ಸೂಪರ್ ಕಿಂಗ್ಸ್, ಸನ್ರೈಸರ್ಸ್ ಕದನ
ಚೆನ್ನೈ: ಐಪಿಎಲ್ನ ಬಲಿಷ್ಠ ತಂಡಗಳಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಅಂಕಪಟ್ಟಿಯಲ್ಲಿ ಕ್ರಮವಾಗಿ 2 ಹಾಗೂ 3ನೇ ಸ್ಥಾನದಲ್ಲಿದ್ದು, ಗುರುವಾರ ಈ ಎರಡೂ ತಂಡಗಳು ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ಸೆಣೆಸಾಡಲಿವೆ.
ಅಂಕಪಟ್ಟಿಯಲ್ಲಿ ತಮ್ಮ ಉನ್ನತ ಸ್ಥಾನವನ್ನು ಮುಂದುವರಿಸಲು ಹವಣಿಸುತ್ತಿರುವ ಇತ್ತಂಡಗಳು ಉತ್ತಮ ಪ್ರದರ್ಶನ ನೀಡುವ ಆತ್ಮ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿವೆ.
ಕಳೆದ ಮೂರು ಪಂದ್ಯಗಳಲ್ಲಿ ಗೆಲುವಿನ ರುಚಿ ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ತಮ್ಮ ಜಯದ ಹಾದಿಯನ್ನು ಮುಂದುವರಿಸುವ ಬಗ್ಗೆ ಚಿಂತನೆ ನಡೆಸಿದೆ. ಇತ್ತ ಸನ್ರೈಸರ್ಸ್ ಸಹ ತಮ್ಮ ಕಳೆದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ತಮ್ಮ ಗೆಲುವಿನ ಯಾತ್ರೆ ಮುಂದುವರಿಸುವ ವಿಶ್ವಾಸ ಹೊಂದಿದೆ.
ಈ ಎರಡೂ ತಂಡಗಳ ಬಲಾಬಲವನ್ನು ನೋಡುವುದಾದರೆ ಎಂದಿನಂತೆ ಚೆನ್ನೈ ಸೂಪರ್ ಕಿಂಗ್ಸ್ ಮೇಲುಗೈ ಸಾಧಿಸಿದೆ. ಚೆನ್ನೈ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಮೈಕ್ ಹಸ್ಸಿ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲುತ್ತಿರುವುದು ತಂಡ ಉತ್ತಮ ಇನಿಂಗ್ಸ್ ಕಟ್ಟಲು ನೆರವಾಗುತ್ತಿದ್ದಾರೆ. ಅಲ್ಲದೇ ಕಳೆದ ಪಂದ್ಯದಲ್ಲಿ ಅರ್ಧ ಶತಕ ದಾಖಲಿಸುವ ಮೂಲಕ ರೈನಾ ಫಾರ್ಮ್ಗೆ ಮರಳಿರುವ ಸೂಚನೆ ನೀಡಿರುವುದು ತಂಡಕ್ಕೆ ನೆಮ್ಮದಿ ತಂದಿದೆ. ಅಲ್ಲದೆ ನಾಯಕ ಧೋನಿ, ಬದ್ರಿನಾಥ್, ರವೀಂದ್ರ ಜಡೇಜಾ, ಬ್ರಾವೊ ಬ್ಯಾಟ್ಗಳಿಂದ ಸರಾಗವಾಗಿ ರನ್ ಹರಿಯುತ್ತಿದೆ. ಅಲ್ಲದೆ ಬೌಲಿಂಗ್ನಲ್ಲಿ ಮೊಹಿತ್ ಶರ್ಮಾ, ಕ್ರಿಸ್ ಮೊರಿಸ್, ಬ್ರಾವೊ, ಅಶ್ವಿನ್, ಸಂಘಟಿತ ದಾಳಿ ನಡೆಸುತ್ತಿದ್ದಾರೆ. ಅಲ್ಲದೆ ಚೆನ್ನೈ ತಂಡ ತವರಿನ ಅಂಗಳದ ಲಾಭ ಪಡೆಯಲಿದೆ.
