'ನಾಯಕತ್ವ ಬಿಟ್ಟಿದ್ದು ಪಾಂಟಿಂಗ್ ನಿರ್ಧಾರ'
ಕೋಲ್ಕತಾ: ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಹಿಂದೆ ಸರಿದಿರುವುದು ರಿಕಿ ಪಾಂಟಿಂಗ್ ಅವರ ವೈಯಕ್ತಿಕ ನಿರ್ಧಾರ ಎಂದು ಕೋಲ್ಕತಾ ವಿರುದ್ಧ ತಂಡದ ನಾಯಕತ್ವ ನಿಭಾಯಿಸಿದ ರೋಹಿತ್ ಶರ್ಮಾ ಹೇಳಿದ್ದಾರೆ.
ಪಾಂಟಿಂಗ್ ನಾಯಕತ್ವದಿಂದ ಹಿಂದೆ ಸರಿದಿರುವುದು ಐಪಿಎಲ್ನಲ್ಲಿ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ಫಾರ್ಮ್ಗೆ ಮರಳಲು ಒದ್ದಾಡುತ್ತಿರುವ ಪಾಂಟಿಂಗ್ ಕೋಲ್ಕತಾ ವಿರುದ್ಧದ ಪಂದ್ಯದಲ್ಲಿ ತಂಡದಿಂದ ಹೊರಗುಳಿಯುವ ಮೂಲಕ, ತಮ್ಮದೇ ದೇಶದ ಇನ್ನೊಬ್ಬ ಆಟಗಾರ ವೇಗಿ ಮಿಚೆಲ್ ಜಾನ್ಸನ್ ಅವರಿಗೆ ತಂಡದಲ್ಲಿ ಸ್ಥಾನ ಒದಗಿಸಿಕೊಟ್ಟಿದ್ದರು. 'ಇದು ಸಂಪೂರ , ವಾಗಿ ಪಾಂಟಿಂಗ್ ವೈಯಕ್ತಿಕ ವಿಚಾರ. ಇಂತಹ ನಿರ್ಧಾರ ತೆಗೆದುಕೊಳ್ಳಲು ಗಟ್ಟಿ ಹೃದಯ ಮತ್ತು ಗಡುಸತನ ಬೇಕು. ನಾವು ಸೂಕ್ತ ಜೋಡಿಯ ಹುಡುಕಾಟದಲ್ಲಿದ್ದೆವು. ಪಾಂಟಿಂಗ್ ಅವರೇ ನಾನು ಈ ಪಂದ್ಯದಲ್ಲಿ ಆಡುವುದಿಲ್ಲ ಎಂದು ಹೇಳಿದರು' ಎಂದಿದ್ದಾರೆ ರೋಹಿತ್. ಇದೇ ಮೊದಲ ಬಾರಿ ಮುಂಬೈ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದ ರೋಹಿತ್ ಶರ್ಮಾ ಕೋಲ್ಕತಾ ವಿರುದ್ಧ ಗೆಲ್ಲುವ ಮೂಲಕ ಮಿಂಚಿದ್ದಾರೆ.
ವಿರಾಟ್ ನನ್ನ ಆಟ ನೆನಪಿಸಿದರು: ರಿಚರ್ಡ್ಸ್
ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿಯಲ್ಲೇ ದೊಡ್ಡ ಗೌರವವೊಂದನ್ನು ಪಡೆದುಕೊಂಡಿದ್ದಾರೆ. ಅದು ವೆಸ್ಟ್ ಇಂಡೀಸ್ ಬ್ಯಾಟಿಂಗ್ ದಂತಕತೆ ವಿವಿಯನ್ ರಿಚರ್ಡ್ಸ್ ನೀಡಿದ ಮೆಚ್ಚುಗೆ. ಹೌದು ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡಿದ ವಿವಿಯನ್ಗೆ ತಮ್ಮ ಬ್ಯಾಟಿಂಗ್ ವೈಭವದ ನೆನಪಾಯಿತಂತೆ. 'ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವುದನ್ನು ನೋಡಬಯಸುತ್ತೇನೆ. ವಿರಾಟ್ ಬ್ಯಾಟಿಂಗ್ ಶೈಲಿ ನನ್ನ ಶೈಲಿಯಂತೆ ಇದೆ. ಕೊಹ್ಲಿ ಆಕ್ರಮಣಕಾರಿ ಮತ್ತು ಗಂಭೀರವಾದ ಬ್ಯಾಟಿಂಗ್ ಶೈಲಿಯನ್ನು ನಾನು ಮೆಚ್ಚುತ್ತೇನೆ. ಕೊಹ್ಲಿ ನನ್ನ ಬ್ಯಾಟಿಂಗ್ ಅನ್ನು ನನಗೆ ನೆನಪಿಸಿದರು' ಎಂದಿದ್ದಾರೆ ರಿಚರ್ಡ್ಸ್. 'ಕೊಹ್ಲಿ ಫಾರ್ಮ್ನಲ್ಲಿದ್ದು ಅದ್ಭುತ ಪ್ರರ್ದಶನ ನೀಡುತ್ತಿದ್ದಾರೆ. ತವರಿನ ಅಂಗಣದಲ್ಲಿ ನಿಂತಾಗಲೂ ಕೊಹ್ಲಿ ಒತ್ತಡಕ್ಕೊಳಗಾಗುವುದಿಲ್ಲ' ಇಂತಹ ಪಾಠಗಳನ್ನು ಯಾರೂ ಹೇಳಿ ಕೊಡಲು ಸಾಧ್ಯವಿಲ್ಲ' ಎಂದಿದ್ದಾರೆ ರಿಚರ್ಡ್ಸ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

