ಕುತೂಹಲದತ್ತ ಹರಾರೆ ಟೆಸ್ಟ್
ಹರಾರೆ (ಜಿಂಬಾಬ್ವೆ): ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ನಲ್ಲಿ ಎದುರಾಳಿಗಳ ಮೊದಲ ಇನಿಂಗ್ಸ್ ಅನ್ನು 391 ರನ್‌ಗಳಿಗೆ ನಿಯಂತ್ರಿಸಿದ್ದ, ಬಿಂಬಾಬ್ವೆ ತಂಡ, ಇದೀಗ ತನ್ನ ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ಕುಸಿದಿದೆ. ಬಾಂಗ್ಲಾದೇಶದ ಮೊದಲ ಇನಿಂಗ್ಸ್ ತರುವಾಯ ಜಿಂಬಾಬ್ವೆ, ಮೂರನೇ ದಿನ ತನ್ನ ಮೊದಲ ಇನಿಂಗ್ಸ್‌ನಲ್ಲಿ 282 ರನ್‌ಗಳಿಗೆ ಆಲೌಟ್ ಆಯಿತು. ಆದರೆ, ಆನಂತರ ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ ಬಾಂಗ್ಲಾ, ದಿನಾಂತ್ಯಕ್ಕೆ 5 ವಿಕೆಟ್‌ಗೆ 163 ರನ್ ಗಳಿಸಿತ್ತು.
ಜಿಂಬಾವ್ವೆಯ ಮೊದಲ ಇನಿಂಗ್ಸ್ ಅನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿರುವ ಬಾಂಗ್ಲಾ ಈಗ ತಾನೇ ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ಪಂದ್ಯ ಎತ್ತ ಸಾಗಲಿದೆ ಎಂಬುದರ ಕುರಿತಾಗಿ ಕುತೂಹಲ ಮೂಡಿಸಿದೆ.
ಪಂದ್ಯದ ಎರಡನೇ ದಿನವಾದ ಶುಕ್ರವಾರ ಪ್ರವಾಸಿ ಬಾಂಗ್ಲಾದೇಶದ ಮೊದಲ ಇನಿಂಗ್ಸ್ ಅನ್ನು 391 ರನ್‌ಗಳಿಗೆ ನಿಯಂತ್ರಿಸಿದ್ದ ಬಿಂಬಾಬ್ವೆ, ಆನಂತರ ತನ್ನ ಮೊದಲ ಇನಿಂಗ್ಸ್ ಆರಂಭಿಸಿತ್ತು. ಆದರೆ, ದಿನಾಂತ್ಯದ ಹೊತ್ತಿಗೆ ಕೇವಲ 158 ರನ್ ಪೇರಿಸುವಷ್ಟರಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಶನಿವಾರ ತನ್ನ ಇನಿಂಗ್ಸ್ ಮುಂದುವರೆಸಿದ ಅದು, 282 ಮೊತ್ತಕ್ಕೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು, 109 ರನ್‌ಗಳ ಹಿನ್ನೆಡೆಯನ್ನು ಅನುಭವಿಸಿತು. ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ, ದಿನಾಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 163 ರನ್ ಮಾಡಿತ್ತು. 272 ರನ್ ಮುನ್ನಡೆ ಹೊಂದಿರುವ ಬಾಂಗ್ಲಾಗೆ ಇನ್ನೂ 5 ವಿಕೆಟ್ ಹೊಂದಿದೆ.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ ಪ್ರಥಮ ಇನಿಂಗ್ಸ್ 391
ಜಿಂಬಾಬ್ವೆ ಪ್ರಥಮ ಇನಿಂಗ್ಸ್ 282
ಚಿಗುಂಬುರಾ 86, ಮುತುಂಬಾಮಿ 42
ಬೌಲಿಂಗ್: ರೊಬಿವುಲ್ ಇಸ್ಲಾಂ 85/5, ಸೊಹಾಗ್ ಗಾಝಿ 59/4
ಬಾಂಗ್ಲಾದೇಶ ದ್ವಿತೀಯ ಇನಿಂಗ್ಸ್ 79/4 (ಪತ್ರಿಕೆ ಮುದ್ರಣಕ್ಕೆ ಹೋಗುವಾಗ)
ಮಮಿನುಲ್ ಹಕ್ 29, ಶಕೀಬ್ ಅಲ್ ಹಸನ್ 27
ಬೌಲಿಂಗ್: ಮಸಾಕಾದ್ಜಾ 33/3, ಜಾರ್ವಿಸ್ 28/1
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

