ಸಚಿನ್-ರಿಚರ್ಡ್ಸ್ ಸಮಾಗಮ
ನವದೆಹಲಿ: ವಿಶೇಷವಾದ ಬೆಳವಣಿಗೆಯೊಂದರಲ್ಲಿ ಮುಂಬೈ ತಂಡದ ಆಟಗಾರ ಹಾಗೂ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ವಿವಿಯನ್ ರಿಚರ್ಡ್ಸ್ ಇಬ್ಬರೂ ಭಾನುವಾರ ಭೇಟಿಯಾಗಿ, ಔಪಚಾರಿಕವಾಗಿ ಮಾತುಕತೆ ನಡೆಸಿದರು. ಇವರಿಬ್ಬರ ಸಮ್ಮಿಲನಕ್ಕೆ ಫಿರೋಜ್ ಶಾ ಕೋಟ್ಲಾ ಮೈದಾನ ಸಾಕ್ಷಿಯಾಯಿತು.
ಅದು ಬೆಳಗಿನ ಸಮಯ... ಮಧ್ಯಾಹ್ನ ಮುಂಬೈ- ಡೆಲ್ಲಿ ತಂಡಗಳ ನಡುವೆ ನಡೆಯಬೇಕಿದ್ದ ಐಪಿಎಲ್ ಪಂದ್ಯದ ಹಿನ್ನೆಲೆಯಲ್ಲಿ, ಮುಂಬೈ ತಂಡದ ಆಟಗಾರರೆಲ್ಲರೂ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದರು. ಸಚಿನ್ ಸಹ ಅಭ್ಯಾಸದಲ್ಲಿ ತೊಡಗಿದ್ದರು.
ಅತ್ತ, ಮೈದಾನದ ಇತರೆಡೆ ಡೆಲ್ಲಿ ತಂಡದ ಕ್ರಿಕೆಟರ್‌ಗಳೂ ಅಭ್ಯಾಸ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ, ರಿಚರ್ಡ್ಸ್ ಕ್ರೀಡಾಂಗಣ ಪ್ರವೇಶಿಸಿದರು. ರಿಚರ್ಡ್ಸ್ ಕ್ರೀಡಾಂಗಣಕ್ಕೆ ಆಗಮಿಸಿದಾಗ ಅಭ್ಯಾಸ ನಡೆಸುತ್ತಿದ್ದ ಸಚಿನ್, ತಕ್ಷಣವೇ ಅಭ್ಯಾಸ ನಿಲ್ಲಿಸಿ ಅವರನ್ನು ಸ್ವಾಗತಿಸಿದರು.
ಧನ್ಯ ಸಮ್ಮಿಲನ: ಇಬ್ಬರೂ ದಿಗ್ಗಜರು ಭೇಟಿಯಾದ ಕ್ಷಣ ಮಾತ್ರ ಎಂದೂ ಮರೆಯಲಾರದ ದೃಶ್ಯ ಎನ್ನುವ ರೀತಿಯಲ್ಲಿತ್ತು. ರಿಚರ್ಡ್ಸ್ ಅವರಿಗೆ ಶುಭಾಷಯ ಕೋರಿದ ಸಚಿನ್ ಅವರನ್ನು ರಿಚರ್ಡ್ಸ್ ಆದರಣೆಯಿಂದ ಬರಮಾಡಿಕೊಂಡು, ಆಲಂಗಿಸಿಕೊಂಡರು. ಬಳಿಕ, ಸಚಿನ್ ಅವರ ಹೊಟ್ಟೆಯ ಮೇಲೆ ತಮ್ಮ ಅಂಗೈನಿಂದ ಮೆಲ್ಲಗೆ ಎರಡೇಟು ಹೊಡೆದ ರಿಚರ್ಡ್ಸ್, ನಸುನಗುತ್ತಾ 'ಸ್ವಲ್ಪ ಹೊಟ್ಟೆ ಬಂದಿದೆ' ಎನ್ನುತ್ತಾ ನಸುನಕ್ಕರು. ನಂತರ, ಇಬ್ಬರೂ ಉಭಯಕುಶಲೋಪರಿಗಳ ಮೂಲಕ ಮಾತುಕತೆ ಆರಂಭಿಸಿದರು.
ಕೆಲ ಕ್ಷಣಗಳ ನಂತರ, ಸಚಿನ್ ತಮ್ಮೊಂದಿಗೆ ತಂದಿದ್ದ ಬ್ಯಾಟನ್ನು ಕೈಗೆ ತೆಗೆದುಕೊಂಡ ರಿಚರ್ಡ್ಸ್, ಬ್ಯಾಟ್ ಬೀಸಿ ಖುಷಿಪಟ್ಟರು. 10 ನಿಮಿಷಗಳವರೆಗೂ ಸಚಿನ್ ಅವರೊಂದಿಗೆ ಕಾಲ ಕಳೆದ ರಿಚರ್ಡ್ಸ್ ನಂತರ, ಶೇಖರ್ ಜೊತೆಗೂಡಿ ಡೆಲ್ಲಿ ತಂಡ ಅಭ್ಯಾಸ ನಡೆಸುತ್ತಿದ್ದ ಜಾಗಕ್ಕೆ ತೆರಳಿದರು. ಅವರ ಜೊತೆಯಲ್ಲೇ ಸ್ವಲ್ಪ ದೂರ ಹೆಜ್ಜೆ ಹಾಕಿದ ಸಚಿನ್ ಕೂಡಾ, ರಿಚರ್ಡ್ಸ್ ಅವರಿಗೆ ವಿದಾಯ ಹೇಳಿ ಮುಂಬೈ ತಂಡದ ಅಭ್ಯಾಸ ಶಿಬಿರವನ್ನು ಸೇರಿಕೊಂಡರು. ಅಂತೂ ಈ ಇಬ್ಬರ ಭೇಟಿಯನ್ನು ನೋಡಿದವರು ಮಾತ್ರ ಧನ್ಯತಾಭಾವ ಅನುಭವಿಸಿದ್ದು ಮಾತ್ರ ಸುಳ್ಳಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

