ಕ್ರೀಡೆ

ಏಷ್ಯನ್ ಸ್ಕ್ವಾಷ್: ಸ್ಫರ್ಧಿಸದಿರಲು ಭಾರತ ನಿರ್ಧಾರ

Published On :

ನವದೆಹಲಿ: ಭದ್ರತೆ ಕಾರಣದಿಂದ ಪಾಕಿಸ್ತಾನದಲ್ಲಿ ನಡೆಯಲಿರುವ ಈ ಬಾರಿಯ ಸ್ಕ್ವಾಷ್ ಏಷ್ಯನ್ ಚಾಂಪಿಯನ್‌ಷಿಪ್ ಪಂದ್ಯಾವಳಿಯಲ್ಲಿ ಭಾಗವಹಿಸದಿರಲು ಭಾರತ ತಂಡದ ಆಟಗಾರರು ನಿರ್ಧರಿಸಿದ್ದಾರೆ. ಮೇ 1ರಿಂದ ಇಸ್ಲಾಮಬಾದ್‌ನಲ್ಲಿ ನಡೆಯಲಿರುವ ಈ ಪಂದ್ಯವಳಿಗೆ ಭಾರತದ ಪ್ರಮುಖ ಸ್ಕ್ವಾಷ್ ಆಟಗಾರರಾದ ಸೌರವ್ ಘೋಶಾಲ್, ದೀಪಿಕಾ ಪಳ್ಳಿಕಾಲ್ ಸೇರಿದಂತೆ ಇತರ ಆಟಗಾರರು ಪಂದ್ಯವಳಿಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ. ನಾವು ಪಾಕಿಸ್ತಾನದಲ್ಲಿನ ಭದ್ರತಾ ಪರಿಸ್ಥಿಯ ಕಾರಣದಿಂದ ಪಂದ್ಯಾವಳಿಯಲ್ಲಿ ಭಾಗವಹಿಸದಿರಲು ನಾವು ಫೆಬ್ರವರಿಯಲ್ಲೇ ನಿರ್ಧರಿಸಿದ್ದು, ಈ ವಿಷಯವನ್ನು ಎಸ್‌ಆರ್‌ಎಫ್‌ಐಗೆ ತಿಳಿಸಲಾಗಿದೆ ಎಂದು ಘೋಶಾಲ್ ತಿಳಿಸಿದರು. ಗಡಿಯಲ್ಲಿ ಇತ್ತೀಚಿಗೆ ನಮ್ಮ ಯೋಧರ ಶಿರಚ್ಛೇದನದ ಘಟನೆ ಹಾಗೂ ಪಾಕಿಸ್ತಾನದಲ್ಲಿ ಸ್ಥಳೀಯ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ಜೋಶ್ನಾ ಚಿನ್ನಪ್ಪ, ದೀಪಿಕಾ ಹಾಗೂ ನಾನು ಒಟ್ಟಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.