ಮತ್ತೆ ಸೋತ ಡೆಲ್ಲಿ
ನವದೆಹಲಿ: ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಡೆಲ್ಲಿ ಡೇರ್ಡೆವಿಲ್ಸ್ ತಂಡ ಮಂಗಳವಾರ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 5 ವಿಕೆಟ್ಗಳ ಸೋಲನುಭವಿಸಿದೆ.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಡೆಲ್ಲಿ ಡೇರ್ಡೆವಿಲ್ಸ್ ತಂಡದ ಬ್ಯಾಟ್ಸ್ಮನ್ಗಳು ನೀರಸ ಬ್ಯಾಟಿಂಗ್ ನಡೆಸಿ ನಿಗದಿತ ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 120 ರನ್ ಕಲೆ ಹಾಕಿದರು.
ಡೆಲ್ಲಿ ಪರ ಡೇವಿಡ್ ವಾರ್ನರ್ (40) ಮಾತ್ರ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡ 120 ರನ್ ಪೂರೈಸಲು ನೆರವಾದರು. 36 ಎಸೆತಗಳನ್ನು ಎದುರಿಸಿದ ವಾರ್ನರ್ ಮೊತ್ತದಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿಗಳು ಸೇರಿದ್ದವು.
ಆರಂಭಿಕರಾಗಿ ಅಂಗಣಕ್ಕಿಳಿದ ನಾಯಕ ಮಹೇಲ ಜಯವರ್ಧನೆ (4) ಮತ್ತು ತಂಡದ ಭರವಸೆಯ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ (23) ತಂಡಕ್ಕೆ ಭದ್ರ ಬುನಾದಿ ಹಾಕುವಲ್ಲಿ ವಿಫಲವಾದರು. ಜಯವರ್ಧನೆ ಮೊದಲ ಓವರ್ನಲ್ಲೇ ಪ್ರವೀಣ್ ಕುಮಾರ್ ಬೌಲಿಂಗ್ನಲ್ಲಿ ಡೇವಿಡ್ ಹಸ್ಸಿಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ನಂತರ ಬಂದ ವ್ಯಾನ್ ಡೇರ್ ಮರ್ವೆ (8) ಸಹ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದೆ, ಪರ್ವಿಂದರ್ ಅವಾನಾ ಬೌಲಿಂಗ್ನಲ್ಲಿ ಮಂದೀಪ್ ಸಿಂಗ್ಗೆ ಕ್ಯಾಚ್ ನೀಡಿದರು. ನಂತರ 7ನೇ ಓವರ್ನ ಅಂತಿಮ ಎಸೆತದಲ್ಲಿ ಸೆಹ್ವಾಗ್ ಹರ್ಮೀತ್ ಸಿಂಗ್ ಎಸೆತದಲ್ಲಿ ಮಂದೀಪ್ಗೆ ಕ್ಯಾಚ್ ನೀಡಿದರು. ವಾರ್ನರ್, ಸೆಹ್ವಾಗ್ ಜತೆಗೆ ಜುನೇಜಾ (14) ಮತ್ತು ಇರ್ಫಾನ್ ಪಠಾಣ್ (14) ಮಾತ್ರ ಡೆಲ್ಲಿ ತಂಡದ ಎರಡಂಕಿ ದಾಟಿದ ಬ್ಯಾಟ್ಸ್ಮನ್ಗಳೆನಿಸಿದರು.
ಕಿಂಗ್ಸ್ ಇಲೆವೆನ್ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಹರ್ಮೀತ್ ಸಿಂಗ್ 3 ವಿಕೆಟ್ ಪಡೆದರೆ, ಪ್ರವೀಣ್ ಕುಮಾರ್ 2, ಪರ್ವಿಂದರ್ ಅವಾನಾ ಮತ್ತು ಭಾರ್ಗವ್ ಭಾಟಿಯಾ ತಲಾ 1 ವಿಕೆಟ್ ಕಬಳಿಸಿದರು.
