ವೆಯ್ ಲೀ, ಇಟಾನನ್ ಮಡಿಲಿಗೆ ಪ್ರಶಸ್ತಿ
ನವದೆಹಲಿ: ಈ ಬಾರಿಯ ಇಂಡಿಯಾ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಹಾಗೂ ಮಹಿಳೆಯ ಸಿಂಗಲ್ಸ್ ವಿಭಾಗದ ಪ್ರಶಸ್ತಿಗಳು ಕ್ರಮವಾಗಿ ಮಲೇಷ್ಯಾದ ಚಾಂಗ್ ವೇಯ್ ಲೀ ಹಾಗೂ ಥಾಯ್ಲೆಂಡ್ನ ರ್ಯಾಚೆನೊಕ್ ಇಟಾನನ್ ಅವರಿಗೆ ಒಲಿದಿವೆ.
ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಮಲೇಷ್ಯಾದ ಚಾಂಗ್, ಜಪಾನ್ನ ಕೆನಿಚಿ ಟ್ಯಾಗೊ ಅವರ ವಿರುದ್ಧ 21-15, 18-21, 21-17 ಅಂತರದಲ್ಲಿ ಜಯ ಸಾಧಿಸಿದರು.
ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಇಟಾನನ್, ಜರ್ಮನಿಯ ಜ್ಯೂಲಿಯಾನೆ ಶೆಂಕ್ ಅವರನ್ನು 22-20, 21-14ರ ಅಂತರದಲ್ಲಿ ಸೋಲಿಸಿ, ಪ್ರಶಸ್ತಿಗೆ ಭಾಜನರಾದರು.
ಇಂಡೋನೇಷ್ಯಾಗೆ ಮಿಶ್ರ ಡಬಲ್ಸ್ ಪ್ರಶಸ್ತಿ
ನವದೆಹಲಿ: ಭಾನುವಾರ ನಡೆದ ಮಿಶ್ರ ಡಬಲ್ಸ್ನ ಫೈನಲ್ ಪಂದ್ಯದಲ್ಲಿ ಸೆಣೆಸಿದ ಇಂಡೋನೇಷ್ಯಾದ ಅಗ್ರ ಶ್ರೇಯಾಂಕದ ಜೋಡಿಯಾದ ಟೊಂಟೊವಿ ಅಹ್ಮದ್ ಹಾಗೂ ಲಿಲ್ಯಾನಾ ನಾಟ್ಸಿರ್, ದಕ್ಷಿಣ ಕೊರಿಯಾದ ಸುಂಗ್ ಹ್ಯೂನ್ ಹಾಗೂ ಹಾ ನಾ ಕಿಮ್ ಜೋಡಿಯನ್ನು 21-16, 21-13 ಅಂತರದಿಂದ ಮಣಿಸಿ, ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು.
ಲಿಯು- ಕ್ವಿಯುಗೆ ಪುರುಷರ ಡಬಲ್ಸ್ ಪ್ರಶಸ್ತಿ
ನವದೆಹಲಿ: ಭಾನುವಾರ ನಡೆದ ಪುರುಷರ ಡಬಲ್ಸ್ ಪ್ರಶಸ್ತಿಯ ಫೈನಲ್ ಪಂದ್ಯದಲ್ಲಿ ಜಯಗಳಿಸಿದ ಚೀನಾದ ಕ್ಸಿಯಾಂಲೊಂಗ್ ಲಿಯು ಹಾಗೂ ಝಿಹಾನ್ ಕ್ವಿಯು ಜೋಡಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಈ ಜೋಡಿ, ದಕ್ಷಿಣ ಕೊರಿಯಾದ ಸಂಗ್ ಹ್ಯೂನ್ ಕೊ ಹಾಗೂ ಯೊಂಗ್ ಡೆ ಲೀ ಜೋಡಿಯನ್ನು 22-20, 21-18 ಸೆಟ್ಗಳ ಅಂತರದಲ್ಲಿ ಸೋಲಿಸಿತು.
ಮಹಿಳಾ ಡಬಲ್ಸ್ ಗೆದ್ದಮಿಯೋಕಿ-ಸಟಾಕೊ
ನವದೆಹಲಿ: ಭಾನುವಾರ ನಡೆದ ಮಹಿಳೆಯರ ಡಬಲ್ಸ್ ಪ್ರಶಸ್ತಿಯ ಫೈನಲ್ ಪಂದ್ಯದಲ್ಲಿ ಜಯಗಳಿಸಿದ ಜಪಾನ್ನ ಮಿಯುಕಿ ಮೇಡಾ ಹಾಗೂ ಸಟೊಕೊ ಸೆಟ್ಸುನಾ ಜೋಡಿ, ಪ್ರಶಸ್ತಿಯನ್ನು ಗೆದ್ದುಕೊಂಡಿತು. ಡೆನ್ಮಾರ್ಕ್ನ ಕ್ರಿಶ್ಚಿಯಾನಾ ಪೆಡೆರ್ಸೆನ್ ಹಾಗೂ ಕಾಮಿಲ್ಲಾ ರಿಟರ್ ಜೋಡಿಯನ್ನು 12-21, 23-21 ಹಾಗೂ 21-18 ಅಂತರದಲ್ಲಿ ಮಣಿಸಿದ ಜಪಾನ್ ಜೋಡಿ ಪ್ರಶಸ್ತಿ ಪಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

