ಕ್ರೀಡೆ

ಚೆಸ್: ಆನಂದ್‌ಗೆ ಸೋಲು

Published On :

ನವದೆಹಲಿ: ಇತ್ತೀಚಿನ ಪಂದ್ಯಾವಳಿಯಲ್ಲಿ ಗೆಲುವಿನ ಲಯಕ್ಕೆ ಬರಲು ಒದ್ದಾಡುತ್ತಿರುವ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಸೋಮವಾರ ಆರಂಭವಾಗಿರುವ ಅಲೆಖಿನ್ ಸ್ಮಾರಕ ಚೆಸ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಸೋಲನುಭವಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಇಂಗ್ಲೆಂಡ್‌ನ ಮೈಕಲ್ ಆ್ಯಡಮ್ಸ್ ವಿರುದ್ಧ ಆಡಿದ ಆನಂದ್ ಆಘಾತಕಾರಿ ಸೋಲನುಭವಿಸಿ ಪಂದ್ಯಾವಳಿಯಲ್ಲಿ ಸೋಲಿನ ಮೂಲಕ ತಮ್ಮ ಅಭಿಯಾನ ಆರಂಭಿಸಿದ್ದಾರೆ.
ಮತ್ತೊಂದು ಅಚ್ಚರಿಯ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ ತಮ್ಮ ಬಲಿಷ್ಠ ಎದುರಾಳಿ ವಿಶ್ವದ ಮೂರನೇ ರ್ಯಾಂಕಿಂಗ್‌ನ ಅರ್ಮೆನಿಯಾದ ಲೆವೊನ್ ಅರೋನಿಯನ್ ಅವರನ್ನು ಸೋಲಿಸಿ ಅಚ್ಚರಿ ಮೂಡಿಸಿದರು.
ಇನ್ನು ಮೂರನೇ ಪಂದ್ಯದಲ್ಲಿ ರಷ್ಯಾದ ವ್ಲಾಡ್ಮಿಯರ್ ಕ್ರಾಮ್ನಿಕ್ ಮತ್ತೊಬ್ಬ ರಷ್ಯಾ ಆಟಗಾರ ನಿಕಿತಾ ವಿಟುಗೋವ್ ಅವರನ್ನು ಸೋಲಿಸಿದ್ದಾರೆ.
ಸಮಬಲದಿಂದ ನಡೆದ ನಾಲ್ಕನೇ ಪಂದ್ಯದಲ್ಲಿ ರಷ್ಯಾದ ಪೀಟರ್ ಸ್ವಿಡ್ಲರ್ ಅವರು ತಮ್ಮ ಎದುರಾಳಿ ಐರಿಶ್‌ನ ಬೊರಿಸ್ ಗೆಲ್ಫ್ಯಾಂಡ್ ವಿರುದ್ಧ ಡ್ರಾ ಸಾಧಿಸಿದ್ದಾರೆ.
ಐದನೇ ಪಂದ್ಯದಲ್ಲಿ ಮ್ಯಾಕ್ಸಿಮ್ ಲಾಗ್ರವ್ ಮತ್ತು ಲೌರೆಂಟ್ ಫ್ರೆಸ್ಸಿನೆಟ್ ಡ್ರಾ ಸಾಧಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.