಕುಮಾರ್ 4 (3), ಮನದೀಪ್ ಸಿಂಗ್ ಅಜೇಯ 77 (58), ಅಜರ್ ಮೆಹಮೂದ್ ಎಲ್ಬಿಡಬ್ಲ್ಯೂ ಬಿ ಮೆಂಡಿಸ್ 0 (4), ಮನನ್ ವೊಹ್ರಾ ಬಿ ಯುವರಾಜ್ ಸಿಂಗ್ 22 (13), ಡೇವಿಡ್ ಮಿಲ್ಲರ್ ಅಜೇಯ 80 (41). ಇತರೆ 3
ವಿಕೆಟ್ ಪತನ: 1-4, 2-5, 3-58.
ಬೌಲಿಂಗ್: ಭುವನೇಶ್ವರ್ ಕುಮಾರ್ 4-0-31-1, ಅಜಂತಾ ಮೆಂಡಿಸ್ 4-0-38-1, ಅಶೋಕ್ ದಿಂಡಾ 4-0-38-0, ರಾಹುಲ್ ಶರ್ಮಾ 3-0-28-0, ಯುವರಾಜ್ ಸಿಂಗ್ 2-0-15-1, ಲೂಕ್ ರೈಟ್ 2.5-0-35-0.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


