ಚೆಸ್: ಡ್ರಾ ಸಾಧಿಸಿದ ವಿಶ್ವನಾಥನ್ ಆನಂದ್
ಪ್ಯಾರಿಸ್: ಗೆಲುವಿನ ಹಾದಿಯನ್ನು ಹುಡುಕುತ್ತಿರುವ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ಗೆಲುವಿನ ಹುಡುಕಾಟವನ್ನು ಮುಂದುವರಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಅಲೆಖಿನ್ ಸ್ಮಾರಕ ಚೆಸ್ ಪಂದ್ಯಾವಳಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಡ್ರಾ ಸಾಧಿಸಿದ್ದಾರೆ. 10 ಆಟಗಾರರ ರೌಂಡ್ ರಾಬಿನ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ನ ಮೈಕಲ್ ಆ್ಯಡಮ್ಸ್ ವಿರುದ್ಧ ಸೋಲನುಭವಿಸಿದ್ದ ಆನಂದ್, ಎರಡನೇ ಪಂದ್ಯದಲ್ಲಿ ರಷ್ಯಾದ ನಿಕಿತ ವಿಟುಗೋವ್ ಅವರ ವಿರುದ್ಧ ಡ್ರಾ ಸಾಧಿಸಿದ್ದಾರೆ. ಉಳಿದ ಪಂದ್ಯಗಳಲ್ಲಿ ಲೆವೊನ್ ಅರೋನಿಯನ್ ತಮ್ಮ ಎದುರಾಳಿ ವ್ಲಾಡ್ಮಿರ್ ಕ್ರಾಮ್ನಿಕ್ ವಿರುದ್ಧ ಜಯ ಸಾಧಿಸಿದ್ದಾರೆ. ತಮ್ಮ ಗೆಲುವಿನ ಓಟ ಮುಂದುವರಿಸಿರುವ ಮೈಕಲ್ ಆ್ಯಡಮ್ಸ್, ಪೀಟರ್ ಸ್ವಿಡ್ಲರ್ ಅವರನ್ನು ಮಣಿಸಿದ್ದಾರೆ. ಮ್ಯಾಕ್ಸಿಮ್ ಲಾಗ್ರಾವ್, ಡಿಂಗ್ ಲಿರೆನ್ ವಿರುದ್ಧ ಸುಲಭ ಜಯ ಪಡೆದರೆ, ಅಂತಿಮ ಪಂದ್ಯದಲ್ಲಿ ಲೌರೆಂಟ್ ಫ್ರೆಸ್ಸಿನೆಟ್ ಹಾಗೂ ಬೋರಿಸ್ ಗೆಲ್ಫೆಡ್ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

