ಪುಣೆಗೆ ರಾಯಲ್ ಚಾಲೆಂಜ್
ಬೆಂಗಳೂರು: ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮಂಗಳವಾರ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ದುರ್ಬಲ ಪುಣೆ ತಂಡವನ್ನು ಎದುರಿಸಲಿದೆ.
ಇದುವರೆಗೆ ತಾನು ಆಡಿರುವ 7 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಆರ್ಸಿಬಿ ಗೆದ್ದಿದೆ. ಆದರೆ, ಈ ಐದೂ ಜಯ ಅದಕ್ಕೆ ಲಭ್ಯವಾಗಿರುವದು ತನ್ನ ತವರು ನೆಲದಲ್ಲೇ. ಹಾಗಾಗಿ, ತವರಿನಲ್ಲಿ 6ನೇ ಜಯ ಕಾಣುವ ಸನ್ನಾಹದಲ್ಲಿ ಆರ್ಸಿಬಿ ಇದೆ.
ಕಳೆದ ಐಪಿಎಲ್ ಪಂದ್ಯಾವಳಿಗಳಿಗೆ ಹೋಲಿಸಿದರೆ, ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡದ ವಿಶೇಷತೆಯೇನೆಂದರೆ, ಅದು ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಯ್ಲ್ ಎಂಬ ದೈತ್ಯ ಪ್ರತಿಭೆಯ ಮೇಲೇ ಹೆಚ್ಚು ಅವಲಂಬಿತ ಎಂಬ ಹಣೆಪಟ್ಟಿಯನ್ನು ಕಳಚಿರುವುದು. ಗೇಯ್ಲ್ ವೈಫಲ್ಯದ ಸಂದರ್ಭದಲ್ಲಿ ತಂಡಕ್ಕೆ ವಿರಾಟ್ ಕೊಹ್ಲಿ, ಡಿವಿಲಿಯರ್ಸ್ ಆಸರೆಯಾಗಿದ್ದಾರೆ.
ವಿರಾಟ್ ಕೊಹ್ಲಿ ತಾವು ಆಡಿರುವ ಏಳು ಪಂದ್ಯಗಳಿಂದ ಒಟ್ಟು 322 ರನ್ ಗಳಿಸಿ, ಆರೇಂಜ್ ಕ್ಯಾಪ್ ಗಳಿಸುವ ಮೂಲಕ, ತಮ್ಮ ಫಾರ್ಮ್ ಸಾಬೀತುಪಡಿಸಿದ್ದಾರೆ. ಇನ್ನು, ಆರ್ಸಿಬಿ ಬೌಲಿಂಗ್ ವಿಭಾಗದಲ್ಲಿ, ವಿನಯ್ ಕುಮಾರ್ ಹಾಗೂ ರವಿ ರಾಮ್ಪಾಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಏಳು ಪಂದ್ಯಗಳಿಂದ 12 ವಿಕೆಟ್ ಗಳಿಸಿರುವ ವಿನಯ್ ಕುಮಾರ್, ಈಗಾಗಲೇ ಪರ್ಪಲ್ ಕ್ಯಾಪ್ ಪಡೆದಿರುವುದೂ ತಂಡಕ್ಕೆ ಮತ್ತೊಂದು ಹಿರಿಮೆ ತಂದಿದೆ.
ನರಳುತ್ತಿರುವ ಪುಣೆ: ಮತ್ತೊಂದೆಡೆ, ಪುಣೆ ವಾರಿಯರ್ಸ್ ಮಂಗಳವಾರದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಗೆಲ್ಲುವ ಮೂಲಕ ತನ್ನ ಆತ್ಮವಿಶ್ವಾಸವನ್ನು ಮರಳಿ ಪಡೆಯುವ ಚಿಂತನೆಯಲ್ಲಿದೆ. ಸ್ಟಾರ್ ಆಟಗಾರರಾದ ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಏಂಜಲೋ ಮ್ಯಾಥ್ಯೂಸ್, ಮಾರ್ಲೊನ್ ಸ್ಯಾಮ್ಯುಯೆಲ್ಸ್ ಅವರು ಏಕರೀತಿಯ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಆದರೆ, ಆ ತಂಡದ ಬ್ಯಾಟಿಂಗ್ ವಿಭಾಗದಲ್ಲಿರುವ ಏರಾನ್ ಫಿಂಚ್, ಸ್ಟೀವನ್ ಸ್ಮಿತ್, ಲೂಕ್ ರೈಟ್ ಅವರು ತಂಡದ ಆಶಾಕಿರಣ. ಬೌಲಿಂಗ್ ವಿಭಾಗದಲ್ಲಿ, ರಾಹುಲ್ ಶರ್ಮಾ, ಮ್ಯಾಥ್ಯೂಸ್ ತಡದ ಭರವಸೆಯ ಕ್ರೀಡಾಳುಗಳು. ಆದರೆ, ಅಶೋಕ್ ದಿಂಡಾ, ಭುವನೇಶ್ವರ್ ಕುಮಾರ್ ಸುಧಾರಿಸಬೇಕಿದೆ.