ಡೆಲ್ಲಿ ತಂಡ ನೀಡಿದ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ತಂಡ ಕೇವಲ 17 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 121 ರನ್ಗಳಿಸಿ ಗೆಲುವಿನ ಅಲೆಯಲ್ಲಿ ತೇಲಿದರು. ಆರಂಭಿಕರಾಗಿ ಕಣಕ್ಕಿಳಿದ ಗಿಲ್ಕ್ರಿಸ್ಟ್ ಕೇವಲ 6 ರನ್ಗಳಿಸಿ ಔಟಾಗುವ ಮೂಲಕ ಆರಂಭಿಕ ಆಘಾತಕ್ಕೆ ಕಾರಣರಾದರು. ನಂತರ ಬಂದ ಪೊಮರ್ಸ್ಬ್ಯಾಚ್ 18 ರನ್ಗಳಿಸಿದರೆ, ವೊಹ್ರಾ 8, ಹಸ್ಸಿ 20 ರನ್ಗಳಿಸಿ ಔಟಾದರು. ಒಂದು ಹಂತದಲ್ಲಿ ಕುಸಿಯುತ್ತಿದ್ದ ತಂಡವನ್ನು ಮೇಲೆತ್ತಿದ ಡೇವಿಡ್ ಮಿಲ್ಲರ್ ಅಜೇಯ 34 ರನ್ಗಳಿಸಿ ತಂಡವನ್ನು ಯಶಸ್ವಿಯಾಗಿ ಜಯದ ದಡ ಸೇರಿಸಿದರು.
ಸ್ಕೋರ್ ಬೋರ್ಡ್
ಡೆಲ್ಲಿ ಡೇರ್ಡೆವಿಲ್ಸ್ 120/7 (20 ಓವರ್)
ಜಯವರ್ಧನೆ ಸಿ ಹಸ್ಸಿ ಬಿ ಕುಮಾರ್ 4(4), ಸೆಹ್ವಾಗ್ ಬಿ ಮಂದೀಪ್ ಬಿ ಹರ್ಮಿತ್ 23(21), ಮರ್ವೆ ಬಿ ಮಂದೀಪ್ ಬಿ ಅವಾನ 8(9), ವಾರ್ನರ್ ಬಿ ಕುಮಾರ್ 40(36), ಜುನೇಜಾ ಸಿ ಅವಾನ ಬಿ ಹರ್ಮಿತ್ 0(2), ಬೋತಾ ಸಿ ಮಿಲ್ಲರ್ ಬಿ ಭಟ್ 1(2), ಪಠಾಣ್ ಅಜೇಯ 14(17), ಅಗರ್ಕರ್ ಅಜೇಯ 9(9), ಇತರೆ 7.
ವಿಕೆಟ್ ಪತನ: 1-4, 2-22, 3-45, 4-84, 5-85, 6-89, 7-103
ಬೌಲಿಂಗ್: ಕುಮಾರ್ 4-0-29-2, ಅವಾನ 4-1-21-1, ಹರ್ಮಿತ್ 4-0-24-3, ಹಸ್ಸಿ 4-0-14-0, ಚಾವ್ಲಾ 2-0-17-0, ಭಟ್2-0-11-1.
ಕಿಂಗ್ಸ್ ಇಲೆವೆನ್ ಪಂಜಾಬ್ 121/5 (17 ಓವರ್)
ಗಿಲ್ಕ್ರಿಸ್ಟ್ ಸಿ ಬೋತಾ ಬಿ ಪಠಾಣ್ 6(3), ಮಂದೀಪ್ ರನೌಟ್ (ವಾರ್ನರ್) 24(15), ಪೊಮರ್ಸ್ಬ್ಯಾಚ್ ಬಿ ಮರ್ವೆ 18(10), ಮಿಲ್ಲರ್ ಅಜೇಯ 34(39), ವೊಹ್ರಾ ಸಿ ಮತ್ತು ಬಿ ಬೋತಾ 8(11), ಹಸ್ಸಿ ಸಿ ಬೋತಾ ಬಿ ನೆಹ್ರಾ 20(21), ಚಾವ್ಲಾ ಅಜೇಯ 5(3), ಇತರೆ 6.
ವಿಕೆಟ್ ಪತನ: 1-6, 2-50, 3-50, 4-70, 5-110
ಬೌಲಿಂಗ್: ಪಠಾಣ್ 2-0 26-1, ನೆಹ್ರಾ 3-0-28-1, ಬೋತಾ 4-0-23-1, ಮರ್ವೆ 4-1-17-1, ಯಾದವ್ 3-0-19-0, ಅಗರ್ಕರ್ 1-0-4-0
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

