ಕ್ರೀಡೆ

ರಾಜಸ್ತಾನ್‌ಗೆ ಸನ್ ಸುಲಭ ತುತ್ತು

Published On :

ಜೈಪುರ: ಜೇಮ್ಸ್ ಫಾಕ್ನರ್ ಅವರ ಮಾರಕ ಬೌಲಿಂಗ್ ಹಾಗೂ ಶೇನ್ ವ್ಯಾಟ್ಸ್‌ನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದಾಗಿ ರಾಜಸ್ಥಾನ ರಾಯಲ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಸನ್‌ರೈಸರ್ಸ್ ಹೈದರಾಬಾದ್ ತಂಡ ಆರಂಭಿಕ ಆಘಾತದ ನಡುವೆಯೂ 9 ವಿಕೆಟ್ ನಷ್ಟಕ್ಕೆ 144 ರನ್‌ಗಳ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ ತಂಡ 17.5 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 146 ರನ್‌ಗಳಿಸುವ ಮೂಲಕ ಗೆಲುವಿನ ದಡ ಸೇರಿತು.
ರಾಜಸ್ಥಾನ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ದ್ರಾವಿಡ್ ಹಾಗೂ ರಹಾನೆ ಕೇವಲ 7 ರನ್‌ಗಳ ಜತೆಯಾಟ ನೀಡಿದರ. ಈ ವೇಳೆ ಸ್ಟೇಯ್ನ್‌ಗೆ ವಿಕೆಟ್ ಒಪ್ಪಿಸಿದ ರಹಾನೆ 1 ರನ್ ಸಂಪಾದನೆಯೊಂದಿಗೆ ಪೆವಿಲಿಯನ್ ಸೇರಿಕೊಂಡರು. ನಂತರ ವ್ಯಾಟ್ಸನ್, ದ್ರಾವಿಡ್ ಜತೆ ಸೇರಿಕೊಂಡು 74 ರನ್‌ಗಳ ಜತೆಯಾಟ ನೀಡಿದರು. ಈ ವೇಳೆ ಪೆರೇರಾ ಎಸೆತದಲ್ಲಿ ಔಟಾದ ದ್ರಾವಿಡ್ 36 ರನ್‌ಗಳಿಸಿದ್ದರು. ಆದರೆ ಇನಿಂಗ್ಸ್‌ನ ಆರಂಭದಿಂದಲೂ ಉತ್ತಮವಾಗಿ ಬ್ಯಾಟಿಂಗ್ ಮಾಡಿದ ಶೇನ್ ವ್ಯಾಟ್ಸನ್ 53 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 4 ಸಿಕ್ಸರ್ ಸೇರಿದಂತೆ ಅಜೇಯ 98 ರನ್‌ಗಳಿಸಿದರು.
ಮಾರಕವಾದ ಫಾಕ್ನರ್: ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ಸನ್‌ರೈಸರ್ಸ್ ತಂಡ ಜೇಮ್ಸ್ ಫಾಕ್ನರ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿತು. ತಂಡ ಕೇವಲ 29 ರನ್ ಗಳಿಸುವಷ್ಟರಲ್ಲಿ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಅಕ್ಷತ್ 2, ಧವನ್ 0, ಸಂಗಕ್ಕಾರ 4, ವಿಹಾರಿ 4, ಕರಣ್ 6, ಪೆರೇರಾ 4 ರನ್‌ಗಳಿಸಿ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ಕ್ರೀಸ್‌ಗೆ ಆಗಮಿಸಿದ ಡ್ಯಾರೆನ್ ಸ್ಯಾಮಿ 60 ಹಾಗೂ ಮಿಶ್ರಾ 21 ರನ್‌ಗಳಿಸಿ ತಂಡ 100 ಗಡಿ ದಾಟಲು ಸಹಾಯ ಮಾಡಿದರು. ಅಂತಿಮವಾಗಿ ಆಶಿಶ್ 14, ಸ್ಟೇಯ್ನ್ ಸ್ಫೋಟಕ 18 ರನ್‌ಗಳಿಸಿ ತಂಡ ಉತ್ತಮ ಮೊತ್ತ ಕಲೆಹಾಕಲು ಕಾರಣರಾದರು.
ಆರಂಭದಿಂದಲೂ ಸನ್‌ರೈಸರ್ಸ್ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ ಜೇಮ್ಸ್ ಫಾಕ್ನರ್, 4 ಓವರ್‌ಗಳಲ್ಲಿ 20 ರನ್ ನೀಡಿ 5 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರು.

