ಗೆಲವಿನ ಉಡುಗೊರೆ

ಕೋಲ್ಕತಾ: 40ನೇ ವಸಂತಕ್ಕೆ ಕಾಲಿಟ್ಟ ಸಚಿನ್ ತೆಂಡೂಲ್ಕರ್ಗೆ ಮುಂಬೈ ಇಂಡಿಯನ್ಸ್ ತಂಡ ನಿರಾಸೆ ಮಾಡಲಿಲ್ಲ. ಬೆಳಗ್ಗೆಯಿಂದ ಪತ್ನಿ ಹಾಗೂ ತಂಡದ ಜತೆ ಸಂತೋಷವಾಗಿದ್ದ ಸಚಿನ್ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕೇವಲ 2 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು. ಆದರೆ ಪಂದ್ಯದ ಅಂತ್ಯದಲ್ಲಿ ಗೆಲುವು ಸಾಧಿಸಿದ ಮುಂಬೈ ತಂಡ ಸಚಿನ್ಗೆ ಗೆಲುವಿನ ಉಡುಗೊರೆಯನ್ನೇ ನೀಡಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೋಲ್ಕತಾ, ಯೂಸುಫ್ ಅವರ ಬಿರುಸಿನ ಆರಂಭ ಹಾಗೂ ನಂತರ ಕಾಲಿಸ್, ತಿವಾರಿ, ಮಾರ್ಗನ್, ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಪೇರಿಸಿತು.
ಯೂಸುಫ್ ಪಠಾಣ್ ಅವರ ಆರ್ಭಟವನ್ನು ನಿಲ್ಲಿಸಿದ್ದು ಬೌಲರ್ ಮಿಚೆಲ್ ಜಾನ್ಸನ್. ಆರಂಭದಲ್ಲೇ 'ಡೇಂಜರಸ್' ಆಗಿ ಕಂಡ ಯೂಸುಫ್ ಅವರನ್ನು ಪೆವಿಲಿಯನ್ಗೆ ಅಟ್ಟಿದ ಜಾನ್ಸನ್, ಮುಂಬೈಗೆ ಮೊದಲ ಯಶಸ್ಸು ತಂದಿತ್ತರು.
ಮುಂಬೈನ ಇಂಥ ಕರಾರುವಾಕ್ ಬೌಲಿಂಗ್ ಎದುರು ದಿಟ್ಟನತದ ಹೋರಾಟ ತೋರಿದ ಗಂಭೀರ್ 26, ಕಾಲಿಸ್ 37, ತಿವಾರಿ 33, ಮಾರ್ಗನ್ 31 ರನ್ಗಳಿಸಿ ಕೆಕೆಆರ್ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.
ಯೂಸುಫ್ ಔಟಾದ ಮೇಲೆ ಕ್ರೀಸ್ನಲ್ಲಿದ್ದ ಗಂಭೀರ್ಗೆ ಜೋಡಿಯಾದ ಜಾಕ್ ಕಾಲಿಸ್, 2ನೇ ವಿಕೆಟ್ಗೆ 41 ರನ್ಗಳ ಜೊತೆಯಾಟವಾಡಿದರು. ಆದರೆ, ಪ್ರಗ್ಯಾನ್ ಓಜಾ ಅವರು ಗಂಭೀರ್ ವಿಕೆಟ್ ಪಡೆದು ಈ ಜೋಡಿಯನ್ನು ಮುರಿದರು. ಆಗ, ಕಾಲಿಸ್ಗೆ ಜೋಡಿಯಾಗಿದ್ದು ಮನೋಜ್ ತಿವಾರಿ. ಕಾಲಿಸ್-ತಿವಾರಿ ಜೋಡಿ, 24 ರನ್ ಜೊತೆಯಾಟವಾಡಿ ಭದ್ರವಾಗಿ ತಳ ಊರುವಷ್ಟರಲ್ಲಿ ಓಜಾ ಅವರೇ ಕಾಲಿಸ್ ವಿಕೆಟ್ ಪಡೆದು ಈ ಜೋಡಿಯನ್ನು ಬೇಪಂಡಿಸಿದರು.