ಇನ್ನು ಸನ್ರೈಸರ್ಸ್ ತಂಡದ ಬಲಾಬಲವನ್ನು ನೋಡಿದರೆ ತಂಡ ಇದುವರೆಗು ಬೌಲರ್ಗಳು ನೀಡಿರುವ ಉತ್ತಮ ಪ್ರದರ್ಶನದಿಂದ ಎಂಬುದರಲ್ಲಿ ಅನುಮಾನವಿಲ್ಲ. ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಕೆಮರೂನ್ ವೈಟ್, ಡಿ ಕಾಕ್, ತಿಸರಾ ಪೆರೇರಾ, ಪಾರ್ಥಿವ್ ಪಟೇಲ್ ತಂಡದ ಆಧಾರವಾಗಿದ್ದು, ಪೆರೇರಾ ಹೊರತು ಪಡಿಸಿ ಉಳಿದ ಯಾವುದೇ ಬ್ಯಾಟ್ಸ್ಮನ್ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಇದು ತಂಡದ ಪ್ರಮುಖ ನ್ಯೂನತೆಯಾಗಿದೆ. ಆದರೆ ಬೌಲಿಂಗ್ ವಿಭಾಗದಲ್ಲಿ ಡೇಲ್ ಸ್ಟೇಯ್ನ್ ಹಾಗೂ ಅಮಿತ್ ಮಿಶ್ರಾ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಇವರಿಗೆ ಇಶಾಂತ್ ಶರ್ಮಾ, ಪೆರೇರಾ ತಕ್ಕಸಾಥ್ ನೀಡುತ್ತಿದ್ದಾರೆ.
ಸನ್ರೈಸರ್ಸ್
ಕುಮಾರ ಸಂಗಕ್ಕಾರ, ಅಕ್ಷತ್ ರೆಡ್ಡಿ, ಅಮಿತ್ ಮಿಶ್ರಾ, ಆನಂದ್ ರಾಜನ್, ಅಂಕಿತ್ ಶರ್ಮಾ, ಆಶೀಶ್ ರೆಡ್ಡಿ, ಬಿಪ್ಲಾಪ್ ಸಮಾಂತ್ರೇ, ಕೆಮೆರೂನ್ ವೈಟ್, ಕ್ರಿಸ್ ಲಿನ್, ಕ್ಲಿಂಟ್ ಮೆಕೇ, ಡೇಲ್ ಸ್ಟೇನ್, ಡರೇನ್ ಸಾಮಿ, ದ್ವಾರಕ ರವಿತೇಜ, ಹನುಮ ವಿಹಾರಿ, ಇಶಾಂತ್ ಶರ್ಮಾ, ಜೆಪಿ ಡುಮಿನಿ, ಕರಣ್ ಶರ್ಮಾ, ನಥಾನ್ ಮೆಕಲಂ, ಪಾರ್ಥೀವ್ ಪಟೇಲ್, ಕ್ವಿಂಟನ್ ಡಿ ಕಾಕ್, ಸಚಿನ್ ರಾಣಾ, ಶಿಖರ್ ಧವನ್, ಸುದೀಪ್ ತ್ಯಾಗಿ, ತಲವಿವನ್ ಸರ್ಗುನನ್, ತಿಸಾರಾ ಪರೇರಾ, ವೀರ್ ಪ್ರತಾಪ್ ಸಿಂಗ್.
ಚೆನ್ನೈ ಸೂಪರ್ ಕಿಂಗ್ಸ್
ಮಹೇಂದ್ರ ಸಿಂಗ್ ಧೋನಿ, ಶ್ರೀಕಾಂತ್ ಅನಿರುದ್ಧ, ಬಾಬಾ ಅಪರಾಜಿತ್, ಆರ್.ಅಶ್ವಿನ್, ಎಸ್.ಬದ್ರಿನಾಥ್, ಡ್ವೇನ್ ಬ್ರಾವೊ, ಅಖಿಲ ಧನಂಜಯ, ಡುಪ್ಲಿಸೆಸ್, ಜಾಸನ್ ಹೊಲ್ಡರ್, ಬೆನ್ ಹಿಲ್ಫಾನಾಸ್, ಮೈಕ್ ಹಸ್ಸಿ, ಇಮ್ತಿಯಾಜ್ ಅಹಮದ್, ರವೀಂದ್ರ ಜಡೇಜಾ, ಶಡಬ್ ಜಕಾಟಿ, ಆರ್.ಕಾರ್ತಿಕೇಯನ್, ನುವಾನ್ ಕುಲಸೇಕರ, ಬೆನ್ ಲಾಹ್ಲಿನ್, ರೋನಿತ್ ಮೋರೆ, ಆಲ್ಬಿ ಮಾರ್ಕೆಲ್, ಕ್ರಿಸ್ ಮೊರಿಸ್, ಡರ್ಕ್ ನ್ಯಾನಿಸ್, ಸುರೇಶ್ ರೈನಾ, ಅಂಕಿತ್ ರಜ್ಪೂತ್, ವೃದ್ಧಿಮಾನ್ ಸಾಹಾ, ವಿಜಯ್ ಶಂಕರ್, ಮೊಹಿತ್ ಶರ್ಮಾ, ಮುರಳಿ ವಿಜಯ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