ಸಂಭಾವ್ಯ ಆಟಗಾರರು
ಆರ್ಸಿಬಿ: ವಿರಾಟ್ ಕೊಹ್ಲಿ (ನಾಯಕ), ಮಾಯಾಂಕ್ ಅಗರ್ವಾಲ್, ಕೆ.ಪಿ ಅಪ್ಪಣ್ಣ, ಶ್ರೀನಾಥ್ ಅರವಿಂದ್, ಅರುಣ್ ಕಾರ್ತಿಕ್, ಕ್ರಿಸ್ಟೊಫರ್ ಬರ್ನ್ವೆಲ್, ಡೇನಿಯಲ್ ಕ್ರಿಸ್ಚಿಯನ್, ಎಬಿ ಡಿವಿಲಿಯರ್ಸ್, ತಿಲಕರತ್ನೆ ದಿಲ್ಶಾನ್, ಕ್ರಿಸ್ ಗೇಯ್ಲ್, ಮೊಯ್ಸಿಸ್ ಹೆನ್ರಿಕೇಸ್, ಶೆಲ್ಡನ್ ಜಾಕ್ಸನ್, ಮುರಳಿ ಕಾರ್ತಿಕ್, ಜಹೀರ್ ಖಾನ್, ಆ್ಯಂಡ್ರೂ ಮೆಕ್ಡೊನಾಲ್ಡ್, ಅಭಿಮನ್ಯು ಮಿಥುನ್, ಅಭಿನವ್ ಮುಕುಂದ್, ಮುತ್ತಯ್ಯ ಮುರಳಿಧರನ್, ಕರುಣ್ ನಾಯರ್, ಪಂಕಜ್ ಸಿಂಗ್, ಪಿ.ಪರಮೇಶ್ವರನ್, ಹರ್ಶದ್ ಪಟೇಲ್, ಚೇತೇಶ್ವರ ಪೂಜಾರ, ರವಿ ರಾಮ್ಪಾಲ್, ಸಂದೀಪ್ ವಾರಿಯರ್, ಆರ್.ಪಿ. ಸಿಂಗ್, ಸನ್ನಿ ಸೋಹೈಲ್, ಸೈಯದ್ ಮಹಮದ್, ಸೌರಬ್ ತಿವಾರಿ, ಜಯ್ದೇವ್ ಉನದ್ಕತ್, ಡೇನಿಯಲ್ ವೆಟ್ಟೊರಿ, ವಿನಯ್ ಕುಮಾರ್, ವಿಜಯ್ ಜೋಲ್.
ಪುಣೆ ವಾರಿಯರ್ಸ್: ಏರಾನ್ ಫಿಂಚ್ (ನಾಯಕ), ಏಕಲವ್ಯ ದ್ವಿವೇದಿ, ಯುವರಾಜ್ ಸಿಂಗ್ , ಉದಿತ್ ಬಿರ್ಲಾ, ಅಶೋಕ್ ದಿಂಡಾ, ರೈಫಿ ಗೊಮೇಜ್, ಹರ್ಪ್ರೀತ್ ಸಿಂಗ್, ಧೀರಜ್ ಜಾದವ್, ಭುವನೇಶ್ವರ್ ಕುಮಾರ್, ಅನುಸ್ತುಪ್ ಮಜುಂಮ್ದಾರ್, ಮಿಥುನ್ ಮನಾಸ್, ಮಿಚೆಲ್ ಮಾರ್ಷ್, ಆ್ಯಂಜಲೋ ಮ್ಯಾಥ್ಯೂಸ್, ಅಜಂತಾ ಮೆಂಡೀಸ್, ಅಲಿ ಮುರ್ತಾಜಾ, ಅಭಿಶೇಕ್ ನಾಯರ್, ಈಶ್ವರ್ ಪಾಂಡೆ, ಮನೀಶ್ ಪಾಂಡೆ, ವೇಯ್ನ್ ಪಾರ್ನೆಲ್, ಪರ್ವೆಜ್ ರಸೂಲ್, ಮಹೇಶ್ ರಾವತ್, ಕೇನ್ ರಿಚರ್ಡ್ಸನ್, ಮರ್ಲಾನ್ ಸ್ಯಾಮ್ಯೂಯೆಲ್ಸ್, ರಾಹುಲ್ ಶರ್ಮಾ, ಸ್ಟೀವ್ ಸ್ಮಿತ್, ಟಿ.ಸುಮನ್, ತಮಿಮ್ ಇಕ್ಬಾಲ್, ರಾಸ್ ಟೇಲರ್, ಕೃಷ್ಣಕಾಂತ್ ಉಪಾಧ್ಯಾಯ್, ರಾಬಿನ್ ಉತ್ತಪ್ಪ, ಶ್ರೀಕಾಂತ್ ವಾ, ಲೂಕ್ ರೈಟ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

