ಇಂದು ಮುಂಬೈ- ಕೋಲ್ಕತಾ ಕಾಳಗ
ಕೋಲ್ಕತಾ: ಈ ಬಾರಿಯ ಐಪಿಎಲ್ನಲ್ಲಿ ನಾಲ್ಕು ಸೋಲು ಕಂಡು ಅಂಕಪಟ್ಟಿಯ 7ನೇ ಸ್ಥಾನಕ್ಕೆ ಜಾರಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡ, ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈ ಹಿಂದಿನ ಎರಡೂ ಪಂದ್ಯಗಳಲ್ಲಿ ಕ್ರಮವಾಗಿ, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿರುವ ಕೋಲ್ಕತಾ, ಅಂಕಪಟ್ಟಿಯಲ್ಲಿ ಮೇಲೇರಲು ಮುಂದಿನ ಪಂದ್ಯಗಳಲ್ಲಿ ಜಯಗಳಿಸಲೇಬೇಕಿದೆ.
ಅತ್ತ, ಮುಂಬೈ ತಂಡದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನಿಲ್ಲ. ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ಅದು, ಈ ಹಿಂದಿನ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿತ್ತು. ಈ ಹಿಂದಿನ ಪಂದ್ಯಗಳಲ್ಲಿ ಕ್ರಮವಾಗಿ, ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಸೋತಿರುವ ಮುಂಬೈ ತಂಡಕ್ಕೂ ಕೋಲ್ಕತಾ ವಿರುದ್ಧದ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
ಮುಂಬೈ ತಂಡಕ್ಕೆ ಕಳೆದ ಪಂದ್ಯದಲ್ಲಿ ಚಳ್ಳೇಹಣ್ಣು ತಿನ್ನಿಸಿದ ಡೆಲ್ಲಿ ಡೇರ್ಡೆವಿಲ್ಸ್ ತಂಡ ಆ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ, ಪ್ರಸಕ್ತ ಐಪಿಎಲ್ನಲ್ಲಿ ತನ್ನ ಮೊದಲ ಗೆಲವನ್ನು ದಾಖಲಿಸಿತು.
ಅದೇ ಪಂದ್ಯವನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ, ಮುಂಬೈ ತಂಡ ಬೌಲಿಂಗ್ ವಿಭಾಗದಲ್ಲಿ ಸಮಸ್ಯೆ ಹೊಂದಿದೆ. ಏಕೆಂದರೆ, ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ, 161 ರನ್ ಪೇರಿಸಿದ್ದ ಮುಂಬೈಗೆ ಆ ತಂಡದ ಯಾವ ಬೌಲರ್ಗಳೂ ಸಹಾಯಕ್ಕೆ ಬರಲಿಲ್ಲ. ಮುಂಬೈನ ದುರ್ಬಲ ಬೌಲಿಂಗ್ನ ಲಾಭ ಪಡೆದ ಡೆಲ್ಲಿ, ಈ ಪಂದ್ಯದಲ್ಲಿ 9 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ಹಾಗಾಗಿ, ಬೌಲಿಂಗ್ ವಿಭಾಗ ಮತ್ತಷ್ಟು ಪರಿಣಾಮಕಾರಿ ಪ್ರದರ್ಶನ ನೀಡಬೇಕಾದ ಅಗತ್ಯವಿದೆ.
ಉಡುಗೊರೆ: ತಂಡದಲ್ಲಿನ ಹಿರಿಯ ತೆಂಡೂಲ್ಕರ್ ಅವರ ಹುಟ್ಟುಹಬ್ಬದಂದೇ ಈ ಪಂದ್ಯ ನಡೆಯುತ್ತಿರುವುದರಿಂದ, ಈ ಪಂದ್ಯ ಗೆದ್ದರೆ, ಸಚಿನ್ಗೆ ಗೆಲವಿನ ಉಡುಗೊರೆ ನೀಡಿದಂತಾಗುತ್ತದೆ. ಔಟ್ ಆಫ್ ಫಾರ್ಮ್ ತೊಡಕು: ತಂಡದ ನಾಯಕ ರಿಕಿ ಪಾಂಟಿಂಗ್, ಫಾರ್ಮ್ನಲ್ಲಿ ಇಲ್ಲದಿರುವುದು ತಂಡದ ಮತ್ತೊಂದು ದೊಡ್ಡ ಕೊರತೆ. ಆದರೆ, ತಂಡದ ವಿಕೆಟ್ ಕೀಪರ್- ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಹಾಗೂ ರೋಹಿತ್ ಶರ್ಮಾ ಮಾತ್ರ ತಂಡದ ಆಧಾರಸ್ತಂಭಗಳಾಗಿ ನಿಂತಿದ್ದಾರೆ. ಅವರ ಜೊತೆಯಲ್ಲಿ, ತೆಂಡೂಲ್ಕರ್ ಸಹ ಫಾರ್ಮ್ಗೆ ಮರಳಿರುವುದು, (ಡೆಲ್ಲಿ ವಿರುದ್ಧದ ಪಂದ್ಯದ ಮೂಲಕ) ತಂಡಕ್ಕೆ ಮತ್ತೊಂದು ಸಹಾಯವಾಗಿದೆ.
ಸಮಸ್ಯೆ ಬೌಲಿಂಗ್ನದ್ದೇ. ಲಸಿತ್ ಮಾಲಿಂಗ, ಮುನಾಫ್ ಪಟೇಲ್ ಹಾಗೂ ಜಸ್ಪ್ರೀತ್ ಬುಮ್ರಾ ಅವರಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಲಭ್ಯವಾಗಿಲ್ಲ. ಸ್ಪಿನ್ನರ್ಗಳಾದ ಹರ್ಭಜನ್ ಫಾರ್ಮ್ನಲ್ಲಿಲ್ಲ. ಹಾಗಾಗಿ, ಕೋಲ್ಕತಾ ವಿರುದ್ಧದ ಪಂದ್ಯಕ್ಕೆ ಪ್ರಗ್ಯಾನ್ ಓಜಾಗೆ ಮತ್ತೆ ಅವಕಾಶ ನೀಡಬಹುದು.
ಇನ್ನು, ಕೋಲ್ಕತಾ ವಿಷಯಕ್ಕೆ ಬಂದರೆ, ಈ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಕೊರತೆ ಅನುಭವಿಸುತ್ತಿದೆ. ಇಡೀ ತಂಡದಲ್ಲಿ ಗೌತಮ್ ಗಂಭೀರ್, ಜಾಕ್ ಕಾಲಿಸ್, ಇಯಾನ್ ಮಾರ್ಗನ್ ಹಾಗೂ ಸ್ಪಿನ್ನರ್ ಸುನಿಲ್ ನಾರಾಯಣ್ ಬಿಟ್ಟರೆ, ಮತ್ಯಾರೂ ಉತ್ತಮವಾಗಿ ಆಡಿಲ್ಲ. ಇದು ತಂಡದಲ್ಲಿನ ಕೊರೆತೆಯಾಗಿದೆ. ಯೂಸುಫ್ ಪಠಾಣ್, ಮನೋಜ್ ತಿವಾರಿ, ದೇವಬ್ರತಾ ದಾಸ್ ಹಾಗೂ ರಜತ್ ಭಾಟಿಯಾ ಈವರೆಗೆ ಪರಿಣಾಮಕಾರಿಯಾದ ಪ್ರದರ್ಶನ ನೀಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