ಆದರೂ, ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ತಿವಾರಿ, ಇಯಾನ್ ಮಾರ್ಗನ್ ಜೊತೆ 4ನೇ ವಿಕೆಟ್ಗೆ 54 ರನ್ ಜೊತೆಯಾಟವಾಡಿದರು. 18ನೇ ಓವರನಲ್ಲಿ ಜಾನ್ಸನ್ ಎಸೆತದಲ್ಲಿ ಮಾರ್ಗನ್ ಔಟಾದರು. ಕೊನೆಯ ಓವರ್ನಲ್ಲಿ 24 ಎಸೆತಗಳಲ್ಲಿ 33 ರನ್ ಬಾರಿಸಿದ್ದ ತಿವಾರಿ ಇನಿಂಗ್ಸ್ ಅಂತ್ಯಗೊಂಡಿತು. ಮಾರ್ಗನ್ ನಂತರ ಬಂದಿದ್ದ ದೇವಬ್ರತಾ ದಾಸ್ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
ಉಡುಗೊರೆಯ ಭೇಟೆ: ಕೆಕೆಆರ್ ತಂಡ ನೀಡಿದ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಆರಂಭದಲ್ಲಿ ಸಚಿನ್ ಅವರ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು.
6 ಎಸೆತಗಳನ್ನು ಎದುರಿಸಿ ಕೇವಲ 2 ರನ್ಗಳಿಸಿದ್ದ ಸಚಿನ್, ನಾರಾಯಣ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಎಲ್ಲರಲ್ಲು ನಿರಾಸೆ ಮೂಡಿಸಿದರು. ಈ ವೇಳೆ ಜತೆಯಾದ ಕಾರ್ತಿಕ್ ಸಹ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. 6 ಎಸೆತಗಳನ್ನೆದುರಿಸಿದ ಕಾರ್ತಿಕ್ 7 ರನ್ಗಳಿಸಿ ಸೇನನಾಯಕೆ ಎಸೆತದಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು.
ನಂತರ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಡ್ವೇನ್ ಸ್ಮಿತ್ 45 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ ಸೇರಿದಂತೆ 62 ರನ್ಗಳಿಸಿದರು. ಈ ವೇಳೆ ಮತ್ತೆ ದಾಳಿಗಿಳಿದ ನಾರಾಯಣ್, ಸ್ಮಿತ್ ವಿಕೆಟ್ ಪಡೆದು ಕೆಕೆಆರ್ಗೆ ನೆರವಾದರು. ನಂತರ ಜತೆಯಾದ ನಾಯಕ ರೋಹಿತ್ ಶರ್ಮಾ ಹಾಗೂ ಪೊಲಾರ್ಡ್ ಜವಾಬ್ದಾರಿಯುತವಾಗಿ ಬ್ಯಾಟಿಂಗ್ ನಡೆಸಿ ತಂಡಕ್ಕೆ 50 ರನ್ಗಳ ಜತೆಯಾಟವಾಡಿ ತಂಡವನ್ನು ಸುಭದ್ರ ಸ್ಥಿತಿಗೆ ಸೇರಿಸಿದರು. ಆದರೆ ನಾರಾಯಣ್, ಶರ್ಮಾರನ್ನು ಕಾಟ್ ಅಂಡ್ ಬೌಲ್ಡ್ ಮಾಡುವ ಮೂಲಕ ಮತ್ತೆ ಮುಂಬೈ ತಂಡವನ್ನು