ಅಭಿಮಾನಿಗಳ ಪ್ರೋತ್ಸಾಹ ನನ್ನ ಫಿಟ್ನೆಸ್: ಗೇಯ್ಲ್
ಬೆಂಗಳೂರು: ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಹಲವಾರು ದಾಖಲೆಗಳನ್ನು ಚಂಡಾಡಿದ ಕ್ರಿಸ್ ಗೇಯ್ಲ್ ಅಭಿಮಾನಿಗಳ ಪ್ರೋತ್ಸಾಹವೇ ನನ್ನ ಫಿಟ್ನೆಸ್‌ನ ಗುಟ್ಟು ಎಂದು ತಿಳಿಸಿದರು.
ನಗರದ ಫೋರಮ್ ಮಾಲ್‌ನಲ್ಲಿ ನಡೆದ ಆರ್‌ಸಿಬಿ ರೀಬಾಕ್ ಕ್ರಾಸ್‌ಫಿಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಕ್ರಿಸ್‌ಗೇಯ್ಲ್ ಬೆಂಗಳೂರಿನ ಅಭಿಮಾನಿಗಳು ನೀಡುತ್ತಿರುವ ಪ್ರೋತ್ಸಾಹ ಅದ್ಭತವಾಗಿದ್ದು, ನನಗೆ ಹೆಚ್ಚು ಪ್ರೇರಣೆ ನೀಡುತ್ತದೆ. ನಾನು ಹೆಚ್ಚು ಫಿಟ್ ಆಗಿರಲು ಹೆಚ್ಚು ವ್ಯಾಯಾಮ ಮಾಡುತ್ತೇನೆ ಎಂದು ಗೇಯ್ಲ್ ತಿಳಿಸಿದರು.
ಇದೇ ವೇಳೆ ಫಿಟ್ನೆಸ್ ಬಗ್ಗೆ ಮಾತನಾಡಿದ ಮುರಳಿಧರನ್ ನನಗೆ ಕ್ರಿಕೆಟ್ ಆಡಬೇಕೆನ್ನುವ ಬಯಕೆ ಇನ್ನು ಇದೆ. ಹಾಗಾಗಿ ನಾನು ನನ್ನ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳುತ್ತಿದ್ದೇನೆ ಎಂದರು. ಈ ವೇಳೆ ತಿಲಕರತ್ನೆ ದಿಲ್ಶಾನ್, ಕೆ.ಎಲ್ ರಾಹುಲ್, ಕೋಚ್ ರೇ ಜೆನ್ನಿಂಗ್ಸ್, ಡೇನಿಯಲ್ ವೆಟ್ಟೊರಿ, ಅಭಿನವ್ ಮುಕುಂದ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