ಸ್ಕೋರ್ ಬೋರ್ಡ್
ಸನ್‌ರೈಸರ್ಸ್ ಹೈದರಾಬಾದ್ 144/9 (20 ಓವರ್)
ಅಕ್ಷತ್ ಸಿ ವ್ಯಾಟ್ಸನ್ ಬಿ ಚಂಡಿಲಾ 2(5), ಧವನ್ ಸಿ ರಹಾನೆ ಬಿ ಫಾಕ್ನರ್ 0(2), ಸಂಗಕ್ಕಾರ ಸಿ ವ್ಯಾಟ್ಸನ್ ಬಿ ಫಾಕ್ನರ್ 4(4), ವಿಹಾರಿ ಸಿ ಯಾಗ್ನಿಕ್ ಬಿ ಕೂಪರ್ 4(9), ಕರಣ್ ಸಿ ಹಾಡ್ಜ್ ಬಿ ಫಾಕ್ನರ್ 6(8), ಪೆರೇರಾ ಸಿ ಕೂಪರ್ ಬಿ ಚಂಡಿಲಾ 4(4), ಸಾಮಿ ಎಲ್‌ಬಿಡಬ್ಲ್ಯೂ ಬಿ ಫಾಕ್ನರ್ 60(41), ಮಿಶ್ರಾ ಸಿ ಕೂಪರ್ ಬಿ ಫಾಕ್ನರ್ 21(28), ಆಶಿಶ್ ಸಿ ರಹಾನೆ ಬಿ ಬಿನ್ನಿ 14(11), ಸ್ಟೇಯ್ನ್ ಅಜೇಯ 18(8), ಶರ್ಮಾ ಅಜೇಯ 0(0), ಇತರೆ 11.
ವಿಕೆಟ್ ಪತನ: 1-2, 2-6, 3-7, 4-15, 5-19, 6-29, 7-87, 8-114, 9-127
ಬೌಲಿಂಗ್: ಚಂಡಿಲಾ 3-0-13-2, ಫಾಕ್ನರ್ 4-0-20-5, ವ್ಯಾಟ್ಸನ್ 2-0-16-0, ಕೂಪರ್ 4-0-42-1, ತ್ರಿವೆದಿ 3-0-26-0, ಬಿನ್ನಿ 4-0-25-1

ರಾಜಸ್ಥಾನ್ ರಾಯಲ್ಸ್ 146/2 (17.5 ಓವರ್)
ದ್ರಾವಿಡ್ ಸಿ ವಿಹಾರಿ ಬಿ ಪೆರೇರಾ 36(35), ರಹಾನೆ ಸಿ ಸಂಗಕ್ಕಾರ ಬಿ ಸ್ಟೇಯ್ನ್ 1(9), ವ್ಯಾಟ್ಸನ್ ಅಜೇಯ 98(53), ಬಿನ್ನಿ ಅಜೇಯ 9(10), ಇತರೆ 2.
ವಿಕೆಟ್ ಪತನ: 1-7, 2-81
ಬೌಲಿಂಗ್: ಸ್ಟೇಯ್ನ್ 4-1-15-1, ಇಶಾಂತ್ 3-0-35-0, ಪೆರೇರಾ 4-0-34-1, ಸ್ಯಾಮಿ 3-0-17-0, ಮಿಶ್ರಾ 2-0-20-0, ಕರಣ್ 1.5-0-24-0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.