ಕಾಡಿದರು. ಕೊನೆ ಓವರ್ನಲ್ಲಿ 10 ರನ್ಗಳ ಅಗತ್ಯವಿದ್ದಾಗ ಆ ಓವರ್ನ ಮೊದಲ ಎಸೆತದಲ್ಲಿ ಔಟಾದ ಪೊಲಾರ್ಡ್ ಪಂದ್ಯಕ್ಕೆ ಟ್ವಿಸ್ಟ್ ನೀಡಿದರು. ಆದರೆ ನಂತರ ಬಂದ ಹರ್ಭಜನ್ ಸಿಕ್ಸರ್ ಬಾರಿಸುವ ಮೂಲಕ ಉಸಿರು ಬಿಗಿ ಹಿಡಿದಿದ್ದ ಮುಂಬೈ ತಂಡಕ್ಕೆ ನಿರಾಳವಾಗುವಂತೆ ಮಾಡಿದರು. ಇನ್ನು ಒಂದು ಎಸೆತ ಬಾಕಿ ಇರುವಾಗ ಚೆಂಡನ್ನು ಬೌಂಡರಿಗೆ ಸೇರಿಸಿದ ರಾಯುಡು ತಂಡವನ್ನು ಗೆಲುವಿನ ದಡ ಸೇರಿಸಿದರು. ಮುಂಬೈ ತಂಡದ ಪರ ಅರ್ಧ ಶತಕ ಸಿಡಿಸಿದ ಡ್ವೇನ್ ಸ್ಮಿತ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಸ್ಕೋರ್ ಬೋರ್ಡ್
ಕೆಕೆಆರ್ 159/6 (20 ಓವರ್)
ಯೂಸುಫ್ ಸಿ ಹರ್ಭಜನ್ ಬಿ ಜಾನ್ಸನ್ 19(6), ಗಂಭೀರ್ ಸಿ ಹರ್ಭಜನ್ ಬಿ ಓಜಾ 26(20), ಕಾಲಿಸ್ ಸಿ ಶರ್ಮಾ ಬಿ ಓಜಾ 37(38), ತಿವಾರಿ ಬಿ ಮಾಲಿಂಗ 33(24), ಮಾರ್ಗನ್ ಸಿ ಶರ್ಮಾ ಬಿ ಜಾನ್ಸನ್ 31(25), ದಾಸ್ ಬಿ ಮಾಲಿಂಗ 6(7), ಭಾಟಿಯಾ ಅಜೇಯ 1(1), ಇತರೆ 6.
ವಿಕೆಟ್ ಪತನ: 1-27, 2-68, 3-92, 4-146, 5-158, 6-159
ಬೌಲಿಂಗ್: ಹರ್ಭಜನ್ 2-0-35-0, ಜಾನ್ಸನ್ 4-0-26-2, ಮಾಲಿಂಗ 4-0-25-2, ಓಜಾ 4-0-21-2, ಪೊಲಾರ್ಡ್ 2-0-14-0, ಚಾಹಲ್ 4-0-34-0.
ಮುಂಬೈ ಇಂಡಿಯನ್ಸ್ 162/5 (19.5 ಓವರ್)
ಸ್ಮಿತ್ ಸಿ ಮೆಕಲಂ ಬಿ ನಾರಾಯಣ್ 62(45), ತೆಂಡೂಲ್ಕರ್ ಬಿ ನಾರಾಯಣ್ 2(6), ಕಾತಿರ್ಕ್ ಎಲ್ಬಿಡಬ್ಲ್ಯೂ ಬಿ ಸೇನನಾಯಕೆ 7(6), ಶರ್ಮಾ ಸಿ ಮತ್ತು ಬಿ ನಾರಾಯಣ್ 34(28), ಪೊಲಾರ್ಡ್ ಸಿ ತಿವಾರಿ ಬಿ ಭಾಟಿಯಾ 33(24), ರಾಯುಡು ಅಜೇಯ 13(8), ಹರ್ಭಜನ್ ಅಜೇಯ 7(2), ಇತರೆ 4.
ವಿಕೆಟ್ ಪತನ: 1-29, 2-64, 3-82, 4-132, 5-150
ಬೌಲಿಂಗ್: ಬಾಲಾಜಿ 4-0-24-0, ಅಬ್ದುಲ್ಲಾ 4-0-35-0, ನಾರಾಯಣ್ 4-0-17-3, ಸೇನನಾಯಕೆ 4-0-50-1, ಭಾಟಿಯಾ 3.5-0-32-1
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


