ಬ್ಯಾಡ್ಮಿಂಟನ್ ರ್ಯಾಂಕಿಂಗ್: 6ನೇ ಸ್ಥಾನದಲ್ಲಿ ಕಶ್ಯಪ್
ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಪರುಪಲ್ಲಿ ಕಶ್ಯಪ್ ಅವರು ಗುರುವಾರ ಪ್ರಕಟಗೊಂಡ ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆಯ ಪರಿಷ್ಕೃತ ರ್ಯಾಂಕಿಂಗ್ನಲ್ಲಿ 6ನೇ ಸ್ಥಾನಕ್ಕೇರಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಕಶ್ಯಪ್ ಪಡೆದ ಶ್ರೇಷ್ಠ ರ್ಯಾಂಕಿಂಗ್ ಇದಾಗಿದೆ. ಕಳೆದ ಬಾರಿ ಪ್ರಕಟಗೊಂಡಿದ್ದ ಪಟ್ಟಿಯಲ್ಲಿ ಅವರು 7ನೇ ಸ್ಥಾನದಲ್ಲಿದ್ದರು.
15ನೇ ಸ್ಥಾನಕ್ಕೆ ಸಿಂಧು: 17ರ ಪ್ರಾಯದ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು, ಅವರು ಪರಿಷ್ಕತ ರ್ಯಾಂಕಿಂಗ್ ಪಟ್ಟಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ 15ನೇ ಸ್ಥಾನ ಪಡೆದಿದ್ದಾರೆ. ಇದು ಅವರ ವೃತ್ತಿಜೀವನದಲ್ಲಿ ಅವರು ಪಡೆದಿರುವ ಶ್ರೇಷ್ಠ
ಸೈನಾ ಸ್ಥಾನ ಅಬಾಧಿತ: ವಿಶ್ವ ದ್ವಿತೀಯ ಶ್ರೇಯಾಂಕಿತೆ ಹಾಗೂ ಭಾರತದ ಅಗ್ರ ಸ್ಥಾನದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು, ಪರಿಷ್ಕೃತ ರ್ಯಾಂಕಿಂಗ್ ಪಟ್ಟಿಯಲ್ಲಿ, 2ನೇ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಇನ್ನುಳಿದಂತೆ, ಗುರುಸಾಯಿದತ್ ಹಾಗೂ ಸೌರಭ್ ವರ್ಮಾ ಎರಡು ಸ್ಥಾನಗಳ ಬಡ್ತಿ ಪಡೆದಿದ್ದು ಕ್ರಮವಾಗಿ 33 ಹಾಗೂ 36ನೇ ಸ್ಥಾನದಲ್ಲಿದ್ದಾರೆ. ಅಜಯ್ ಜಯರಾಮ್ ಅವರು 30ನೇ ಸ್ಥಾನದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

