ಕ್ರೀಡೆ

ಪ್ರಧಾನ ಸುತ್ತಿಗೆ ಚೇತನ್ ಆನಂದ್

Published On :

ನವದೆಹಲಿ: ನಾಲ್ಕು ಬಾರಿ ರಾಷ್ಟ್ರೀಯ ಚಾಂಪಿಯನ್‌ಷಿಪ್ ಗೆದ್ದ ಚೇತನ್ ಆನಂದ್ ಇಂಡಿಯಾ ಓಪನ್ ಸೂಪರ್ ಸಿರೀಸ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಧಾನ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಚೇತನ್ ಜತೆಗೆ ಭಾರತದ ಇತರ ಮೂವರು ಪುರುಷ ಆಟಗಾರರಾದ ಸುಭಾಂಕರ್ ಡೇ, ಅರವಿಂದ್ ಭಟ್ ಹಾಗೂ ಎಚ್.ಎಸ್ ಪ್ರಣಯ್ ಪ್ರಧಾನ ಸುತ್ತಿಗೆ ಪ್ರವೇಶಿಸಿದ್ದಾರೆ.
ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲೂ ನಾಲ್ವರು ವನಿತೆಯರು ಪ್ರಧಾನ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದಾರೆ. ರೀತುಪೂರ್ಣ್ ದಾಸ್, ತೃಪ್ತಿ ಮುರುಗುಂಡೆ, ಜಿ. ರುತ್ವಿಕಾ ಶಿವಾನಿ ಹಾಗೂ ಸೈಲಿ ರಾಣೆ ಅರ್ಹತಾ ಸುತ್ತಿನ ಮೊದಲ ಮತ್ತು ದ್ವಿತೀಯ ಪಂದ್ಯಗಳಲ್ಲಿ ಜಯ ಕಾಣುವ ಮೂಲಕ ಪ್ರಧಾನ ಸುತ್ತಿಗೆ ಹೆಜ್ಜೆ ಹಾಕಿದರು.
ಅರ್ಹತಾ ಸುತ್ತಿನಲ್ಲಿ ಸ್ಟಾರ್ ಆಟಗಾರ ಎನಿಸಿದ್ದ ಚೇತನ್ ಮೊದಲ ಸುತ್ತಿನಲ್ಲಿ ಅಭಿಮನ್ಯು ಸಿಂಗ್ ವಿರುದ್ಧ 21-17, 21-12 ಸುಲಭವಾಗಿ ಜಯ ಸಾಧಿಸಿದರು. ಆದರೆ, ದ್ವಿತೀಯ ಸುತ್ತಿನಲ್ಲಿ ಸಮೀರ್ ವರ್ಮಾ ವಿರುದ್ಧ 22-20, 11-21, 21-13 ಪ್ರಯಾಸದ ಜಯ ಕಂಡುಕೊಂಡರು.
'ನಾನು ಆಡಲು 100ರಷ್ಟು ಫಿಟ್ ಆಗಿಲ್ಲ. ಆದರೆ, ಪಂದ್ಯದಲ್ಲಿ ನನಗೆ ಯಾವುದೇ ತೊಂದರೆ ಕಾಣಿಸುತ್ತಿಲ್ಲ. ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರುವ ಉತ್ಸಾಹ ಹೊಂದಿದ್ದೇನೆ' ಎಂದಿದ್ದಾರೆ ಮೊಣಕಾಲು ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಆನಂದ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.